May 4, 2024

Bhavana Tv

Its Your Channel

ಫೆಬ್ರವರಿ 23 ಕ್ಕೆ ಮಿನಿವಿಧಾನಸೌಧದ ಮುಂಭಾಗದಲ್ಲಿ ರಾಜ್ಯ ರೈತಸಂಘದ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ

ಕೆ.ಆರ್.ಪೇಟೆ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭ್ರಷ್ಠಾಚಾರ ಹಾಗೂ ಲಂಚಾವತಾರವು ಮಿತಿ ಮೀರಿದೆ. ಹಣ ನೀಡದಿದ್ದರೆ ಸರ್ಕಾರದ ಯಾವುದೇ ಇಲಾಖೆಯಲ್ಲಿ ಶ್ರೀ ಸಾಮಾನ್ಯನ ಕೆಲಸ ಕಾರ್ಯಗಳು ಆಗುತ್ತಿಲ್ಲ. ಆದ್ದರಿಂದ ಕಣ್ಣಿದ್ದೂ ಕುರಡರಾಗಿರುವ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಸಚಿವರಾದ ನಾರಾಯಣಗೌಡ ಅವರನ್ನು ಗಾಢವಾದ ನಿದ್ರೆಯಿಂದ ಎಬ್ಬಿಸಲು ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಫೆಬ್ರವರಿ 23 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಮಿನಿವಿಧಾನಸೌಧದ ಮುಂಭಾಗದಲ್ಲಿ ರಾಜ್ಯ ರೈತಸಂಘದ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ರೈತನಾಯಕರಾದ ಮುದುಗೆರೆ ರಾಜೇಗೌಡ ಹೇಳಿದರು ..

ಅವರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ರೈತ ಮುಖಂಡರ ಸಭೆ ನಡೆಸಿ ಚಳುವಳಿಯ ರೂಪುರೇಷೆಗಳನ್ನು ಕುರಿತು ಸಮಾಲೋಚನೆ ನಡೆಸಿ ಮಾತನಾಡಿದರು…

ಕಂದಾಯ ಇಲಾಖೆ, ಪುರಸಭೆ, ತಾಲೂಕು ಪಂಚಾಯತಿ, ಕೃಷಿ, ತೋಟಗಾರಿಕೆ, ಪೋಲಿಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಠಾಚಾರವು ಮುಗಿಲು ಮುಟ್ಟಿದೆ. ಕ್ಷೇತ್ರದ ಶಾಸಕರಾದ ನಾರಾಯಣಗೌಡ ಅವರು ರಾಜ್ಯದ ಸಚಿವರಾಗಿ ತಾಲ್ಲೂಕಿನ ಜನತೆಯ ಹಿತವನ್ನು ಕಡೆಗಣಿಸಿರುವುದರಿಂದ ಅಧಿಕಾರಿಗಳು ಎಲ್ಲೆ ಮೀರಿ ವರ್ತಿಸುವ ಜೊತೆಗೆ ರೈತಾಪಿವರ್ಗದ ಜನರು ಹಾಗೂ ಶ್ರೀಸಾಮಾನ್ಯನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಲಂಚಾವತಾರ ಮಿತಿ ಮೀರಿದೆ. ಅಧಿಕಾರಿಗಳನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ. ಜಡ್ಡುಗಟ್ಟಿರುವ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಹಾಗೂ ಗಾಢವಾದ ನಿದ್ರೆಯಲ್ಲಿದ್ದು ಕಣ್ಣಿದ್ದೂ ಕುರುಡರಾಗಿರುವ ಸಚಿವ ನಾರಾಯಣಗೌಡ ಅವರಿಗೆ ತಾಲ್ಲೂಕಿನ ವಾಸ್ತವ ಚಿತ್ರಣದ ಬಗ್ಗೆ ಅರಿವು ಮೂಡಿಸಲು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಜನರು, ಸಾರ್ವಜನಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಶಕ್ತಿ ತುಂಬಬೇಕು. ಫೆಬ್ರವರಿ 23 ರಂದು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಜೇಗೌಡ ಕರೆ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ಕೃಷ್ಣರಾಜಪೇಟೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು, ರೈತ ಮುಖಂಡರಾದ ಕೆ.ಆರ್.ಜಯರಾಂ, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ಕರೋಟಿ ತಮ್ಮಯ್ಯ, ನಗರೂರುಕುಮಾರ್, ಮಡವಿನಕೋಡಿ ಗಂಗಾಧರ, ಚೌಡೇನಹಳ್ಳಿ ಕೃಷ್ಣೇಗೌಡ, ಲಕ್ಷ್ಮೀಪುರ ಜಗಧೀಶ್ ಸೇರಿದಂತೆ ನೂರಾರು ರೈತರು ಸಮಾಲೋಚನಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು..

ವರದಿ..ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: