May 4, 2024

Bhavana Tv

Its Your Channel

ಸಚಿವ ನಾರಾಯಣ ಗೌಡರವರು ಮತ್ತೊಮ್ಮೆ ಕೆ.ಆರ್.ಪೇಟೆಯ ಶಾಸಕರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಕೆ.ಶ್ರೀನಿವಾಸ್

ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು ತಾಲೂಕು ಸೇರಿದಂತೆ ಮಂಡ್ಯ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಕೆಲಸ ಮಾಡುತ್ತಿರುವುದನ್ನು ಸಹಿಸದ ಜೆಡಿಎಸ್ ಪಕ್ಷದ ಮುಖಂಡ ಹೆಚ್.ಟಿ.ಮಂಜು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ತಾಲೂಕಿನ ಜನತೆಯ ದಿಕ್ಕುತಪ್ಪಿಸಲು ಹೊರಟಿದ್ದಾರೆ. ಸುಳ್ಳನ್ನೇ ನಿಜವೆಂದು ಬಿಂಬಿಸಲು ಹೊರಟಿರುವ ಹೆಚ್.ಟಿ.ಮಂಜು ಅಟವು ತಾಲೂಕಿನಲ್ಲಿ ನಡೆಯುವುದಿಲ್ಲ. ಸಚಿವ ನಾರಾಯಣಗೌಡ ಅವರು ಮತ್ತೊಮ್ಮೆ ಕೆ.ಆರ್.ಪೇಟೆಯ ಶಾಸಕರಾಗುವುದನ್ನು ತಪ್ಪಿಸಲುಯಾರಿಂದಲೂ ಸಾಧ್ಯವಿಲ್ಲ ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಹೇಳಿದರು.

ಅವರು ಇಂದು ತಾಲೂಕು ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರ ನೇತೃತ್ವದಲ್ಲಿ ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮನ್‌ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಅವರು ಸಚಿವ ನಾರಾಯಣಗೌಡರ ವಿರು ದ್ಧ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿದ್ದು ಸುಳ್ಳಿನ ಕಂತೆಯಾಗಿವೆ. ಈ ಹಿಂದೆ ಜರ್ಮನಿಯ ಚಕ್ರವರ್ತಿ ಹಿಟ್ಲರ್ ಸಂಪುಟದಲ್ಲಿದ್ದ ಓಬೆಲ್ ಸುಳ್ಳನ್ನು ಹೇಳಿ ಹೇಳಿ ಸುಳ್ಳನ್ನೇ ನಿಜವೆಂದು ಬಿAಬಿಸಲು ಮಾಡುತ್ತಿದಂತೆ ಹತಾಶರಾಗಿರುವ ಹೆಚ್.ಟಿ.ಮಂಜು ಸಚಿವರ ವಿರುದ್ಧ ಸುಳ್ಳಿನ ಸಮರ ಸಾರಲು ಹೊರಟಿದ್ದಾರೆ. ಆದರೆ ತಾಲೂಕಿನ ಪ್ರಜ್ಞಾವಂತ ಜನತೆ ಸುಳ್ಳನ್ನು ನಿಜವೆಂದು ನoಬುವುದಿಲ್ಲ ಮುಂದೆಯೂ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ
ಬುತ್ತಿಯಾಗಿರುವುದರಿಂದ ಸಚಿವರ ವಿರುದ್ಧ ಇಲ್ಲಸಲ್ಲದ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಕಿಡಿ ಕಾರಿದರು.

ಕೃಷ್ಣರಾಜಪೇಟೆ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಒಮ್ಮೆ ಶಾಸಕರಾಗಿ ಆಯ್ಕೆಯಾದವರು ಮತ್ತೊಮ್ಮೆ ಶಾಸಕರಾಗಿ ಗೆದ್ದ ನಿದರ್ಶನವಿಲ್ಲ. ಆದರೆ ನಾರಾಯಣಗೌಡ ಅವರು ಒಂದಲ್ಲಾ ಎರಡಲ್ಲಾ ಸತತವಾಗಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್-ಕಾಂಗ್ರೇಸ್ ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಪೂರಕವಾದ ಸಹಕಾರವು ದೊರೆಯಲಿಲ್ಲ ಎಂದು ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಸೇರಿ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಮಂತ್ರಿಯಾಗಿ ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ೧೪೦೦ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುಧಾನವನ್ನು ತಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸಚಿವ ನಾರಾಯಣಗೌಡರ ಕಾರ್ಯದಕ್ಷತೆಯನ್ನು ಸಹಿಸದ ಮಂಜು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹೆಚ್.ಟಿ.ಮಂಜು ಸಚಿವ ನಾರಾಯಣಗೌಡರ ಫಲಾನುಭವಿಯಾಗಿದ್ದು ಸಚಿವರ ವಿರುದ್ಧ ಆರೋಪ ಮಾಡುವ
ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ ಶ್ರೀನಿವಾಸ್ ಸಂತೇಬಾಚಹಳ್ಳಿ ಹೋಬಳಿಯ ಕೆರೆ-ಕಟ್ಟೆಗಳನ್ನು ತುಂಬಿಸುವ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆ, ಶೀಳನೆರೆ-ಬೂಕನಕೆರೆ ಹೋಬಳಿಗಳ ಕೆರೆ-ಕಟ್ಟೆಗಳನ್ನು ತುಂಬಿಸುವ ಕಟ್ಟಹಳ್ಳಿ- ಕಟ್ಟೇಕ್ಯಾತನಹಳ್ಳಿ ಏತ ನೀರಾವರಿ ಯೋಜನೆ, ಅಕ್ಕಿಹೆಬ್ಬಾಳು ಹೋಬಳಿಯ ಕೆರೆ- ಕಟ್ಟೆಗಳನ್ನು ತುಂಬಿಸುವ ರಂಗೇನಹಳ್ಳಿ ಏತ ನೀರಾವರಿ ಯೋಜನೆ, ತಾಲೂಕಿನ ೩೦೦ಕ್ಕೂ ಹೆಚ್ಚಿನ ಗ್ರಾಮಗಳ ಮನೆ-ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ “ಮನೆ-ಮನೆಗೆ ಗಂಗೆ”ಜಲಜೀವನ ಮಿಷನ್ ಯೋಜನೆ ಸೇರಿದಂತೆ ೧೪೦೦ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕೆಲಸ-ಕಾರ್ಯಗಳು ನಡೆಯುತ್ತಿವೆ. ತಾಲೂಕಿನ ಅಭಿವೃದ್ಧಿಯನ್ನು ಸಹಿಸದ ಜೆಡಿಎಸ್ ಮುಖಂಡರು ಸಚಿವರ ಪ್ರಾಮಾಣಿಕ ರಾಜಕಾರಣವನ್ನು ಪ್ರಶ್ನಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಸ್ಪಷ್ಠಪಡಿಸಿದರು.

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಹಣದ ಹೊಳೆಯ ಅಬ್ಬರದಲ್ಲಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಬೂಕಹಳ್ಳಿ ಮಂಜು ೫೦ ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಮತ್ತು ಕಾಂಗ್ರೇಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ದಿನೇಶ್ ಗೂಳಿಗೌಡ ಅವರಿಬ್ಬರೂ ನಮಗೆ ಸಮಾನ ವೈರಿಗಳು. ನಮ್ಮ ಬಿಜೆಪಿ ಬೆಂಬಲಿತ
ಸದಸ್ಯರು ಸ್ಥಳಿಯ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಒತ್ತಡಕ್ಕೆ ಕಟ್ಟುಬಿದ್ದು ಮತ ಚಲಾವಣೆ ಮಾಡಿದ್ದಾರೆ. ನಮ್ಮ ಪಕ್ಷದ ಮುಖಂಡರಾಗಲೀ, ಪದಾಧಿಕಾರಿಗಳಾಗಲೀ, ನಾನಾಗಲೀ ಅಥವಾ ಸಚಿವರಾಗಲೀ ಇಂತಹವರಿಗೆ ಮತ ನೀಡಿ ಎಂದು ಹೇಳಿಲ್ಲ ಎಂದು ಸ್ಪಷ್ಠಪಡಿಸಿದ ಶ್ರೀನಿವಾಸ್ ನಮ್ಮ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿಮಂಜು ಅವರು ಸ್ವಾಭಿಮಾನಿಗಳಾಗಿದ್ದು ಅವರು ಪಡೆದಿರುವ ಮತಗಳ ಬಗ್ಗೆ ನಮಗೇ ದಿಗ್ಬ್ರಮೆಯಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಭಿವೃದ್ಧಿಯ ಆಧಾರದ ಮೇಲೆ ಮತವನ್ನು ಕೇಳಿ ಮತ್ತೆ ಗೆಲುವು ಸಾಧಿಸುವ ಮೂಲಕ ನಮ್ಮ ಸಾಮರ್ಥ್ಯವನ್ನು ನಿರೂಪಿಸುತ್ತೇವೆ. ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ನೆಲೆಯನ್ನು ಕಳೆದುಕೊಳ್ಳುತ್ತಿವೆ. ೨೦೨೩ರ ವಿಧಾನಸಭೆಯಲ್ಲಿ ಜಿಲ್ಲೆಯಿಂದ ಕನಿಷ್ಠ ೪ ಜನ ಬಿಜೆಪಿ ಶಾಸಕರು ಗೆಲುವು ಸಾಧಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತೇವೆ. ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತಿದ್ದು ನಮ್ಮನ್ನು ಹಾಗೂ ಕಾರ್ಯಕರ್ತರನ್ನು ನಡುನೀರಿನಲ್ಲಿ ಕೈಬಿಟ್ಟು ಸಚಿವ ನಾರಾಯಣಗೌಡ ಅವರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ, ಇವೆಲ್ಲಾ ಗಿಮಿಕ್ ಮಾಡುತ್ತಿರುವವರು ಅಪಪ್ರಚಾರ ನಡೆಸುತ್ತಿರುವವರು ಕಾಂಗ್ರೇಸ್-ಜೆಡಿಎಸ್ ಪಕ್ಷದ ಮುಖಂಡರು ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ನಾಯಕರಾದ ಸಚಿವ ನಾರಾಯಣಗೌಡರು ನನ್ನ ಅಳಿವು-ಉಳಿವು ಬಿಜೆಪಿ
ಪಕ್ಷದಲ್ಲಿ ಮಾತ್ರ ಎಂದು ಈಗಾಗಲೇ ಒಂದಲ್ಲ ಎರಡಲ್ಲಾ ಹತ್ತು ಬಾರಿ ಸ್ಪಷ್ಠಪಡಿಸಿದ್ದಾರೆ.ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಗೌಡರ ಗೆಲುವು ನೂರಕ್ಕೆ ನೂರರಷ್ಟು ನಿಚ್ಛಳವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್‌ಅರವಿಂದ್, ಹರಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಕರ್ತೇನಹಳ್ಳಿ ಸುರೇಶ್, ಬಿಜೆಪಿ ಮುಖಂಡ ಕೊಮ್ಮೇನಹಳ್ಳಿ ಜಗಧೀಶ್, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ನಗರ ಘಟಕದ ಅಧ್ಯಕ್ಷೆ ಚಂದ್ರಕಲಾರಮೇಶ್ ಮಾತನಾಡಿ ಹೆಚ್.ಟಿ.ಮಂಜು ಸಚಿವ ನಾರಾಯಣಗೌಡ ಅವರನ್ನು ಕುರಿತು ಮಾಡಿರುವ ಆರೋಪಗಳನ್ನು ನಿರಾಕರಿಸಿದರು. ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪಾಪಣ್ಣ, ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ, ಮುಖAಡರಾದ ರಾಚಪ್ಪಗೌಡ, ಕೆ.ವಿನೋದ್, ವಿಎಎಸ್‌ಎಸ್‌ಎನ್ ಬ್ಯಾಂಕಿನ ನಿರ್ದೇಶಕ ಚಂದ್ರು, ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ಮುಖಂಡರಾದ ಸಾರಂಗಿ ಮಂಜುನಾಥಗೌಡ,
ಚೋಕನಹಳ್ಳಿ ಪ್ರಕಾಶ್, ರವಿಶಿವಕುಮಾರ್, ಓಬಿಸಿ ಮೋರ್ಚಾ ಅಧ್ಯಕ್ಷ ಮೊಟ್ಟೆ ನಾಗಣ್ಣ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಆರ್.ಜಗಧೀಶ್ ಮತ್ತಿತರರು
ಉಪಸ್ಥಿತರಿದ್ದರು.

ರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ. ಮಂಡ್ಯ

error: