April 28, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದಲ್ಲಿ ದಲಿತ ಪರ ಸಂಘಟನೆಗಳ ನಾಯಕರಿಂದ ಪತ್ರಿಕಾಗೋಷ್ಠಿ

ಕೆ.ಆರ್.ಪೇಟೆ;-ದಲಿತ ಪರ ಸಂಘಟನೆಗಳ ನಾಯಕರು ಇಂದು ಕೆ.ಆರ್.ಪೇಟೆ ಪಟ್ಟಣದ ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂವಿಧಾನ ತಿದ್ದುಪಡಿ ಮಾಡುವ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರ ಹೇಳಿಕೆಗಳು, ನಾಗಮಂಗಲ ಶಾಸಕ ಸುರೇಶ್ ಗೌಡರ ದಲಿತ ವಿರೋಧಿ ನೀತಿ, ಹಂಸಲೇಖ ಅವರ ದಲಿತ ಪರ ನಿಲುವನ್ನು ಖಂಡಿಸುತ್ತಿರುವ ಕೇಸರಿಪಡೆ ಹಾಗೂ ಬ್ರಾಹ್ಮಣಶಾಹಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು…

ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಗೌಡ ಅಸ್ಪೃಶ್ಯತೆಯನ್ನು ಬೆಂಬಲಿಸುವ ಮಾತಗಳನ್ನಾಡುವ ಮೂಲಕ ತಾವು ದಲಿತ ವಿರೋಧಿ ಎಂದು ಸಾಭೀತುಪಡಿಸಿದ್ದಾರೆ. ಅವರ ಅಸ್ಪೃಶ್ಯತೆ ಆಚರಣೆಯನ್ನು ಸಮರ್ಥಿಸುವ ಹೇಳಿಕೆ ನೀಡುವ ಮೂಲಕ ಶಾಸಕ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್ ಆಕ್ರೋಶ ವ್ಯಕ್ತಪಡಿಸಿದರು..

ಸಂವಿಧಾನತಿದ್ದುಪಡಿ ಮಾಡಲು ನಾವು ಬಿಜೆಪಿ ಪಕ್ಷದ ಮುಖಂಡರು ಬದ್ಧರಾಗಿದ್ದೇವೆ ಎಂಬ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ್, ತೇಜಸ್ವಿಸೂರ್ಯ, ನಳಿನಕುಮಾರ್ ಕಟೀಲ್ ಅವರ ವರ್ತನೆಯನ್ನು ಖಂಡಿಸಿ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ದಲಿತ ನಾಯಕ ಡಾ.ಬಸ್ತಿರಂಗಪ್ಪ ಆಗ್ರಹಿಸಿದರು.

ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರುತ್ತಿರುವುದಲ್ಲದೇ, ಮನಸ್ಸಿಗೆ ನೋವುಂಟಾಗುವAತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವ ಬ್ರಾಹ್ಮಣಶಾಹಿ ವ್ಯವಸ್ಥೆ ವಿರುದ್ಧ ಕಿಡಿಕಾರಿದ ವಿಶ್ರಾಂತ ಪ್ರಾಂಶುಪಾಲ ರಾಜಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬ್ರಾಹ್ಮಣ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರಾದ ಮಾಂಬಳ್ಳಿ ಜಯರಾಂ, ಮುದುಗೆರೆ ಮಹೇಂದ್ರ, ಎಪಿಎಂಸಿ ನಿರ್ದೇಶಕ ಸೋಮಸುಂದರ್, ಊಚನಹಳ್ಳಿ ನಟರಾಜ್, ಜೈನಹಳ್ಳಿ ಹರೀಶ್, ನಾಗರಘಟ್ಟ ಮಂಜು, ರಾಘವೇಂದ್ರ, ಕತ್ತರಘಟ್ಟ ರಾಜೇಶ್, ಲಕ್ಷ್ಮೀಪುರ ರಂಗಸ್ವಾಮಿ, ಗಂಜಿಗೆರೆ ಲೋಕೇಶ್, ಬ್ಯಾಂಕ್ ಬೋರಯ್ಯ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: