April 27, 2024

Bhavana Tv

Its Your Channel

ವಿಶ್ರಾಂತ ಶಿಕ್ಷಕ ನವಿಲುಮಾರನಹಳ್ಳಿ ತಿಮ್ಮೇಗೌಡ ಅವರು ರಚಿಸಿರುವ ಸಾಮಾಜಿಕ ಸಂದೇಶ ನೀಡುವ ಏಳು ಪುಸ್ತಕಗಳು ಬಿಡುಗಡೆ

ಕೆ.ಆರ್.ಪೇಟೆ :– ಶ್ರೀರಾಮ ಆದರ್ಶ ವ್ಯಕ್ತಿಯಲ್ಲ..ದೇವರಂತೂ ಅಲ್ಲವೇ ಅಲ್ಲ ಅವನೊಬ್ಬ ನಿರ್ಧಯಿ, ತನ್ನ ಗರ್ಭಿಣಿ ಪತ್ನಿ ಸೀತೆಯನ್ನು 18 ವರ್ಷಗಳ ಕಾಲ ಕಾಡಿಗಟ್ಟಿದ, ತನ್ನ ಸೇವಕ ಶಂಭೂಕನನ್ನು ಕರುಣೆಯಿಲ್ಲದೇ ಹತ್ಯೆ ಮಾಡಿಸಿದ ವ್ಯಕ್ತಿ ಹೇಗೆ ದೇವರಾಗುತ್ತಾನೆ..ನಮಗೆ ರಾಮರಾಜ್ಯ ಬೇಕಾಗಿಲ್ಲ..ಸರ್ವರಿಗೂ ಸಮಾನತೆಯ ಸಂದೇಶ ನೀಡುವ ಸಂವಿಧಾನದ ಆಶಯಗಳ ಅನುಷ್ಠಾನದ ತಳಹದಿಯ ರಾಜ್ಯ ಬೇಕು ಎಂದು ನಾಡಿನ ಖ್ಯಾತ ವಿಚಾರವಾಧಿಗಳು ಹಾಗೂ ಚಿಂತಕರಾದ ಮೈಸೂರಿನ ಪ್ರೊ.ಕೆ.ಎಸ್.ಭಗವಾನ್ ಹೇಳುವ ಮೂಲಕ ವಿವಾಧದ ಕಿಡಿ ಹತ್ತಿಸಿದರು ..

ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿ ವಿಶ್ರಾಂತ ಶಿಕ್ಷಕ ನವಿಲುಮಾರನಹಳ್ಳಿ ತಿಮ್ಮೇಗೌಡ ಅವರು ರಚಿಸಿರುವ ಸಾಮಾಜಿಕ ಸಂದೇಶ ನೀಡುವ ಏಳು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು..

ಅಹಿಂಸೆಯ ಸಂದೇಶ ಸಾರಿದ ಭಗವಾನ್ ಗೌತಮಬುದ್ಧ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿದ್ದಾನೆ. ಬುದ್ಧರ ತತ್ವ ಸಂದೇಶಗಳೇ ಸರ್ವಶ್ರೇಷ್ಠ ಎಂದು ಸ್ವಾಮಿ ವಿವೇಕಾನಂದರೇ ಒಪ್ಪಿಕೊಂಡಿದ್ದಾರೆ.

ವೈಚಾರಿಕತೆಯನ್ನು ಪ್ರತಿಪಾದಿಸಿದ, ತುಳಿತಕ್ಕೊಳಗಾದವರ ಪರವಾಗಿ ತಾವು ರಚಿಸಿದ ಸಾಹಿತ್ಯದ ಪರವಾಗಿ ಧನಿಯೆತ್ತಿದ ರಾಷ್ಟ್ರಕವಿ ಕುವೆಂಪು ಅವರು ನಮಗೆ ಆದರ್ಶ ಎಂದು ಹೇಳಿದ ಪ್ರೊ. ಭಗವಾನ್ ನಿವೃತ್ತ ಶಿಕ್ಷಕರಾದ ಎನ್.ಎಂ.ತಿಮ್ಮೇಗೌಡ ಅವರಲ್ಲಿಯೂ ಸಾಮಾಜಿಕ ತುಡಿತವಿದೆ. ಈ ಸಾಮಾಜಿಕ ಜಾಗೃತಿಯ ಸಂದೇಶವು ತಾವು ರವಿಸಿರುವ ಪುಸ್ತಕಗಳಲ್ಲಿ ವ್ಯಕ್ತವಾಗಿದೆ.

ಇಂದು ಬಿಡುಗಡೆಯಾದ ನಾಲ್ಕು ಆಂಗ್ಲಭಾಷಾ ಹಾಗೂ ಮೂರು ಕನ್ನಡ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗುತ್ತಿರುವ ಅಪರೂಪದ ಪುಸ್ತಕಗಳಾಗಿವೆ. ನಮಗೆ ಬೇಕಾಗಿರುವುದು ಸರ್ವ ಜನಾಂಗದ ಶಾಂತಿಯ ತೋಟವೇ ಹೊರತು ಹಿಂದುತ್ವವಲ್ಲ, ನಾನು ನನ್ನದು ಎಂಬ ಸ್ವಾರ್ಥವನ್ನು ಬದಿಗಿಟ್ಟು ಸಮಾಜಮುಖಿಯಾಗಿ ಜೀವನ ನಡೆಸಬೇಕು ಎನ್ನುವುದು ಬುದ್ಧನ ಚಿಂತನೆಗಳಾಗಿವೆ.

ಈ ಚಿಂತನೆಯನ್ನು ದಾರಿದೀಪವನ್ನಾಗಿ ಮಾಡಿಕೊಂಡು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸುವಂತಾಗಬೇಕು..

ನಮಗೆ ರಾಮಮಂದಿರ ಬೇಕಾಗಿಲ್ಲ, ಎಲ್ಲರನ್ನು ಸಮಾನವಾಗಿ ಪ್ರೀತಿಸುತ್ತಾ ತನ್ನ ಒಡಲಿನಲ್ಲಿಟ್ಟುಕೊಂಡು ಆಶ್ರಯ ನೀಡಿ ಸಾಕಿ ಸಲಹುತ್ತಿರುವ ತಾಯಿ ಭೂದೇವಿಯನ್ನು ಪೂಜಿಸಿ ಗೌರವಿಸಬೇಕು.
ಬುದ್ಧರ ತತ್ವ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿವೆ.

ಬುದ್ಧನ ಸಂದೇಶಗಳನ್ನು ಅನುಸರಿಸಿದರೆ ಸಾಕು ಇಂದು ನಮ್ಮನ್ನು ಕಾಡುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟಹಾಕಿ ಜಾತಿ, ಮತ ಪಂಥಗಳಿAದ ಮುಕ್ತವಾದ ಸಮಾನತೆಯಿಂದ ಕೂಡಿರುವ ಸಮ ಸಮಾಜವನ್ನು ನಿರ್ಮಿಸಬಹುದು ಎಂದು ಭಗವಾನ್ ಅಭಿಪ್ರಾಯಪಟ್ಟರು..

ಮಂಡ್ಯದ ವಿಚಾರವಾಧಿಗಳಾದ ಕೆ.ಮಾಯಿಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಿಮ್ಮೇಗೌಡರು ರಚಿಸಿರುವ ಪುಸ್ತಕಗಳ ಕುರಿತು ಮಾತನಾಡಿ ಕೃಷ್ಣರಾಜಪೇಟೆ ತಾಲ್ಲೂಕಿನ ತಮ್ಮ ಹುಟ್ಟೂರು ನವಿಲುಮಾರನಹಳ್ಳಿ ಹಾಗೂ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರಲ್ಲದೇ ತಾವು ಬೆಳೆದು ಬಂದು ವಿಚಾರವಾಧಿಯಾದ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು..

ಕೆ.ಆರ್.ಪೇಟೆ ತಾಲ್ಲೂಕು ಜಾನಪದ ಪರಿಷತ್ ಮಾಜಿಅಧ್ಯಕ್ಷ ಕೆ.ಎಸ್.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು..

ಚಿಂತಕರಾದ ಬೋರೇಗೌಡ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ಕೃತಿಗಳ ಕತೃ ತಿಮ್ಮೇಗೌಡ ಅವರ ಪತ್ನಿ ಇಂದ್ರಮ್ಮ, ಪುತ್ರಿ ಡಾ.ಪ್ರಿಯಾಂಕಾ, ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಪ್ರಾಥಮಿಕ ಶಾಲಾ ಶಿಕ್ಚಕರ ಸಂಘದ ಅಧ್ಯಕ್ಷ ಪದ್ಮೇಶ್, ಗ್ರಾಮಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಸಿ.ಕಿರಣಕುಮಾರ್, ಎಸ್.ಎಂ.ಲಿAಗಪ್ಪ ಶಿಕ್ಷಣಮಹಾವಿದ್ಯಾಲಯದ ಪ್ರಾಂಶುಪಾಲ ಪಿ.ಸುರೇಶ್ ಸೇರಿದಂತೆ ಪ್ರಗತಿಪರ ಚಿಂತಕರು ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಗಿ ಪೋಲಿಸ್ ಸರ್ಪಗಾವಲಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ..

ಸನಾತನ ಹಿಂದೂ ಧರ್ಮ ಹಾಗೂ ಬ್ರಾಹ್ಮಣಿಕೆ, ಪುರೋಹಿತಶಾಹಿ ವ್ಯವಸ್ಥೆಯ ಕಡುವಿರೋಧಿಯಾಗಿರುವ ಪ್ರೊ.ಕೆ.ಎಸ್.ಭಗವಾನ್ ಅವರ ಮೇಲೆ ಭಗರಂಗದಳ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಮಸಿ ಬಳಿಯುವ ಸಾಧ್ಯತೆ ಇದ್ದುದರಿಂದ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು..

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: