April 27, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ೧೨ ಜನರಿಗೆ ಕೊರೋನಾ ಸೋಂಕು; ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ೬ ಮನೆಗಳನ್ನು ಸೀಲ್ ಡೌನ್ ಮಾಡಿದ ಪುರಸಭೆ ಆರೋಗ್ಯ ವಿಭಾಗದ ಸಿಬ್ಬಂದಿಗಳು

ಮOಡ್ಯ: ಕೃಷ್ಣರಾಜಪೇಟೆ ಪುರಸಭೆ ವ್ಯಾಪ್ತಿಯ ಜಯನಗರ ಬಡಾವಣೆಯಲ್ಲಿ ೧೨ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರು ಮನೆಗಳನ್ನು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಪುರಸಭೆಯ ಸಿಬ್ಬಂಧಿಗಳು ಸೀಲ್ ಡೌನ್ ಮಾಡಿದರು…

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ದಂಪತಿಗಳು, ನಿವೃತ್ತ ಶಿಕ್ಷಕ ಮಹದೇವಪ್ಪ ಸೇರಿದಂತೆ ೧೨ ಜನರಿಗೆ ಕೊರೋನಾ ಸೋಂಕು ತಗುಲಿದ್ದು ಜಯನಗರ ಬಡಾವಣೆಯ ಆರು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಹೋಮ್ ಐಸೊಲೇಷನ್ ಆಗಿರುವವರು ಮನೆಯೊಳಗೆ ಇದ್ದುಕೊಂಡು ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಬೇಕು. ಸೀಲ್ ಡೌನ್ ಮಾಡಿರುವ ಮನೆಯಲ್ಲಿರುವವರು ಮನೆಯಿಂದ ಹೊರಬಂದು ಎಲ್ಲೆಂದರಲ್ಲಿ ಅಡ್ಡಾಡಿ ಸೋಂಕನ್ನು ಇತರರಿಗೆ ಹರಡದೇ ಮನೆಯಲ್ಲೇ ಇರಬೇಕು. ಅಗತ್ಯ ವಸ್ತುಗಳು ಹಾಗೂ ಔಷಧಗಳು ಬೇಕಾದರೆ ಪುರಸಭಾ ಕಾರ್ಯಾಲಯಕ್ಕೆ ಇಲ್ಲವೇ ಆರೋಗ್ಯ ಪರಿವೀಕ್ಷಕರಿಗೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು..

ಮನೆಗಳನ್ನು ಸೀಲ್ ಡೌನ್ ಮಾಡುವ ಸಂದರ್ಭದಲ್ಲಿ ಪುರಸಭೆಯ ವ್ಯವಸ್ಥಾಪಕ ಸೋಮಶೇಖರ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ, ಕಂದಾಯಾಧಿಕಾರಿ ರವಿಕುಮಾರ್, ರಾಜು, ಆರೋಗ್ಯಪರಿವೀಕ್ಷಕ ಅಶೋಕ್, ಸ್ವರ್ಣಜಯಂತಿ ಶಹರಿರೋಜ್ಗಾರ್ ಯೋಜನಾಧಿಕಾರಿ ಭಾರತಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಟೆಮAಜು, ಮೇಸ್ತ್ರಿ ಮುತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: