May 2, 2024

Bhavana Tv

Its Your Channel

ಮಡವಿನಕೋಡಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಪ್ರಕಾಶ್ ಅವಿರೋಧ ಆಯ್ಕೆ

ಕೃಷ್ಣರಾಜಪೇಟೆ ತಾಲ್ಲೂಕಿನ ಮಡವಿನಕೋಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ವಿಶಾಲಾಕ್ಷಿಪ್ರಕಾಶ್ ಅವರನ್ನು ಸಚಿವ ನಾರಾಯಣಗೌಡ ಅಭಿನಂದಿಸಿ ಗೌರವಿಸಿದರು..

ಮೆಳ್ಳಳ್ಳಿ ಗ್ರಾಮದ ಬಿಜೆಪಿ ಮುಖಂಡ ಪ್ರಕಾಶ್ ಅವರ ಧರ್ಮಪತ್ನಿಯಾದ ವಿಶಾಲಾಕ್ಷಿ ಅವರು ಮಡವಿನಕೋಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜ್ಯದ ಯುವಜನ ಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅಭಿನಂದಿಸಿ ಗೌರವಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಜನಪರವಾಗಿ ಕೆಲಸ ಮಾಡುವಂತೆ ಶುಭ ಹಾರೈಸಿದರು…

ಬಿಜೆಪಿ ಪಕ್ಷದ ಮುಖಂಡರ ಸಮಕ್ಷಮದಲ್ಲಿ ಆದ ಒಪ್ಪಂದದAತೆ ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವಿಶಾಲಾಕ್ಷಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸತೀಶ್ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದ್ದರು..

ಮಡವಿನಕೋಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ವಿಶಾಲಾಕ್ಷಿ ಅವರನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖಂಡರಾದ ಶೀಳನೆರೆ ಅಂಬರೀಶ್, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ, ಸಾರಂಗಿಮAಜುನಾಥಗೌಡ, ಮುಖಂಡ ಕೆ.ವಿನೋದ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್ ಅಭಿನಂದಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: