April 26, 2024

Bhavana Tv

Its Your Channel

ಕೊರೋನಾ ೨ನೇ ಅಲೆ; ಕೆ.ಆರ್.ಪೇಟೆ ಪುರಸಭೆಯ ವತಿಯಿಂದ ಮಾಸ್ಕ್ ಜಾಗೃತಿ ಅಭಿಯಾನ

ಮಂಡ್ಯ: ಕೊರೋನಾ ೨ನೇ ಅಲೆಯು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪುರಸಭೆಯ ವತಿಯಿಂದ ಮಾಸ್ಕ್ ಜಾಗೃತಿ ಅಭಿಯಾನ ನಡೆಸಿ ಜನಸಾಮಾನ್ಯರಿಗೆ ದಂಡ ವಿಧಿಸಿ ಪುರಸಭೆ ವತಿಯಿಂದ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸಿ ಕೊರೋನಾ ತಡೆ ಜಾಗೃತಿ ಮೂಡಿಸಲಾಯಿತು.

ಕೆ.ಆರ್.ಪೇಟೆ ಪುರಸಭೆಯ ಸದಸ್ಯರು ಹಾಗೂ ಸಿಬ್ಬಂಧಿಗಳು ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ರಸ್ತೆಗಿಳಿದು ಜನಸಾಮಾನ್ಯರಿಗೆ ಕೊರೋನಾ ೨ನೇ ಅಲೆಯ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರದೊAದಿಗೆ ಆರೋಗ್ಯ ಕಾಪಾಡಿಕೊಂಡು ರೋಗ ರುಜಿನಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುವಂತೆ ಸತೀಶ್ ಕುಮಾರ್ ಮನವಿ ಮಾಡಿದರು..

೪೫ವರ್ಷ ತುಂಬಿರುವ ನಾಗರಿಕ ಸಮಾಜದ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡು ಕೊರೋನಾ ಬರದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ ಮುಖ್ಯಾಧಿಕಾರಿಗಳು ಮನೆಯಿಂದ ಹೊರಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹೊರಬರಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜನಸಾಮಾನ್ಯರಿಗೆ ಅರಿವು ಮೂಡಿಸಿದ ಪುರಸಭೆ ಸಿಬ್ಬಂಧಿಗಳು ಮಾಸ್ಕ್ ಧರಿಸದ ಬೈಕ್ ಸವಾರರು ಹಾಗೂ ಸಾರ್ವಜನಿಕರಿಗೆ ತಲಾ ೧೦೦ ರೂ ದಂಡ ವಿಧಿಸಿ ಉಚಿತವಾಗಿ ಮಾಸ್ಕನ್ನು ವಿತರಿಸಿ ಆರೋಗ್ಯ ಅರಿವು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಪರಿಸರ ಎಂಜಿನಿಯರ್ ಅರ್ಚನ ಆರಾಧ್ಯ, ಆರೋಗ್ಯ ಪರಿವೀಕ್ಷಕ ಅಶೋಕ್, ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್, ಶೋಭಾದಿನೇಶ್, ಶುಭಾಗಿರೀಶ್, ಇಂದ್ರಾಣಿವಿಶ್ವನಾಥ್, ಮಹಾದೇವಿನಂಜುAಡ, ಹೆಚ್.ಡಿ.ಅಶೋಕ್, ಗಿರೀಶ್, ಶಾಮಿಯಾನ ತಿಮ್ಮೇಗೌಡ, ಕೆ.ಆರ್.ರವೀಂದ್ರಬಾಬೂ ಸೇರಿದಂತೆ ಪುರಸಭೆ ಸಿಬ್ಬಂಧಿಗಳು ಮಾಸ್ಕ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: