May 20, 2024

Bhavana Tv

Its Your Channel

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ೭೪ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಹಂಪಲು ,ಬ್ರೆಡ್ ವಿತರಣೆ

ಕೆ.ಆರ್.ಪೇಟೆ: ನಡೆದಾಡುವ ದೇವರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ, ಪದ್ಮಭೂಷಣ, ಪೂಜ್ಯ ಖಾವಂದರಾದ ಡಾ.ಡಿ.ವೀರೇಂದ್ರಹೆಗ್ಗಡೆಯವರ ೭೪ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ದುಂಡಶೆಟ್ಟಿ-ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಫಲು-ಬ್ರೆಡ್ ವಿತರಿಸಿ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಲಾಯಿತು .

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ
ಮಹಾಬಲಕುಲಾಲ್, ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಮತ್ತು ಜನಜಾಗೃತಿ ಹೋರಾಟ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್ ಹಾಗೂ ಯೋಜನಾ ಕಛೇರಿಯ ಮೇಲ್ವಿಚಾರಕರು ಮತ್ತು ಸಿಬ್ಬಂಧಿಗಳ ನೇತೃತ್ವದಲ್ಲಿ ನೂರಾರು ಒಳರೋಗಿಗಳಿಗೆ ಹಣ್ಣುಹಂಫಲು ವಿತರಿಸಿ ಶುಭ ಹಾರೈಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪೂಜ್ಯ ಡಾ.ಡಿ.ವೀರೇಂದ್ರಹೆಗ್ಗಡೆಯವರ ನೇತೃತ್ವದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆಯಲ್ಲದೇ ಲಕ್ಷಾಂತರ ಕುಟುಂಬಗಳು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಭಿ ಬದುಕು ನಡೆಸಲು ಆಸರೆಯಾಗಿದೆ. ಒಂದು ಸರ್ಕಾರವು ಮಾಡಲಾರದ ಜನಪರವಾದ
ಕೆಲಸಗಳು ಹಾಗೂ ವಿವಿಧ ಯೋಜನೆಗಳ ಫಲವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕಾರಣವಾಗಿದೆ. ತ್ರಿವಿಧ ದಾಸೋಹಿಗಳಾಗಿ ನಡೆದಾಡುವ ದೇವರ ರೂಪದಲ್ಲಿ ನಮಗೆ ದರ್ಶನವನ್ನು ನೀಡುತ್ತಿರುವ ವೀರೇಂದ್ರಹೆಗ್ಗಡೆಯವರಿಗೆ ದಯಾಮಯನಾದ ಮಂಜುನಾಥಸ್ವಾಮಿಯು ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನವನ್ನು ನಡೆಸುವ ಶಕ್ತಿಯನ್ನು ನೀಡಲಿ ಎಂದು ಶುಭಕೋರಿದ ಡಾ.ಕೆ.ಎಸ್.ರಾಜೇಶ್ ಬದ್ಧತೆ ಮತ್ತು ಕಾರ್ಯತತ್ಪರತೆಗೆ ಮತ್ತೊಂದು ಹೆಸರೇ ಡಾ.ಡಿ.ವೀರೇಂದ್ರಹೆಗಡೆ ಯವರಾಗಿದ್ದಾರೆ. ಆದ್ದರಿಂದ ಸೇವಾ ಪ್ರತಿನಿಧಿಗಳು ಮತ್ತಷ್ಟು ಜವಾಬ್ಧಾರಿಯಿಂದ ಕೆಲಸ ಮಾಡಿ ಗ್ರಾಮೀಣ ಪ್ರದೇಶದ ಬಡಜನರು, ಶೋಷಿತರು ಹಾಗೂ ತುಳಿತಕ್ಕೊಳಗಾದವರಿಗೆ ಸಾರ್ಥಕ ಸೇವೆಯನ್ನು ಸಲ್ಲಿಸುವ ಮೂಲಕ ಬಡಜನರ ಸೇವೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ರಾಜೇಶ್ ಮನವಿ ಮಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ವರದಿಗಾರರ ಸಂಘದ
ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ ರೋಗಿಗಳಿಗೆ ಹಣ್ಣುಹಂಫಲು ವಿತರಿಸಿ ಮಹಿಳಾ ಸಬಲೀಕರಣ ಹಾಗೂ ಗ್ರಾಮಾಭಿವೃದ್ಧಿಗೆ ಒತ್ತು ನೀಡಿ ಕೆಲಸ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಗ್ರಾಮಸ್ವರಾಜ್ಯದ ಕನಸನ್ನು ನನಸು ಮಾಡುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ಆರಂಭವಾದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ವೃತ್ತಿಕೌಶಲ್ಯ ಯೋಜನೆ ಶಿಬಿರಗಳು ರಾಷ್ಟ್ರವ್ಯಾಪಿ ವಿಸ್ತರಿಸಿವೆ. ಪೂಜ್ಯ ಖಾವಂದರಾದ ವೀರೇಂದ್ರಹೆಗಡೆಯವರು ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಮಾತಿನಂತೆ ಸಮಾಜದ ಎಲ್ಲಾ ಸ್ತರಗಳ ಜನರಿಗೂ ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡಿ ಸ್ವಉದ್ಯೋಗ ಯೋಜನೆಯ ಮೂಲಕ ಗುಡಿಕೈಗಾರಿಕೆಗಳು ಹಾಗೂ ಹೈನುಗಾರಿಕೆ ಮಾಡಬೇಕೆಂಬ ಛಲವಂತ ಮಹಿಳೆಯರಿಗೆ ಸಾಲಸೌಲಭ್ಯವನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರ ವೃತ್ತಿಕೌಶಲ್ಯವನ್ನು
ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಹೊಂದುವ ಮೂಲಕ ಇಡೀ ಕುಟುಂಬವನ್ನು ಮುನ್ನಡೆಸಿ ಸ್ವಾವಲಂಭಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಪ್ರೇರಕ ಶಕ್ತಿಯಾಗಿರುವ ವೀರೇಂದ್ರಹೆಗ್ಗಡೆಯವರಿಗೆ ಶುಭವಾಗಲಿ ಎಂದು ಕೆ.ಆರ್. ನೀಲಕಂಠ ಶುಭ ಹಾರೈಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಮೇಲ್ವಿಚಾರಕರಾದ ಅನ್ನಪೂರ್ಣ, ಕಾವ್ಯಲೋಕೇಶ್, ಸರಸ್ವತಿ, ಕಾಂತಿಕಾಮಣಿ, ಮಮತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿಲ್ಲದಹಳ್ಳಿ ಆರ್.ಶ್ರೀನಿವಾಸ್, ಕಾಮನಹಳ್ಳಿ ಅನುರಾಧಮಂಜುನಾಥ್, ಹೊಸಹೊಳಲು ಹಾಲು ಉತ್ಪಾದಕರ ಸಂಘದ ಮಾಜಿಅಧ್ಯಕ್ಷ ಹೆಚ್.ಎಸ್.ರಘು, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರವಿ, ತಜ್ಞ ವೈದ್ಯರಾದ ಡಾ.ರವೀಂದ್ರ, ಡಾ.ಶ್ರೀಕಾಂತ್, ಡಾ.ಶಿವಕುಮಾರ್, ಡಾ.ರಾಧ, ಡಾ.ಮುತ್ತುರಾಜ್,
ಡಾ.ಪ್ರಿಯಾಂಕ, ಫರ‍್ಮಸಿ ಅಧಿಕಾರಿ ಸತೀಶಬಾಬೂ, ಹಿರಿಯ ಶುಷ್ರೂಶಕಿ ಬೇಬಿ, ಸೀತಮ್ಮ ಸೇರಿದಂತೆ
ನೂರಾರು ಕಾರ್ಯಕರ್ತರು ಸೇವಾಪ್ರತಿನಿಧಿಗಳು ಹಣ್ಣುಹಂಫಲು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: