July 26, 2021

Bhavana Tv

Its Your Channel

ಆಶಾ ಕಾರ್ಯಕರ್ತರಿಗೆ ಮತ್ತು ಆಟೋಚಾಲಕರಿಗೆ ಆಹಾರದ ಕಿಟ್.

ಕೃಷ್ಣರಾಜಪೇಟೆ ; ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಆಶಾ ಕಾರ್ಯಕರ್ತರಿಗೆ ಮತ್ತು ಆಟೋಚಾಲಕರಿಗೆ ಮಂಡ್ಯ ಜಿಲ್ಲಾ ಮನ್ಮುಲ್ ನಿರ್ದೇಶಕರಾದ ಹೆ ಟಿ ಮಂಜುರವರು ಆಹಾರದ ಕಿಟ್‌ಗಳನ್ನು ವಿತರಿಸಿದರು.

ನಂತರ ಮಾತನಾಡಿದ ಹೆ ಟಿ ಮಂಜುರವರು ಆಟೋ ಚಾಲಕರು ಲಾಕ್ಡೌನ್ ಆದ ಸಂದರ್ಭದಿAದಲೂ ಯಾವುದೇ ಆದಾಯವಿಲ್ಲದೆ ಮನೆಯಲ್ಲಿ ಕೂತಿದ್ದಾರೆ. ಯಾವುದೇ ಪ್ರಯಾಣಿಕರು ಸಂಚರಿಸಿದೆ ಆಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರ ಆಶೀರ್ವಾದದೊಂದಿಗೆ ನಾವು ಕೃಷ್ಣರಾಜಪೇಟೆ ತಾಲೂಕಿನ ಆಟೋ ಚಾಲಕರು ಮತ್ತು ಆಶಾ ಕಾರ್ಯಕರ್ತರಿಗೆ ಪುಡ್ ಕಿಟ್ ವಿತರಿಸುವ ಮೂಲಕ ನಮ್ಮ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಅತೀಕ್ ಮಂಜಣ್ಣನವರು ಸಮಾಜ ಸೇವೆ ಮಾಡುತ್ತಾ ಮುಂದಿನ ಶಾಸಕರಾಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ೧೫೦ಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಹಾಗೂ ಕೋವಿಡ್ ಸಂದರ್ಭದಲ್ಲಿ ತಮ್ಮ ನಿಷ್ಠಾವಂತ ಕಾರ್ಯವನ್ನು ಪ್ರದರ್ಶಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಪುಟ್ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕರಾದ ಎಚ್ ಟಿ ಮಂಜು, ಜೆಡಿಎಸ್ ಮುಖಂಡರಾದ ಕೋಟಿ ಸುಬ್ಬೆಗೌಡರು, ಗ್ರಾಮ ಪಂಚಾಯಿತಿ ಸದಸ್ಯರಾದ ಅತೀಕ್, ಮಾಜಿ ಸದಸ್ಯರಾದ ಕಾಳನಾಯಕ, ನಯಾಜ್ ಪಾಷ, ಸೇರಿ ೧೫೦ಕ್ಕೂ ಹೆಚ್ಚಿನ ಆಟೋ ಚಾಲಕರು ಹಾಜರಿದ್ದರು.

error: