May 3, 2024

Bhavana Tv

Its Your Channel

ಪ್ರಗತಿಪರ ರೇಷ್ಮೆ ಬೆಳೆಗಾರರು ಎರಡು ದಿನಗಳ ಅಧ್ಯಯನ ಪ್ರವಾಸ ಹೊರಟ ಬಸ್ಸನ್ನು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟು ಶುಭ ಹಾರೈಸಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಗತಿಪರ ರೇಷ್ಮೆ ಬೆಳೆಗಾರರು ಎರಡು ದಿನಗಳ ಅಧ್ಯಯನ ಪ್ರವಾಸ ಹೊರಟ ಬಸ್ಸನ್ನು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟು ಶುಭ ಹಾರೈಸಿದ ರೇಷ್ಮೆ ಸಚಿವ ಡಾ.ನಾರಾಯಣಗೌಡ.. ರೈತರ ಸಂತಸ

ರೇಷ್ಮೆ ಬೆಳೆಯು ಅತ್ಯಂತ ಕಡಿಮೆ ಅವಧಿಯಲ್ಲಿ ರೈತಬಾಂಧವರಿಗೆ ಹೆಚ್ಚಿನ ಲಾಭವನ್ನು ತಂದುಕೊಡುವ ಬಂಗಾರದ ಬೆಳೆಯಾಗಿದೆ. ಆದ್ದರಿಂದ ರೈತರು ರೇಷ್ಮೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚು ಲಾಭಗಳಿಸಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬೇಕು ಎಂದು ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಹೇಳಿದರು..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯ ಆವರಣದಿಂದ ರೇಷ್ಮೆ ಕೃಷಿ ಅಧ್ಯಯನ ಹಾಗೂ ಪ್ರಾತ್ಯಕ್ಷತೆ ಪ್ರವಾಸ ಹೊರಟ ಕೃಷ್ಣರಾಜಪೇಟೆ ತಾಲ್ಲೂಕು ಬೈವೋಲ್ಟಿನ್ ರೇಷ್ಮೆ ಬಿತ್ತನೆಗೂಡು ಉತ್ಪಾದಕರ ಕಂಪನಿಯ ಪ್ರಗತಿಪರ ರೈತರ ಬಸ್ಸನ್ನು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟು ಮಾತನಾಡಿದರು..

ಬೈವೋಲ್ಟಿನ್ ರೇಷ್ಮೆ ಬೇಸಾಯ ಮಾಡಲು ತಾಲ್ಲೂಕಿನ ಹವಾಮಾನ ಹಾಗೂ ಮಣ್ಣಿನ ಫಲವತ್ತತೆಯು ಹೇಳಿ ಮಾಡಿಸಿದಂತಹ ವಾತಾವರಣವಿದೆ. ಆದ್ದರಿಂದ ರೇಷ್ಮೆ ಬೇಸಾಯ ಮಾಡುವ ಪ್ರಗತಿಪರ ರೈತರ ತೋಟಗಳಿಗೆ ಪ್ರವಾಸ ಹೊರಟಿರುವ ತಾಲ್ಲೂಕಿನ ರೇಷ್ಮೆ ಬೆಳೆಗಾರರು ಅಲ್ಲಿನ ಬೆಳೆಗಾರರು ಅಳವಡಿಸಿಕೊಂಡಿರುವ ತಂತ್ರಜ್ಞಾನ ಹಾಗೂ ಬೇಸಾಯ ಕ್ರಮಗಳನ್ನು ಅರಿತು, ಅಲ್ಲಿಯಂತೆಯೇ ಇಲ್ಲೂ ರೇಷ್ಮೆ ಬೆಳೆ ಬೇಸಾಯ ಮಾಡಿ ಹೆಚ್ಚು ಇಳುವರಿಯನ್ನು ಪಡೆದುಕೊಳ್ಳುವ ಮೂಲಕ ಹೆಚ್ಚು ಲಾಭಗಳಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಸಚಿವ ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು..

ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಬೈವೋಲ್ಟಿನ್ ರೇಷ್ಮೆ ಬಿತ್ತನೆಗೂಡು ಉತ್ಪಾದಕರ ಕಂಪನಿಯ ಅಧ್ಯಕ್ಷ ಐಚನಹಳ್ಳಿ ಶಿವಣ್ಣ, ಪ್ರಗತಿಪರ ರೈತರಾದ ಗೋಪಾಲ್, ಹಿರಳಹಳ್ಳಿ ತಿಮ್ಮೇಗೌಡ, ಲಕ್ಷ್ಮಣ, ಕಾಮನಹಳ್ಳಿ ಬೋರೇಗೌಡ, ಸಿಇಓ ಆನಂದ್, ತಾಲ್ಲೂಕು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಪ್ಪ, ಮಾರುಕಟ್ಟೆ ವಿಭಾಗದ ಸಹಾಯಕ ನಿರ್ದೇಶಕ ಲೋಕೇಶ್ ಸೇರಿದಂತೆ ಐವತ್ತಕ್ಕೂ ಹೆಚ್ಚು ರೈತರು ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಎರಡು ದಿನಗಳ ಪ್ರವಾಸ ಹೊರಟರು..

ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ , ಮಂಡ್ಯ

error: