April 27, 2024

Bhavana Tv

Its Your Channel

ಕೃಷಿ ಭೂಮಿ ಉಳಿಸಿಕೊಳ್ಳಲು ೧೦ ನೇ ದಿನಕ್ಕೆ ಕಾಲಿಟ್ಟ ನಾಗಮಂಗಲ ರೈತರ ಅನಿರ್ದಿಷ್ಟ ಹೋರಾಟ.

ಮಂಡ್ಯ: ದೇಶಕ್ಕೆ ಬೆನ್ನೆಲುಬಾದ ರೈತನಿಂದ ನಾವೆಲ್ಲರೂ ಕೂಡ ಆಹಾರಕ್ಕಾಗಿ ಆಶ್ರಯಿಸಿದ್ದೇವೆ. ನಮಗೆ ಆತನು ನೀಡುವ ಆಹಾರ ಭದ್ರತೆಯಿಂದ ಜೀವನವನ್ನು ರೂಪಿಸಿಕೊಂಡಿದ್ದು ರೈತರು ಕೂಡ ತನ್ನ ತುಂಡಗಲ ಭೂಮಿಯಲ್ಲೆ ಬದುಕು ಕಟ್ಟಿಕೊಳ್ಳಬೇಕಾಗಿದೆ.

ಇಂತಹ ರೈತನಿಗೆ ಅದೇ ಭೂಮಿಯನ್ನು ಕಿತ್ತುಕೊಂಡು ಅಭಿವೃದ್ಧಿ ಎಂಬ ನೆಪ ಮಂತ್ರ ಒಡ್ಡಿ ಭೂಸ್ವಾಧೀನ ಮಾಡಿ ಕಾರ್ಖಾನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಆದೇಶ.ಹಾಗೂ ಕೆ.ಐ.ಎ.ಡಿ.ಬಿ. ಅಧಿಕಾರಿಗಳ ಅವೈಜ್ಞಾನಿಕ ಕ್ರಮ ಮತ್ತು ಬೇಜವಾಬ್ದಾರಿ ರಾಜಕಾರಣಿಗಳು. ಅಧಿಕಾರಿಗಳ ವಿರುದ್ಧ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿ ರೈತರ ಅನಿರ್ದಿಷ್ಟ ಅವಧಿಯ ಧರಣಿ ೧೦ ನೇ ದಿನಕ್ಕೆ ಕಾಲಿಟ್ಟಿದ್ದು ಹಲವು ರೈತರ ಪರ ಸಂಘಟನೆಗಳ ಬೆಂಬಲ ವ್ಯಕ್ತವಾಗುತ್ತಿದೆ.

ಈ ಯೋಜನೆಯಿಂದ ಹತ್ತಾರು ಹಳ್ಳಿ ಕೆರೆ-ಕಟ್ಟೆ ಪ್ರದೇಶಗಳು ಮುಚ್ಚಲ್ಪಡುವ ಆತಂಕವಿದ್ದು ಬಹುಮುಖ್ಯವಾಗಿ ಕೃಷಿ ಚಟುವಟಿಕೆ ಜಮೀನಿನಲ್ಲಿ ಜೀವನ ನಡೆಸುತ್ತಿರುವ ರೈತರು ಬೀದಿಗೆ ಬೀಳಲಿದ್ದಾರೆ ಎಂದು ವಾದಿಸುತ್ತಿರುವ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

ಈ ಸಂಬAಧವಾಗಿ ನ್ಯಾಯ ದೊರಕದ ಕಾರಣ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು ಇಂದಿಗೆ ೧೦.ನೇ ಕಾಲಿಟ್ಟಿದೆ ಏನಾದರಾಗಲಿ ಪ್ರಾಣ ಬಿಟ್ಟಾವೆ ಹೊರತು ಕೃಷಿ ಜಮೀನನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೋರಾಟಕ್ಕೆ ನಿಂತಿದ್ದಾರೆ.

error: