April 26, 2024

Bhavana Tv

Its Your Channel

ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುoಡ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣಾ ಸಮಿತಿಯ ಸಭೆ

ಕೆ.ಆರ್.ಪೇಟೆ: ಪಟ್ಟಣದ ಶಹರಿ ರೋಜ್‌ಗಾರ್ ಭವನದಲ್ಲಿ ಪುರಸಭೆಯ ಅಧ್ಯಕ್ಷರಾದ ಮಹಾದೇವಿನಂಜುoಡ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣಾ ಸಮಿತಿಯ ಸಭೆಯು ನಡೆಯಿತು.
ಪಟ್ಟಣದ ಸ್ವಚ್ಚತೆಗೆ ಪ್ರಥಮ ಅಧ್ಯತೆ ನೀಡಬೇಕು. ಶುದ್ದ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸಬೇಕು. ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಮನೆಯಲ್ಲಿಯೇ ಇರುವ ಎಲ್ಲಾ ವಾರ್ಡುಗಳ ಕಾರ್ಮಿಕರು ಹಾಗೂ ಬಡವರಿಗೆ ಪುರಸಭೆಯ ವತಿಯಿಂದ ಪುಢ್ ಕಿಟ್ ನೀಡಲು ಕ್ರಮ ತೆಗೆದುಕೊಳ್ಳಬೇಕು ಈ ಮೂಲಕ ಬಡವರಿಗೆ ಊಟಕ್ಕೆ ತೊಂದರೆಯಾಗದoತೆ ನೋಡಿಕೊಳ್ಳಬೇಕು ಎಂದು ಪುರಸಭಾ ಸದಸ್ಯರು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳನ್ನು ಒತ್ತಾಯ ಮಾಡಿದರು.


ಪುರಸಭೆಯ ಸದಸ್ಯರನ್ನು ಒಳಗೊಂಡAತೆ ಕೋವಿಡ್ ನಿಯಂತ್ರಣಾ ಸಮಿತಿ ರಚನೆ ಮಾಡಿ ಕೋವಿಡ್ ನಿಯಂತ್ರಣ ಮಾಡಲು ಪುರಸಭೆಯ ಎಲ್ಲಾ ಸದಸ್ಯರು ಸಹಕಾರ ನೀಡಬೇಕು. ತಮ್ಮ ವಾರ್ಡ್ ಗಳಲ್ಲಿರುವ ಕೋವಿಡ್ ಸೋಂಕಿತರ ಬಗ್ಗೆ ಮಾಹಿತಿ ನೀಡಬೇಕು. ಕೋವಿಡ್ ಪಾಸಿಟೀವ್ ಬಂದಿರುವವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆಗೆ ದಾಖಲು ಮಾಡುವಂತೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದಿದ್ದರೆ ಹೋಂ ಐಷುಲೇಷನ್ ಇರಲು ಅವಕಾಶ ಮಾಡಿಕೊಡಬಾರದು. ಈ ಮೂಲಕ ಕೋವಿಡ್ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಬೇಕು ಈ ಮೂಲಕ ಆರೋಗ್ಯವಂತ ಪಟ್ಟಣದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪುರಸಭೆಯ ಅಧ್ಯಕ್ಷೆ ಮಹಾದೇವಿ ನಂಜುAಡ ಮನವಿ ಮಾಡಿದರು.
ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರು ಮಾತನಾಡಿ ಪಟ್ಟಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಹೋಗಲೇಬೇಕೆಂದರೆ ಕಡ್ಡಾಯವಾಗಿ ಮಾಸ್ಕು ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಕೊಳ್ಳಬೇಕು. ಪುರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಕರಪತ್ರ ಮುದ್ರಿಸಿ ನಿಮ್ಮ ಮತದಾರರಿಗೆ ಕರೋನಾ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಚುನಾವಣಾ ಸಮಯದಲ್ಲಿ ತಾವು ಗೆಲ್ಲಬೇಕೆಂದು ಹಾಕುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಕೊರೋನಾ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಹಾಕಬೇಕು ಈ ಮೂಲಕ ನಿಮ್ಮನ್ನು ಗೆಲ್ಲುಸಿದ ಮತದಾರರ ಆರೋಗ್ಯ ಕಾಪಾಡಲು ಕೈಜೋಡಿಸಬೇಕು ಎಂದು ಪುರಸಭೆಯ ಕೌನ್ಸಿಲರ್ಸ್ ಗಳಲ್ಲಿ ಮನವಿ ಮಾಡಿದರು.
ಮುಖ್ಯಾಧಿಕಾರಿ ಸತೀಶ್ ಕುಮಾರ್ ಸಭೆಗೆ ಅಗತ್ಯ ಮಾಹಿತಿ ನೀಡಿ ಆರೋಗ್ಯವಂತ ಪಟ್ಟಣ ನಿರ್ಮಾಣಕ್ಕೆ ಎಲ್ಲಾ ಪುರಸಭಾ ಸದಸ್ಯರ ಸಹಕಾರ ಅಗತ್ಯವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಬಡವರಿಗೆ ಫುಡ್ ಕಿಟ್ ನೀಡಲು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಪುರಸಭೆಯ ಹಿರಿಯ ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಮಕುಮಾರ್, ಕೆ.ಬಿ.ಮಹೇಶ್ ಕುಮಾರ್, ಕೆ.ಆರ್.ರವೀಂದ್ರಬಾಬು, ಬಿ.ಜಿ. ಗಿರೀಶ್, ಹೆಚ್.ಎನ್.ಪ್ರವೀಣ್, ಖಮ್ಮರ್ ಬೇಗಂ, ತಿಮ್ಮೇಗೌಡ, ದಿನೇಶ್, ಹೆಚ್.ಡಿ.ಅಶೋಕ್, ವಿಶ್ವನಾಥ್, ಕೇಸರಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: