April 26, 2024

Bhavana Tv

Its Your Channel

ಕೆ.ಆರ್.ಪೇಟೆ ಎಪಿಎಂಸಿ ಬಿಜೆಪಿ ತೆಕ್ಕೆಗೆ; ೨ ಮತದಿಂದ ಗೆಲುವು ಸಾಧಿಸಿದ ಮಾಲತಿ ಬಸವೇಗೌಡ

ಕೃಷ್ಣರಾಜಪೇಟೆ ಎಪಿಎಂಸಿ ಬಿಜೆಪಿ ವಶಕ್ಕೆ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾಕಣದಲ್ಲಿದ್ದ ಮಾಲತಿಬಸವೇಗೌಡ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಮುಖಂಡ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಸಂಗಾಪುರ ಶಶಿಧರ್ ಅವರನ್ನು ೦೨ಮತಗಳ ಅಂತರದಿoದ ಪರಾಭವಗೊಳಿಸಿ ಆಯ್ಕೆಯಾಗುವ ಮೂಲಕ ಕಳೆದ ೧೦ ವರ್ಷಗಳಿಂದ ಜೆಡಿಎಸ್ ವಶದಲ್ಲಿದ್ದ ಎಪಿಎಂಸಿ ಆಡಳಿತ ಮಂಡಳಿಯನ್ನು ಬಿಜೆಪಿ ತೆಕ್ಕೆಗೆ ತಂದುಕೊಡುವ ಮೂಲಕ ಇತಿಹಾಸ ನಿರ್ಮಿಸಿದರು

ಬಿಜೆಪಿ ಅಭ್ಯರ್ಥಿ ಮಾಲತಿಬಸವೇಗೌಡ ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಎಂ.ಶಿವಮೂರ್ತಿ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು

ಕೆ.ಆರ್.ಪೇಟೆ ಎಪಿಎಂಸಿ ಆಡಳಿತ ಮಂಡಳಿಯ ಕೊನೆಯ ೦೬ ತಿಂಗಳ ಉಳಿದ ಅವಧಿಗೆ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಿದ್ದಂತೆ ಸಂಗಾಪುರ ಶಶಿಧರ್ ಮತ್ತು ಸಿಂದಘಟ್ಟ ಸೋಮಸುಂದರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮತ್ತು ಮನ್ ಮುಲ್ ನಿರ್ದೇಶಕ ಪ್ರತ್ಯೇಕವಾಗಿ ತಮ್ಮ ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸಲು ನಡೆಸಿದ ಕಸರತ್ತು ವಿಫಲವಾಗಿ ಗುಂಪುಗಳಾಗಿ ವಿಭಜನೆಯಾಗಿದ್ದನ್ನು ಸದ್ಬಳಕೆ ಮಾಡಿಕೊಂಡ ಬಿಜೆಪಿ ನಾಯಕ ಸಚಿವ ಡಾ.ನಾರಾಯಣಗೌಡ ತಮ್ಮ ಮೂವರು ನಾಮನಿರ್ದೇಶಿತ ಸದಸ್ಯರಾದ ಪ್ರಮೀಳವರದರಾಜೇಗೌಡ, ಹೊಸೂರುಸ್ವಾಮಣ್ಣ, ಕರ್ತೇನಹಳ್ಳಿ ಸುರೇಶ್ ಅವರ ಜೊತೆಗೆ ಮಹೇಶ್ವರಿನರಸೇಗೌಡ, ಅಕ್ಕಿಹೆಬ್ಬಾಳು ನಾಗರಾಜು, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದು ಪಕ್ಷಕ್ಕೆ ಸೇರ್ಪಡೆಯಾದ ಮಾಲತಿಬಸವೇಗೌಡ ಅವರ ಜೊತೆಗೆ ಇಬ್ಬರು ಜೆಡಿಎಸ್ ಸದಸ್ಯರ ಮತ ಪಡೆಯುವ ಮೂಲಕ ಒಟ್ಟಾರೆ ೦೮ ಮತಗಳನ್ನು ಪಡೆದು ೦೬ ಮತ ಪಡೆದಿದ್ದ ಸಂಗಾಪುರ ಶಶಿಧರ್ ಅವರನ್ನು ೦೨ ಮತಗಳ ಅಂತರದಿAದ ಪರಾಭವಗೊಳಿಸಿ ಕೆ.ಆರ್.ಪೇಟೆ ತಾಲ್ಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ವಶಕ್ಕೆ ಎಪಿಎಂಸಿ ಆಡಳಿತ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.

ನೂತನ ಎಪಿಎಂಸಿ ಅಧ್ಯಕ್ಷೆ ಮಾಲತಿಬಸವೇಗೌಡ ಅವರನ್ನು ಮನ್ ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಜಿಲ್ಲಾ ಉಪಾಧ್ಯಕ್ಷ ವರದರಾಜೇಗೌಡ, ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿನಾಗರಾಜು, ಎಸ್.ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ಭಾರತಿಪುರ ಪುಟ್ಟಣ್ಣ, ಮಾರ್ಗೋನಹಳ್ಳಿ ಸಂಪತ್, ಮಂಜುನಾಥ್ ಗೌಡ ಹಾಗೂ ಬಿಜೆಪಿ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು.
ಎಪಿಎಂಸಿ ಕಾರ್ಯದರ್ಶಿ ಸೈಯ್ಯದ್ ರಫೀಕ್ ಅಹಮದ್ ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಎಪಿಎಂಸಿ ಕಛೇರಿ ವ್ಯವಸ್ಥಾಪಕ ಸತೀಶ್, ಚುನಾವಣಾ ಶಾಖೆಯ ಮಂಜುನಾಥ್ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದರು. ಪೆಚ್ಚುಮೋರೆ ಹಾಕಿಕೊಂಡು ತೆರಳಿದ ಜೆಡಿಎಸ್ ಮುಖಂಡರು ..

ಇಂದು ನಡೆದ ಎಪಿಎಂಸಿ ಅಧ್ಯಕ್ಷರ ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಿತು. ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಲು ಆಡಳಿತ ಮಂಡಳಿಯ ನಿರ್ದೇಶಕರು ಮತದಾನ ನಡೆಯುವ ಹಾಲ್ ಗೆ ತೆರಳಿದಾಗ ೦೮ ಸದಸ್ಯರನ್ನು ಹೊಂದಿದ್ದ ಜೆಡಿಎಸ್ ೦೬ ಮತ ಪಡೆದರೆ ೦೬ ಸದಸ್ಯರನ್ನು ಹೊಂದಿದ್ದ ಬಿಜೆಪಿ ಅಡ್ಡ ಮತದಾನದ ಮೂಲಕ ೦೮ ಮತಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ೦೨ ಮತಗಳ ಅಂತರದಿAದ ಭರ್ಜರಿ ಗೆಲುವು ದಾಖಲಿಸಿದ್ದಲ್ಲದೇ ೧೦ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಎಪಿಎಂಸಿ ಆಡಳಿತದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಲ್ಲದೇ ಜೆಡಿಎಸ್ ಪಕ್ಷಕ್ಕೆ ಮರ್ಮಾಘಾತ ನೀಡಿತು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: