May 17, 2024

Bhavana Tv

Its Your Channel

ಮಾರ್ಚ 5 ರಂದು ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿOಗ್ ಕಾಲೇಜು ಆವರಣದಲ್ಲಿ ಮೆಗಾ ಆರೋಗ್ಯಮೇಳ

*ಮಾರ್ಚ 5 ರಂದು ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿoಗ್ ಕಾಲೇಜು ಆವರಣದಲ್ಲಿ ಮೆಗಾ ಆರೋಗ್ಯಮೇಳ..
*20 ಸಾವಿರ ಜನರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಸಿದ್ಧತೆ..ಜಿಲ್ಲಾಧಿಕಾರಿ ಅಶ್ವಥಿ ಪರಿಶೀಲನೆ

ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾರ್ಚ 5 ರಂದು ಬೃಹತ್ ಆರೋಗ್ಯ ಮೇಳವು ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಇಂದು ಆರೋಗ್ಯ ಮೇಳವು ನಡೆಯಲಿರುವ ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿoಗ್ ಕಾಲೇಜಿಗೆ ಅಧಿಕಾರಿಗಳ ತಂಡದೊoದಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು…

ಆರೋಗ್ಯ ಮೇಳದಲ್ಲಿ ಕನಿಷ್ಠ 15 ರಿಂದ 20 ಸಾವಿರ ಜನರು ಪಾಲ್ಗೊಂಡು ಪರೀಕ್ಷೆಗೆ ದಾಖಲಾಗಲಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪಗಳಾಗದಂತೆ ಸಕಲ ಸಿದ್ಧತೆಗಳನ್ನು ಕೈಗೊಂಡು ಆರೋಗ್ಯ ಮೇಳವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿ ಅಶ್ವಥಿ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಮತ್ತು ಆಸ್ಪತ್ರೆಯ ಆರೋಗ್ಯ ತಜ್ಞರು,ತಜ್ಞ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಬಿಜಿಎಸ್ ಅಫೊಲೊ ಆಸ್ಪತ್ರೆ, ಮಂಡ್ಯದ ಮಿಮ್ಸ್ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಗ್ರಂಥಿ ಆಸ್ಪತ್ರೆ, ನಾರಾಯಣ ನೇತ್ರಾಲಯ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಂದ ತಜ್ಞ ವೈದ್ಯರುಗಳ ತಂಡವೇ ಆರೋಗ್ಯ ಮೇಳದಲ್ಲಿ ಭಾಗವಹಿಸಲಿದ್ದು ಆರೋಗ್ಯ ಪರೀಕ್ಷೆ, ಔಷಧ ಮಾತ್ರೆಗಳು, ಕನ್ನಡಕಗಳ ವಿತರಣೆ, ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಕೂಡ ಉಚಿತವಾಗಿ ಮಾಡಿಕೊಡುವಂತೆ ತಿಳಿಸಿರುವ ಕ್ಷೇತ್ರದ ಶಾಸಕರಾದ ಸಚಿವ ಡಾ.ನಾರಾಯಣಗೌಡ ಅವರ ಆಶಯದಂತೆ ಈ ಮೆಗಾ ಆರೋಗ್ಯ ಮೇಳವನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುತ್ತಿದೆ. ಆಸಕ್ತ ಜನರು ಹಾಗೂ ಯುವ ಜನರು ಆರೋಗ್ಯ ಮೇಳದಲ್ಲಿ ಪಾಲ್ಗೊಂಡು ಆರೋಗ್ಯ ಸಂವರ್ಧನೆಗೆ ಮುಂದಾಗಬೇಕು ಎಂದು ಅಶ್ವಥಿ ಮನವಿ ಮಾಡಿದರು.

ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ, ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಆಶಾಕಾಮತ್, ಪುರಸಭೆ ಮುಖ್ಯಾಧಿಕಾರಿ ಕುಮಾರ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷ ಶ್ರೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಮಂಡ್ಯ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಹರೀಶ್, ಗ್ಲೋಬಲ್ ಈವೆಂಟ್ಸ್ ಸಂಸ್ಥೆಯ ಕನ್ನಡವೇ ಸತ್ಯ ರಂಗಣ್ಣ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

25 ಕೌಂಟರ್ ಗಳಂತೆ 100 ಕೌಂಟರ್ ಗಳ ಆಯೋಜನೆ..
ಆರೋಗ್ಯ ಮೇಳದಲ್ಲಿ ಭಾಗವಹಿಸಲು ಆಗಮಿಸುವವರು ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ನೊಂದಿಗೆ ಆಗಮಿಸಿ ತಮ್ಮ ಹೆಸರನ್ನು ಪ್ರತ್ಯೇಕವಾಗಿ ನೊಂದಣಿ ಮಾಡಿಸಿಕೊಳ್ಳಬೇಕು. ಹೆಸರು ನೊಂದಣಿಗೆ 25 ಕೌಂಟರ್ ಗಳು, ಹೃದ್ರೋಗ, ರಕ್ತದೊತ್ತಡ ಮತ್ತು ಷುಗರ್ ತಪಾಸಣೆಗೆ 25 ಕೌಂಟರ್ ಸೇರಿದಂತೆ ಔಷಧಗಳನ್ನು ಪಡೆದುಕೊಳ್ಳಲು 25 ಕೌಂಟರ್ ಗಳನ್ನು ಸಿದ್ಧಪಡಿಸಲಾಗಿದೆ. ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ತಜ್ಞವೈದ್ಯರುಗಳ ತಂಡವೇ ಪರಿಶೀಲನೆ ಮಾಡಲಿದ್ದು ಗರ್ಭಕೋಶದ ಸಮಸ್ಯೆ, ಕಿಡ್ನಿ ಸಮಸ್ಯೆ, ಕಣ್ಣಿನ ತೊಂದರೆ ಸೇರಿದಂತೆ ಅತೀ ಜರೂರಾಗಿ ಚಿಕಿತ್ಸೆಯನ್ನು ನೀಡಬೇಕಾದವರಿಗೆ ಬೆಳ್ಳೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಸ್ಪತ್ರೆಗೆ ಕರೆದೊಯ್ದು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಸುರಕ್ಷಿತವಾಗಿ ಅವರವರ ಊರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ವಿವರಿಸಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯ ಆರೋಗ್ಯ ಸಂವರ್ಧನೆಗಾಗಿ ಸಚಿವ ನಾರಾಯಣಗೌಡ ಅವರು ವಿಶೇಷವಾಗಿ ಕಾಳಜಿ ವಹಿಸಿ ತಾಲ್ಲೂಕಿನ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಬೃಹತ್ ಆರೋಗ್ಯ ಮೇಳವನ್ನು ಆಯೋಜಿಸಿದ್ದಾರೆ. ತಾಲ್ಲೂಕಿನ ಸಾರ್ವಜನಿಕ ಬಂಧುಗಳು, ಮಹಿಳೆಯರು, ಯುವಜನರು ಈ ಶಿಬಿರದ ಸದುಪಯೋಗ ಪಡಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ಯಾವುದೂ ಇಲ್ಲವೆಂಬ ಸತ್ಯ ಅರಿಯಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: