July 26, 2021

Bhavana Tv

Its Your Channel

ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಸ್ಯಾನಿಟೈಸರ್ ಸಿಂಪಡಣೆ

ಕೃಷ್ಣರಾಜಪೇಟೆ ; ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭಜರಂಗ ದಳದ ಯುವಕರು ಮತ್ತು ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಸಹಯೋಗದಿಂದ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತಿ ಬೀದಿಗಳಿಗೆ ಹಾಗೂ ಮನೆಗಳಿಗೆ ಸ್ಯಾನಿಟೈಸರ್ ಗಳನ್ನು ಸಿಂಪಡಿಸಲಾಯಿತು.

ಈ ಕುರಿತು ಮಾತನಾಡಿದ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಕ್ಷಿತಾ ದಿನೇಶ್ ರವರು ಇಂದು ನಮ್ಮ ಗ್ರಾಮ ಪಂಚಾಯಿತಿ ಮತ್ತು ಬಜರಂಗದಳದ ಯುವಕರ ಸಹಯೋಗದಿಂದ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಿಗೆ ಹಾಗೂ ಮನೆಗಳಿಗೆ ಸ್ಯಾನಿಟೈಸರ್ ಗಳನ್ನು ಸಿಂಪಡಿಸಲಾಗುತ್ತದೆ. ಈಗ ನಮ್ಮ ದೇಶದಾದ್ಯಂತ ಕರೋನವೈರಸ್ ಆಕ್ರಮಣ ಹೆಚ್ಚಾಗುತ್ತಿದೆ ಈ ವೈರಸ್ ಹರಡದಂತೆ ನಾವು ತಡೆಗಟ್ಟಲು ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಉಪಯೋಗಿಸಿಕೊಳ್ಳಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಈ ಕರೋನವೈರಸ್ ನನ್ನು ಓಡಿಸಬೇಕೆಂದು ಹೇಳಿದರು.

ನಂತರ ಮಾತನಾಡಿದ ಭಜರಂಗದಳದ ಯುವಕರಾದ ಸಾಗರ್ ರವರು ನಮ್ಮ ಅಕ್ಕಿ ಹೆಬ್ಬಾಳಿನ ಯುವಕರ ತಂಡದೊAದಿಗೆ ನಾವು ಇಂದು ಪ್ರತಿ ಬೀದಿ ಬೀದಿಗೆ ಹೋಗಿ ಈ ಸ್ಯಾನಿಟೈಸರ್ ಗಳನ್ನು ಸಿಮ್ ಪಡಿಸುತ್ತಿದ್ದೇವೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಕ್ಷಿತಾ ದಿನೇಶ್, ಚೌಟ್ರಿ ರಾಜು, ಪಂಚಾಯಿತಿ ಕಾರ್ಯದರ್ಶಿ ಮಹೇಶ್, ಪತ್ರಕರ್ತರಾದ ವಾಸು, ಯುವಕರಾದ ಪುನೀತ್, ಭರತ್, ಹರೀಶ್, ಸಂತೋಷ್, ಮಹೇಶ್, ಕಿರಣ್, ಸ್ವಾಮಿ, ಚಂದನ್, ಚಿಕ್ಕಯ್ಯ ಮತ್ತಿತರರು ಹಾಜರಿದ್ದರು.

error: