April 27, 2024

Bhavana Tv

Its Your Channel

ಮುಳುಕಟ್ಟಮ್ಮ ದೇವಾಲಯದ ವಿವಾದಕ್ಕೆ ತೆರೆ ಎಳೆದ ತಹಶೀಲ್ದಾರ್, ದೇವಾಲಯವನ್ನು ಕಂದಾಯ ಇಲಾಖೆ ವಶಕ್ಕೆ ಪಡೆದ ತಹಶೀಲ್ದಾರ್

ಮಂಡ್ಯ: ಕಳೆದ ಕೆಲವು ತಿಂಗಳಿನಿAದ ಅರ್ಚಕರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಂದ ದೇವಾಲಯಕ್ಕೆ ಬೀಗ ಹಾಕಲಾಗಿತ್ತು.
ಅರ್ಚಕರ ಕುಟುಂಬಗಳಿಗೆ ಒಮ್ಮತಕ್ಕೆ ಬರುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು ಯಾವುದೇ ಪ್ರಯೋಜನವಾಗದ ಕಾರಣ ವಶಕ್ಕೆ ಪಡೆದ ತಹಶೀಲ್ದಾರ್ ದೇವಾಲಯಕ್ಕೆ ಮಾರ್ಚ್ ೧೬ ರಂದು ಬೀಗ ಹಾಕಲಾಗಿತ್ತು.
ಮಾರ್ಚ್ ೨೪ ರಂದು ನೋಟೀಸ್ ನೀಡಿ ೫ ಬಾರಿ ಸಂಧಾನ ಸಭೆ ನಡೆಸಿದ್ದ ತಹಶೀಲ್ದಾರ್ ಹಾಗೂ ಒಂದು ಬಾರಿ ಖುದ್ದು ಜಿಲ್ಲಾಧಿಕಾರಿಗಳೇ ಸಭೆ ನಡೆಸಿದದರು ಸಂಧಾನ ವಿಫಲವಾಗಿತ್ತು, ಅರ್ಚಕರು ಒಮ್ಮತಕ್ಕೆ ಬಾರದ ಕಾರಣ ಪೊಲೀಸ್ ಬಂದೋಬಸ್ತ್ನಲ್ಲಿ ನಾಗಮಂಗಲ ತಹಶೀಲ್ದಾರ್ ಕುಂಞ ಅಹಮದ್ ನೇತೃತ್ವದಲ್ಲಿ ದೇವಾಲಯದ ಬೀಗ ಹೊಡೆದು ದೇವಾಲಯ ಪ್ರವೇಶ ಮಾಡಲಾಗಿದೆ.
ದೇವಾಲಯದ ಪ್ರವೇಶ ದ್ವಾರ ಹಾಗೂ ದೇವಾಲಯದ ಬಾಗಿಲು ಹೊಡೆದು ತಹಶೀಲ್ದಾರ್ ಹಾಗು ಸಿಪಿಐ ಒಳ ಪ್ರವೇಶ ಮಾಡಿದರು.
ನ್ಯಾಯಾಲಯದ ಆದೇಶದವರೆಗೆ ತಾತ್ಕಾಲಿಕವಾಗಿ ಕಂದಾಯ ಇಲಾಖೆ ನೌಕರರನ್ನು ಅರ್ಚಕರನ್ನಾಗಿ ತಹಸೀಲ್ದಾರ್ ನೇಮಕಗೊಳಿಸಿದ್ದಾರೆ.
ಮೂರು ಮಂದಿ ಕಂದಾಯ ಇಲಾಖೆ ನೌಕರರನ್ನು ತಾತ್ಕಾಲಿಕವಾಗಿ ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ, ಕಂದಾಯ ಇಲಾಖೆ ವಶಕ್ಕೆ ಪಡೆಯುತ್ತಿದ್ದಂತೆ ಅರ್ಚಕರ ಕುಟುಂಬಸ್ಥರು ವಾಗ್ವಾದಕ್ಕಿಳಿದ್ದಾರೆ.ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ.

ವರದಿ ; ಚಂದ್ರಮೌಳಿ ನಾಗಮಂಗಲ

error: