May 3, 2024

Bhavana Tv

Its Your Channel

ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆ ಲಕೋಟೆಯಲ್ಲಿ ಭದ್ರವಾಗಿದ್ದ ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಫಲಿತಾಂಶ ಪ್ರಕಟಿಸಿದ ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಶಿವಮೂರ್ತಿ ಕ್ರಮಕ್ಕೆ ಕಾಂಗ್ರೆಸ್ ಸದಸ್ಯರ ಖಂಡನೆ

ಮಂಡ್ಯ: ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸದಸ್ಯೆ ಪಂಕಜಾ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಿದ್ದು ಮಧ್ಯಂತರ ತೀರ್ಪಿನ ತಕರಾರು ಅರ್ಜಿಯು ರಾಜ್ಯಉಚ್ಛನ್ಯಾಯಾಲಯದಲ್ಲಿ ಇದ್ದುದರಿಂದ ಅಧ್ಯಕ್ಷೆಯಾಗಿ ಪರಿಶಿಷ್ಠ ವರ್ಗಕ್ಕೆ ಸೇರಿದ್ದ ಮಹಾದೇವಿ ನಂಜುAಡ ಮತ್ತು ಉಪಾಧ್ಯಕ್ಷೆಯಾಗಿ ಹಿಂದುಳಿದ ಎ ವರ್ಗ ಮಹಿಳಾ ಮೀಸಲಿಗೆ ಸೇರಿದ್ದ ಗಾಯತ್ರಿಸುಬ್ರಹ್ಮಣ್ಯ ಅವಿರೋಧವಾಗಿ ಆಯ್ಕೆಯಾಗಿದ್ದರೂ ಚುನಾವಣಾಧಿಕಾರಿಗಳು ಅಕ್ಟೋಬರ್ ೩೧ರಂದು ನಡೆದಿದ್ದ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿರಲಿಲ್ಲ..

ನಿನ್ನೆ ರಾಜ್ಯ ಉಚ್ಛ ನ್ಯಾಯಾಲಯವು ರಾಜ್ಯ ಸರ್ಕಾರವು ನಿಗದಿಪಡಿಸಿರುವ ಮೀಸಲಾತಿಯು ಕ್ರಮಬದ್ಧವಾಗಿದೆ ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ತುರ್ತಾಗಿ ಪುರಸಭೆಯ ಆಡಳಿತ ಮಂಡಳಿಯ ಸದಸ್ಯರ ಸಭೆ ಕರೆದು ತಹಶೀಲ್ದಾರ್ ಶಿವಮೂರ್ತಿ ಫಲಿತಾಂಶ ಪ್ರಕಟಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀರ್ಪನ್ನು ಸ್ವಾಗತಿಸಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷೆ ಮಹಾದೇವಿ ಮತ್ತು ಉಪಾಧ್ಯಕ್ಷೆ ಗಾಯತ್ರಿ ಅವರನ್ನು ಅಭಿನಂಧಿಸಿದರೆ ಕಾಂಗ್ರೆಸ್ ಬೆಂಬಲಿತ ೯ ಸದಸ್ಯರು ತಾಲ್ಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಶಿವಮೂರ್ತಿ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ರಾಜ್ಯ ಸರ್ಕಾರದಿಂದ ಹಾಗೂ ಉಚ್ಛ ನ್ಯಾಯಾಲಯದಿಂದ ಅಧಿಕೃತ ಆದೇಶ ಬರದಿದ್ದರೂ ಏಕಾಏಕಿ ಸಭೆ ನಡೆಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದ್ದನ್ನು ಸದಸ್ಯರಾದ ಕೆ.ಸಿ.ಮಂಜುನಾಥ್, ಕೆ.ಬಿ.ಮಹೇಶ್, ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬೂ ಮತ್ತು ಹೆಚ್.ಎನ್.ಪ್ರವೀಣ್ ಖಂಡಿಸಿ ಸಭೆ ನಡವಳಿಯ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದೇ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು…

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಾದೇವಿ ಮತ್ತು ಉಪಾಧ್ಯಕ್ಷೆ ಗಾಯತ್ರಿ ಅವರನ್ನು ತಹಶೀಲ್ದಾರ್ ಎಂ.ಶಿವಮೂರ್ತಿ, ಮುಖ್ಯಾಧಿಕಾರಿ ಸತೀಶ್ ಕುಮಾರ್, ಚುನಾವಣಾ ಸಹಾಯಕರಾದ ಆಹಾರನಿರೀಕ್ಷಕ ಮಂಜುನಾಥ್ ಹೂಗುಚ್ಛ ನೀಡಿ ಅಭಿನಂದಿಸಿದರು…

ತಾಲ್ಲೂಕು ಜೆಡಿಎಸ್ ಯುವಘಟಕದ ಅಧ್ಯಕ್ಷ ಕೆ.ಎಸ್.ಸಂತೋಷ್ ಮಾತನಾಡಿ ಜೆಡಿಎಸ್ ಚಿನ್ಹೆಯಿಂದ ಆಯ್ಕೆಯಾಗಿದ್ದ ೧೧ ಸದಸ್ಯರ ಪೈಕಿ ಕೆಲವರು ಸಚಿವರೊಂದಿಗೆ ಗುರ್ತಿಸಿಕೊಂಡು ಬಿಜೆಪಿ ಬೆಂಬಲಿತ ಸದಸ್ಯರೆಂದು ಘೋಷಿಸಿಕೊಂಡಿದ್ದರೂ ವಾಸ್ತವವಾಗಿ ಅಧ್ಯಕ್ಷೆ ಉಪಾಧ್ಯಕ್ಷೆ ಇಬ್ಬರೂ ನಮ್ಮವರೇ ಆಗಿದ್ದಾರೆ ಕೆ.ಆರ್.ಪೇಟೆ ಪುರಸಭೆಯಲ್ಲಿ ಕಳೆದ ೩೨ವರ್ಷಗಳ ಕಾಂಗ್ರೆಸ್ ದುರಾಡಳಿತ ಅಂತ್ಯವಾಗಿರುವುದು ಸಂತೋಷ ತಂದಿದೆ. ಪಟ್ಟಣದ ಅಭಿವೃದ್ಧಿಗೆ ಅಧ್ಯಕ್ಷ ಉಪಾಧ್ಯಕ್ಷರು ಪಕ್ಷಾತೀತವಾಗಿ ಕೆಲಸ ಮಾಡಿ ಜನರು ಸದಸ್ಯರ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು…

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿಉಪಾಧ್ಯಕ್ಷರಾದ ಎಸ್.ಅಂಬರೀಶ್, ಕೆ.ಎಸ್.ಪ್ರಭಾಕರ್, ಮನ್ ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ಸಚಿವರ ಆಪ್ತಸಹಾಯಕರಾದ ದಯಾನಂದ, ಯುವಮುಖಂಡ ಪ್ರವೀಣ್ ಕುಮಾರ್, ಅರುಣ್ ಕುಮಾರ್, ಕೆ.ವಿನೋದ್, ವಕೀಲ ಪ್ರವೀಣ್ ಕುಮಾರ್ ಸೇರಿದಂತೆ ಪುರಸಭೆ ಸದಸ್ಯರಾದ ಹೆಚ್.ಆರ್.ಲೋಕೇಶ್, ಶಾಮಿಯಾನ ತಿಮ್ಮೇಗೌಡ, ಹೆಚ್.ಡಿ.ಅಶೋಕ್, ಕೆ.ಎಸ್.ಪ್ರಮೋದ್, ಪದ್ಮರಾಜು, ಶುಭಾಗಿರೀಶ್, ಶೋಭಾದಿನೇಶ್, ಕಲ್ಪನಾ ದೇವರಾಜು, ಇಂದ್ರಾಣಿವಿಶ್ವನಾಥ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.


ವರದಿ
: ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ

error: