April 27, 2024

Bhavana Tv

Its Your Channel

ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿದ್ದ ವಾಹನ ಸವಾರರಿಗೆ ದಂಡ

ಮಳವಳ್ಳಿ : ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿದ್ದ ವಾಹನ ಸವಾರರಿಗೆ ತಹಸೀಲ್ದಾರ್ ಎಂ. ವಿಜಯಣ್ಣ ನೇತೃತ್ವದಲ್ಲಿ ದಂಡ ವಿಧಿಸಿ ಜಾಗೃತಿ ಮೂಡಿಸಲಾಯಿತು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು ಆದರೂ ಕೂಡ ಎಚ್ಚೆತ್ತುಕೊಳ್ಳದ ಜನರು ತಮ್ಮ ಬೇಜವಾಬ್ದಾರಿ ಮುಂದುವರೆಸಿದ್ದರು. ಇದೇ ಹಿನ್ನೆಲೆಯಲ್ಲಿ ರೋಡ್‌ಗೆ ಇಳಿದ ತಹಸೀಲ್ದಾರ್‌ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು. ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಕೋವಿಡ್ ನಿಯಮದ ಬಗ್ಗೆ ಪಾಠ ಕೇಳಿಕೊಟ್ಟರು. ಪೊಲೀಸ್ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಗಳಿoದ ದಂಡ ವಸೂಲಿ ಮಾಡಿಸಿದರು.


ಪುರಸಭೆ ಪ್ರಭಾರ ಮುಖ್ಯಾಧಿ ಕಾರಿ ಚಂದ್ರಶೇಖರ್, ತಾ.ಪಂ. ಇಓ ಬಿ.ಎಸ್.ಸತೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುoಡೇಗೌಡ, ಇನ್ಸ್ಪೇಕ್ಟರ್ ಎ.ಕೆ.ರಾಜೇಶ್, ಪಿಎಸ್‌ಐ ಹನುಮಂತ ಕುಮಾರ್, ಗ್ರಾಮಾಂತರ ಪಿಎಸ್‌ಐ ಡಿ.ರವಿಕುಮಾರ್ ಸೇರಿದಂತೆ ಹಲವರು ಇದ್ದರು.

ವರದಿ; ಮಲ್ಲಿಕಾರ್ಜುನಸ್ವಾಮಿ
ಮಳವಳ್ಳಿ ತಾಲೂಕು ವರದಿಗಾರರು, ಮಂಡ್ಯ ಜಿಲ್ಲೆ

error: