May 20, 2024

Bhavana Tv

Its Your Channel

ಮಾನವ ಹಕ್ಕುಗಳ ದಿನದ ಪ್ರಯುಕ್ತ ವಿವಿಧ ಜಾಗೃತಿ ಕುರಿತು ಕಾನೂನು ಕಾರ್ಯಕ್ರಮ

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ದಿನ, ಗ್ರಾಹಕರ ಹಕ್ಕುಗಳ ಸಂರಕ್ಷಣೆ, ಹೆಚ್.ಐ.ವಿ ಏಡ್ಸ್ ಜಾಗೃತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು…

ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶರಾದ ಬಸವರಾಜಪ್ಪ ತುಳಸಪ್ಪನಾಯಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಹೆಚ್.ಐ.ವಿ ಪೀಡಿತರು ನಮ್ಮಂತೆಯೇ ಮನುಷ್ಯರಾಗಿರುವುದರಿಂದ ಅವರನ್ನು ಕೀಳಾಗಿ ಕಾಣದೇ ಎಲ್ಲರಂತೆ ಸಂತೋಷದಿoದ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಆದ್ದರಿಂದ ಮಾನವನ ಹಕ್ಕುಗಳಿಗೆ ಧಕ್ಕೆ ಉಂಟಾಗದoತೆ ಎಚ್ಚರ ವಹಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿರುವುದರಿಂದ ಬಡವ ಶ್ರೀಮಂತ ಎಂಬ ಬೇಧಭಾವ ಇಲ್ಲದಂತೆ ಬಡವರೂ ಕೂಡ ಉಚಿತವಾಗಿ ಕಾನೂನು ನೆರವನ್ನು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ನ್ಯಾಯಾಧೀಶರಾದ ಬಸವರಾಜಪ್ಪ ಕರೆ ನೀಡಿದರು ..

ವಕೀಲರ ಸಂಘದ ಉಪಾಧ್ಯಕ್ಷರಾದ ಬಿ.ಕೆ.ಯೋಗೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನವ ಹಕ್ಕುಗಳು ಹಾಗೂ ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿ ಜಾಗೃತಿ ಮೂಡಿಸಿದರು.

ಕಿಕ್ಕೇರಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೌನ್ಸಿಲರ್ ವಿಂಧ್ಯ ಮಾತನಾಡಿ ಹೆಚ್.ಐ.ವಿ ವೈರಾಣುವಿನಿಂದ ಹರಡುವ ರೋಗವಾಗಿದೆ. ಆತ್ಮವಿಶ್ವಾಸದಿಂದ ನಿಯಮಿತವಾಗಿ ಚಿಕಿತ್ಸೆ ಪಡೆದುಕೊಂಡರೆ ಹೆಚ್.ಐ.ವಿ ರೋಗವನ್ನು ಗುಣಪಡಿಸಬಹುದಾಗಿದೆ. ಹೆಚ್.ಐ.ವಿ ಮತ್ತು ಏಡ್ಸ್ ಬೇರೆ ಬೇರೆ ಖಾಯಿಲೆಗಳಾಗಿವೆ. ಶ್ರೀರಾಮಚಂದ್ರನAತೆ ಏಕಪತ್ನೀ ವ್ರತಸ್ಥರಾಗಿ ಸುರಕ್ಷಿತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಏಡ್ಸ್ ನಮ್ಮ ಜೀವನಕ್ಕೆ ಬರದಂತೆ ತಡೆಯಬಹುದಾಗಿದೆ ಅಸುರಕ್ಷಿತ ಲೈಂಗಿಕ ಚಟುವಟಿಕೆ ನಡೆಸಿದರೆ ಏಡ್ಸ್ ರೋಗ ಬರುವುದು ನಿಶ್ಚಿತವಾಗಿದೆ. ಆದ್ದರಿಂದ ಎಚ್ಚರಿಕೆಯಿಂದ ನಿಯಮಿತವಾಗಿ ಆಹಾರ ಪದಾರ್ಥಗಳನ್ನು ಸೇವಿಸಿ ಶಿಸ್ತು ಬದ್ಧ ಜೀವನ ನಡೆಸಿ ರೋಗರುಜಿನಗಳು ಹರಡದಂತೆ ಎಚ್ಚರ ವಹಿಸಬೇಕು ಎಂದು ವಿಂಧ್ಯಾ ಕರೆ ನೀಡಿದರು ..

ಈ ಸಂದರ್ಭದಲ್ಲಿ ವಕೀಲರ ಸಂಘದ ಖಜಾಂಚಿ ಇಂದ್ರಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ತಾಲ್ಲೂಕು ಆರೋಗ್ಯಶಿಕ್ಷಣಾಧಿಕಾರಿ ಶಿವಮ್ಮ, ಹಿರಿಯ ಆರೋಗ್ಯಪರಿವೀಕ್ಷಕ ಶೀಳನೆರೆ ಸತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: