April 27, 2024

Bhavana Tv

Its Your Channel

ಮಂಡ್ಯದ ಗಾಂಧಿ ಸರಳ ಸಜ್ಜನ ರಾಜಕಾರಣಿ ಕೃಷ್ಣರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಅಭಿಮಾನಿಗಳ ನಿರ್ಧಾರ

ಕೆ.ಆರ್.ಪೇಟೆ ಪಟ್ಟಣದ ಗ್ರಾಮ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಕೃಷ್ಣರ ಅಭಿಮಾನಿಗಳು ಒಮ್ಮತದ ನಿರ್ಧಾರ ಕೈಗೊಂಡು ಕೃಷ್ಣರ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಸ್ವಾಗತ ಸಮಿತಿಯನ್ನು ರಚಿಸಿ ಪಕ್ಷಾತೀತವಾಗಿ ಒಂದು ತಿಂಗಳ ಒಳಗಾಗಿ ಸರಳ ಸಜ್ಜನ ರಾಜಕಾರಣಿ, ಗಾಂಧೀವಾದಿ ನುಡಿದಂತೆ ನಡೆದು ಸಾರ್ಥಕ ಜೀವನ ನಡೆಸಿದ ರಾಜಕೀಯ ರಂಗದ ಬೆಳ್ಳಿ ಚುಕ್ಕಿ, ಮಾಜಿಸ್ಪೀಕರ್ ಕೃಷ್ಣರ ಜೀವನದ ಆದರ್ಶಗಳು, ತತ್ವಸಿದ್ಧಾಂತಗಳ ಬಗ್ಗೆ ಮುಂದಿನ ಯುವ ಪೀಳಿಗೆಗೆ ತಿಳಿಸಿಕೊಡಲು ವಿಶೇಷವಾಗಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಿ ವಿಚಾರ ಸಂಕಿರಣ ಆಯೋಜಿಸಿ ಶ್ರದ್ಧಾಂಜಲಿ ಸಮರ್ಪಿಸಲು ನಿರ್ಧರಿಸಲಾಯಿತು.

ವಿಶ್ರಾಂತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗಡೆ ಮತ್ತು ಮಾಜಿಸ್ಪೀಕರ್ ರಮೇಶ್ ಕುಮಾರ್ ಅವರ ಮೂಲಕ ವಿಚಾರ ಸಂಕಿರಣ ನಡೆಸಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಮಾನ ಮನಸ್ಕರು ಶ್ರದ್ಧಾಂಜಲಿ ಸಭೆಯನ್ನು ಕೆ.ಆರ್.ಪೇಟೆ ಪಟ್ಟಣದಲ್ಲಿ ಸಚಿವ ಡಾ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಎಲ್.ಮೋಹನ್, ಮಾಜಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಎ.ಆರ್.ರಘು, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ, ತಾಲ್ಲೂಕು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ, ಚಿಂತಕ ಕತ್ತರಘಟ್ಟ ವಾಸು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಕೃಷ್ಣರ ಅಭಿಮಾನಿಗಳಾದ ಚನ್ನಿಂಗೇಗೌಡ, ಹೆಚ್.ಡಿ.ಭೋಜೇಗೌಡ, ಐಚನಹಳ್ಳಿ ಶಿವಣ್ಣ, ಬಣ್ಣೇನಹಳ್ಳಿ ಶ್ರೀನಿವಾಸ್, ಆನೆಗೊಳ ರಾಮೇಗೌಡ, ಮಾಕವಳ್ಳಿ ರಾಮೇಗೌಡ, ಗ್ರಾಮಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಸಿ.ಕಿರಣ್, ಹಾದನೂರು ಪರಮೇಶ್, ಸಿಂದಘಟ್ಟರವಿ, ಕರೋಟಿ ರಾಜಶೇಖರ, ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿಶಂಕರ್ ಸೇರಿದಂತೆ ನೂರಾರು ಕೃಷ್ಣರ ಅಭಿಮಾನಿಗಳು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: