May 18, 2024

Bhavana Tv

Its Your Channel

ಶಿಕ್ಷಕರ ಚುನಾವಣೆಯಲ್ಲಿ ೩೬ ಮತಗಳು ತಿರಸ್ಕೃತ, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾದ ಪಾಠ ಮಾಡೋ ಮೇಷ್ಟ್ರುಗಳು

ಮಂಡ್ಯ: ಗುರುವಿನ ಸ್ಥಾನಕ್ಕೆ ಸಮಾಜದಲ್ಲಿ ಉನ್ನತ ಮಟ್ಟದ ಗೌರವ ನೀಡುತ್ತಾರೆ ಅದೇ ಗುರು ತಪ್ಪೆಸಗಿದರೆ ಸಮಾಜವನ್ನು ಹೇಗೆ ತಿದ್ದತ್ತಾರೆ ಎಂಬುದೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ

ಕಾರಣವಿಷ್ಟೆ ನಾಗಮಂಗಲ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ಚುನಾವಣೆಯು ಮಂಗಳವಾರ ನಡೆದಿದ್ದು ೫೮೭ ಮತಗಳು ನಡೆದಿದ್ದವು ಆದರೆ ೩೬ ಮಂದಿ ಪ್ರಬುದ್ಧ ಶಿಕ್ಷಕರ ಮತಗಳು ತಿರಸ್ಕೃತಗೊಂಡಿವೆ

ಚುನಾವಣೆಯಲ್ಲಿ ಮತಚಲಾಯಿಸಲು ಮತಪತ್ರ ಹಾಗೂ ಮುದ್ರಾ ಶೀಲನ್ನು ಪ್ರತಿಯೊಬ್ಬರಿಗೂ ಕೂಡ ಗುಪ್ತ ಮತದಾನ ಮಾಡಲು ನೀಡಿರುತ್ತಾರೆ ಸ್ಪರ್ಧೆಯಲ್ಲಿದ್ದ ೧೨ ಮಂದಿಗೆ ಮಾತ್ರ ಮತ ಚಲಾಯಿಸ ಬೇಕಾಗಿತ್ತು ಯಾಕೋ ಕಾಣೆ ೩೬ ತಿರಸ್ಕೃತ ಮತದಾರರು ಕೂಡ ಹೆಚ್ಚಿನ ಮತಗಳನ್ನು ನೀಡಿರುವುದೇ ಮತ ತಿರಸ್ಕಾರ ವಾಗಲು ಕಾರಣವಾಗಿದೆ

ತಮ್ಮ ಸಂಘದ ನಡೆದ ಒಂದು ಸಾಮಾನ್ಯ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ತಿಳಿಯದ ಶಿಕ್ಷಕರು ಸಮಾಜವನ್ನು ಹೇಗೆ ತಿದ್ದುತ್ತಾರೆ ಎಂಬುವುದು ಯಕ್ಷಪ್ರಶ್ನೆಯಾಗಿದೆ?
ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಚುನಾವಣಾ ಆಯೋಗ ಯಾವುದೇ ಚುನಾವಣೆ ನಡೆಸಿದರೂ ಕೂಡ ಪ್ರಮುಖವಾಗಿ ಶಿಕ್ಷಣ ಇಲಾಖೆಯನ್ನು ಆಶ್ರಯಿಸುತ್ತದೆ ಸ್ಥಳೀಯ ಸಂಸ್ಥೆ. ವಿಧಾನಸಭೆ. ಸಂಸದರು ಆಯ್ಕೆ ಇನ್ನಿತರ ಚುನಾವಣೆಗಳಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಜೊತೆಗೆ ಸಾರ್ವಜನಿಕರು ಮತ್ತು ರೈತಾಪಿ ವರ್ಗದವರಿಗೆ ಪಾರದರ್ಶಕ ಮತದಾನಕ್ಕೆ ರೀತಿ-ರಿವಾಜುಗಳನ್ನು ಹೇಳಿಕೊಡುವ ಇಂಥ ಶಿಕ್ಷಕರ ೩೬ ಮತಗಳು ತಿರಸ್ಕೃತಗೊಂಡು ಇರುವುದು ಹಾಸ್ಯಸ್ಪದವಾಗಿದೆ

ನಾಗಮಂಗಲ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ಐದು ವರ್ಷದ ಅವಧಿಗೆ ೧೨ ನಿರ್ದೇಶಕರ ಸ್ಥಾನಗಳಿಗೆ ೮ ಜನ ಪುರುಷರು ಅಭ್ಯರ್ಥಿಗಳು ನಾಲ್ಕು ಜನ ಮಹಿಳಾ ಅಭ್ಯರ್ಥಿಗಳು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಕಳೆದ ಬಾರಿಯ ಚುನಾವಣೆಯಂತೆ ಜೆ.ವೈ. ಮಂಜುನಾಥ್ ತಂಡವು ಈ ಬಾರಿಯೂ ಆಯ್ಕೆ ಆಗಿದ್ದಾರೆ

ಪರಿಷ್ಕೃತ ಮತದಾರರು ೫೯೨. ಚಲಾವಣೆಗೊಂಡ ಮತದಾನ ೫೮೭. ತಿರಸ್ಕೃತಗೊಂಡ ಮತ ೩೬. ಕಳೆದ ಬಾರಿಯಂತೆ ತನ್ನ ತಂಡವೇ ಈ ಬಾರಿಯೂ ಜಯಭೇರಿ ಬಾರಿಸಿದ
ಜೆ.ವೈ.ಮಂಜುನಾಥ.೪೫೩.ಎ.ಎo.ಜೈಸ್ವಾಮಿ. ೩೮೮ , ಆರೀಫ್ ಪಾಷಾ,೨೮೨ ಮಂಜೇಗೌಡಬಿ.ಕೆ,೩೬೯ ಲಕ್ಷ್ಮಣಗೌಡಎಂ.ಜಅರ್,೩೧೪ ರವಿಶಂಕರ್ ಟಿ.ಅರ್,೩೪೦ ರುದ್ರೇಶ್.ಕೆ,೩೩೬ ಶಿವರಾಜ್,ಎಂ.ಕೆ.೩೦೩ ಫಾತೀಮಾ ಜಹರಾ.೩೬೧, ಕೆಂಪಮ್ಮ,ಬಿ.ಎಸ್,೩೨೫.ಶಾರದಾoಬ.ಅರ್.೩೬೯. ಸುನೀತಾ,ಕೆ.ಅರ್.೩೮೧ ರವರನ್ನು ಪಡೆದು ಆಯ್ಕೆ ಆಗಿರುತ್ತಾರೆ

ಪ್ರಸ್ತುತ ಯಾವುದೇ ಚುನಾವಣೆಗಳು ನಡೆದರು ಎಲ್ಲಾ ರಂಗದಲ್ಲೂ ಕೂಡ ರಾಜಕೀಯ ತಳುಕು ಹಾಕಿಕೊಂಡು ಕಣಕ್ಕಿಳಿಯುತ್ತಾರೆ ಒಂದು ತಂಡವನ್ನು ಮೀರಿಸಲು ಮತ್ತೊಂದು ತಂಡ ಚುನಾವಣಾ ಕಣದಲ್ಲಿ ತಂತ್ರಗಳನ್ನು ಮಾಡಬೇಕಾಗುತ್ತದೆ ಸೋಲು-ಗೆಲುವು ಯಾರೇ ಸಾಧಿಸಿದರು ಚುನಾವಣೆಯ ನಂತರ ಯಥಾಸ್ಥಿತಿಯಂತೆ ನಡೆಯಬೇಕಾಗುತ್ತದೆ ಆದರೆ ಉತ್ತಮ ಸಮಾಜದ ಪ್ರಜ್ಞಾವಂತ ಶಿಕ್ಷಕರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಿದೆ ಇರುವುದರಿಂದ ತಮ್ಮ ಮನಸ್ಸಾಕ್ಷಿಯನ್ನು ಪ್ರಶ್ನಿಸಿ ಕೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಚಾರ ಚಾಲ್ತಿಯಲ್ಲಿ ಹರಿದಾಡುತ್ತಿದೆ

error: