May 3, 2024

Bhavana Tv

Its Your Channel

ಮೃತ ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಮೊದಲ ಹಂತದ ಪರಿಹಾರ ಚೆಕ್ ನೀಡಿದ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಆದಿದ್ರಾವಿಡ ಪೌರಕಾರ್ಮಿಕ ಜನಾಂಗದ ಅಪ್ರಾಪ್ತ ಬಾಲಕಿ ಪವಿತ್ರಳನ್ನು ಅನೈತಿಕ ಸಂಬoಧಕ್ಕೆ ಬಳಸಿಕೊಂಡು ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ. ಆರೋಪಿಗೆ ಉಗ್ರವಾದ ಶಿಕ್ಷೆಯನ್ನು ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಪೋಲಿಸರು ಕಾರ್ಯೋನ್ಮುಖರಾಗಿದ್ದಾರೆ . ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ವತಿಯಿಂದ ೮ಲಕ್ಷದ ೨೫ಸಾವಿರ ರೂ ಪರಿಹಾರ ಧನವನ್ನು ನೀಡಲಾಗುವುದು ಎಂದು ರಾಜ್ಯದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆಶಿವಣ್ಣ ಹೇಳಿದರು .

ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊAದಿಗೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಕೃತ್ಯ ನಡೆದಿರುವ ಮೃತ ಯುವತಿ ಪವಿತ್ರಳ ಮನೆಗೆ ಭೇಟಿ ನೀಡಿ ಮೃತರ ತಾಯಿ ಮಹಾದೇವಿ ಮತ್ತು ಸಹೋದರ ಮನೋಜ್ ಅವರಿಗೆ ಸಾಂತ್ವನ ಹೇಳಿ ಆತ್ಮವಿಶ್ವಾಸವನ್ನು ತುಂಬಿ ಸರ್ಕಾರದ ವತಿಯಿಂದ ಮೊದಲ ಕಂತಾಗಿ ಬಿಡುಗಡೆಯಾಗಿರುವ ೪ಲಕ್ಷದ೨೫ಸಾವಿರ ರೂಗಳ ಆದೇಶ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ‍್ಯ ಬಂದು ೭೫ ವರ್ಷಗಳಾಗುತ್ತಿದ್ದರೂ ಪೌರಕಾರ್ಮಿಕರು ಸೇರಿದಂತೆ ಶೋಷಿತ ಸಮುದಾಯಗಳು ಸ್ಥಿತಿಗತಿಗಳು ಇಂದಿಗೂ ಬದಲಾಗಿಲ್ಲ. ಸ್ವಂತ ಸೂರನ್ನು ಹೊಂದಿ ಆರ್ಥಿಕವಾಗಿ ಸ್ಥಿತಿವಂತರಾಗುವುದು ಇನ್ನೂ ಕನಸಿನ ಗಂಟಾಗಿಯೇ ಉಳಿದಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರವು ಭೂಮಿ ಆಕಾಶದಷ್ಟಿದೆಯಾದರೂ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯಿಂದ ಕೂಡಿರುವ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ತಿಳಿಸಿದ ಶಿವಣ್ಣ ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷಾ ಕಾರ್ಯವು ಭರದಿಂದ ಸಾಗಿದೆ. ಸ್ಕ್ಯಾವೆಂಜರ್‌ಗಳ ಆರೋಗ್ಯದ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ.
ತಲೆಯ ಮೇಲೆ ಮಲಹೊರುವುದು ಸೇರಿದಂತೆ ಒಳಚರಂಡಿಯ ಮ್ಯಾನ್ ಹೋಲ್‌ನ ಒಳಗೆ ಪೌರಕಾರ್ಮಿಕರು ಇಳಿಯುವ ಸಂದರ್ಭದಲ್ಲಿ ಎಲ್ಲಾ ರೀತಿಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಸೂಚಿಸಲಾಗಿದೆ. ಪೌರ ಕಾರ್ಮಿಕರನ್ನು ಜನಸಂಖ್ಯೆಯ ಆಧಾರದ ಮೇಲೆ ಅಗತ್ಯತೆಗೆ ಅನುಗುಣವಾಗಿ ಹೊರಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಂಡು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರಿಗೆ ಸೇವಾ ಭದ್ರತೆ ನೀಡುವುದು, ವಾಸ ಮಾಡಲು ಮನೆಯನ್ನು ನಿರ್ಮಿಸಿಕೊಡುವುದು ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುವುದು ಆಯಾ ಗ್ರಾಮ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿ, ಪುರಸಭೆ-ನಗರಸಭೆ ಹಾಗೂ ಮಹಾನಗರಪಾಲಿಕೆಗಳ ಜವಾಬ್ಧಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆಗಳ ಮುಖ್ಯಾಧಿಕಾರಿಗಳು ಹಾಗೂ ನಗರಸಭೆಯ ಕಮಿಷನರ್‌ಗಳು ಕಾರ್ಯೋನ್ಮುಖರಾಗಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಬೂಕನಕೆರೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಪೌರ ಕಾರ್ಮಿಕಳಾಗಿರುವ ಮಹಾದೇವಿ ಅವರಿಗೆ ಕೇವಲ ೦೬ ಸಾವಿರ ರೂಪಾಯಿಗಳನ್ನು ಮಾತ್ರಗೌರವ ಧನವನ್ನಾಗಿ ನೀಡುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯು ತುರ್ತಾಗಿ ಗಮನಹರಿಸಿ ಗೌರವ ಧನವನ್ನು ಹೆಚ್ಚಳ ಮಾಡುವ ಜೊತೆಗೆ ಆಕೆ ವಾಸಮಾಡಲು ಅಗತ್ಯವಾದ ಮನೆಯನ್ನು ಮಂಜೂರು ಮಾಡಿಕೊಟ್ಟು ಶೀಘ್ರವೇ ಸ್ವಂತ ಸೂರನ್ನು ಒದಗಿಸಿಕೊಡಬೇಕು ಎಂದು ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಕುಮಾರ್, ಉಪಾಧ್ಯಕ್ಷೆ ಜ್ಯೋತಿಮಂಜು ಹಾಗೂ ಪಿಡಿಓ ಡಾ.ನರಸಿಂಹರಾಜು ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಅಸ್ಪೃಷ್ಯತೆ ಆಚರಣೆ ಮಾಡುತ್ತಿರುವ ಬಗ್ಗೆ ಆಯೋಗಕ್ಕೆ ಸಾಕಷ್ಟು ದೂರುಗಳು ಬರುತ್ತಿವೆ ಈ ಬಗ್ಗೆ ತಾಲೂಕು ಆಡಳಿತ ಹಾಗೂ ಪೋಲಿಸರು ಗಮನ ಹರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಕಿಡಿಗೇಡಿಗಳ ಬಗ್ಗೆ ಗಮನ ಹರಿಸಿ ಮಟ್ಟಹಾಕಬೇಕುಎಂದು ಹೇಳಿದ ಶಿವಣ್ಣ ದಲಿತರು ಶೋಷಿತರು ಸೇರಿದಂತೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರೂ ಕೂಡ ನಮ್ಮಂತೆ ಮನುಷ್ಯರೇ ಆಗಿರುವುದರಿಂದ ಶ್ರೀಸಾಮಾನ್ಯರು ಮಾನವತೆಗೆ ಹಾಗೂ ಮನುಷ್ಯತ್ವಕ್ಕೆ ಗೌರವ ನೀಡುವುದನ್ನು ಮೊದಲು ಕಲಿಯಬೇಕು. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲವೆಂಬ ಸತ್ಯ ಅರಿಯಬೇಕು. ಆಪತ್ ಕಾಲದಲ್ಲಿ ನಮಗೆ ಸಹಾಯ ಮಾಡಿದವನೇ ನಿಜವಾದ ನೆಂಟನೆoಬ ವಾಸ್ತವ ಸತ್ಯವನ್ನು ತಿಳಿಯಬೇಕು ಎಂದು ಶಿವಣ್ಣ ಕಿವಿಮಾತು ಹೇಳಿದರು.
ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ರಂಗೇಗೌಡ, ತಹಶೀಲ್ದಾರ್ ಎಂ.ಶಿವಮೂರ್ತಿ, ಶ್ರೀರಂಗಪಟ್ಟಣ ಡಿವೈಎಸ್‌ಪಿ
ಸಂದೇಶ್‌ಕುಮಾರ್, ಕೃಷ್ಣರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಎಸ್. ನಿರಂಜನ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶಅರವಿಂದ್, ಬಿಜೆಪಿ ಹಿರಿಯ ಮುಖಂಡರಾದ ಬಳ್ಳೇಕೆರೆವರದರಾಜೇಗೌಡ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಆರ್.ಜಗಧೀಶ್, ದಲಿತಮುಖಂಡ ಬಸ್ತಿರಂಗಪ್ಪ, ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ಪ್ರಧಾನ
ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ತಾಲೂಕು ಪಂಚಾಯಿತಿ ಮಾಜಿಸದಸ್ಯೆ ಮೀನಾಕ್ಷಿ ಪುಟ್ಟರಾಜು, ರಾಜ್ಯ ಅರುದಂತಿಯಾರ್ ಮಹಾಸಭಾದ ಅಧ್ಯಕ್ಷ ಆರ್.ಕೃಷ್ಣ, ರಾಜ್ಯ ವಿಜಿಲೆನ್ಸ್ ಸಮಿತಿಯ ನಿರ್ದೇಶಕ ವೆಂಕಟೇಶ್, ತಾಲೂಕು ಪೌರಕಾರ್ಮಿಕ ಜನಾಂಗದ ಅಧ್ಯಕ್ಷ ಬನ್ನಾರಿ, ಮುಖಂಡರಾದ ಕೃಷ್ಣಾ, ಗೋಪಿ, ಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆಶಿವಣ್ಣ ಅವರನ್ನು ಮೃತ ಬಾಲಕಿ ಪವಿತ್ರಳ ತಾಯಿ ಮಹಾದೇವಿ ನನ್ನ ಮಗಳ ಜೀವನವನ್ನು ಹಾಳು ಮಾಡಿದ ಗ್ರಾಮದ ಪರಮೇಶನನ್ನು ಸುಮ್ಮನೆ ಬಿಡಬೇಡಿ ಅವನನ್ನು ಪಾಸಿಗೆ ಹಾಕಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದು ಮನಕಲಕುವಂತಿತ್ತು.

ವರದಿ.ಡಾ.ಕೆ.ಆರ್.ನೀಲಕoಠ.
ಕೃಷ್ಣರಾಜಪೇಟೆ. ಮಂಡ್ಯ.

error: