May 3, 2024

Bhavana Tv

Its Your Channel

ಅದ್ದೂರಿಯಾಗಿ ನಡೆದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ

ಅದ್ದೂರಿಯಾಗಿ ನಡೆದ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಆರಾಧ್ಯದೈವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ, ಆಗಸದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿನಮನ ಸಲ್ಲಿಸಿದ ಗರುಡ ಪಕ್ಷಿ, ಮುಗಿಲು ಮುಟ್ಟಿದ ಸಂಭ್ರಮ .. ಉತ್ಸವಮೂರ್ತಿಯ ಅಡ್ಡಪಲ್ಲಕಿ ಉತ್ಸವದಲ್ಲಿ ಹೆಗಲು ಕೊಟ್ಟು ಮೆರವಣಿಗೆ ಮಾಡಿ ಹರಕೆ ತೀರಿಸಿದ ಸಚಿವ ಡಾ.ನಾರಾಯಣಗೌಡ ..

ಕೃಷ್ಣರಾಜಪೇಟೆ ತಾಲ್ಲೂಕಿನ ಗೌತಮ ಮಹರ್ಷಿಗಳ ತಪೋಭೂಮಿ, ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ಅಕ್ಕಿಹೆಬ್ಬಾಳು ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮ ರಥೋತ್ಸವವು ಸಡಗರ ಸಂಭ್ರಮದಿAದ ಅದ್ದೂರಿಯಾಗಿ ನಡೆಯಿತು…

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ, ತಹಶೀಲ್ದಾರ್ ನಿಸರ್ಗಪ್ರಿಯಾ, ಜೆಡಿಎಸ್ ಯುವಮುಖಂಡ ರಘು, ಜಿ.ಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಹಾಗೂ ಸಮಾಜಸೇವಕ ಡಿ.ಪಿ.ಪರಮೇಶ್ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಉತ್ಸವ ಮೂರ್ತಿಯ ಅಡ್ಡಪಲ್ಲಕಿ ಉತ್ಸವವನ್ನು ಹೊತ್ತು ಮೆರವಣಿಗೆ ನಡೆಸಿದ್ದಲ್ಲದೇ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು..
ಹೊನ್ನಾರು ಸಾಂಸ್ಕೃತಿಕ ವೇದಿಕೆ ಹಾಗೂ ಬ್ರಾಹ್ಮಣ ಮಹಾಸಭಾದ ವತಿಯಿಂದ ರಥೋತ್ಸವದಲ್ಲಿ ಭಾಗವಹಿಸಿದ್ದ 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು..

ಉಘೇ ನಾರಸಿಂಹ, ಉಘೇ ಗೋವಿಂದ, ಉಘೇ ಶ್ರೀ ಹರಿ, ಉಘೇ ಶ್ರೀನಿವಾಸ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು..ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಶ್ರೀ ರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿ ಕೃತಾರ್ಥರಾದರು..

ಸಚಿವ ಡಾ.ನಾರಾಯಣಗೌಡ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ರಥೋತ್ಸವಕ್ಕೆ ವಿಶೇಷವಾದ ಶಕ್ತಿಯಿದೆ. ರಥೋತ್ಸವಕ್ಕೆ ಚಾಲನೆ ನೀಡುವ ಮುನ್ನ ಆಗಸದಲ್ಲಿ ಕಾಣಿಸಿಕೊಂಡ ಗರುಡ ಪಕ್ಷಿಯು ದೇವಾಲಯದ ಆವರಣದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿಭಾವವನ್ನು ಸಮರ್ಪಣೆ ಮಾಡಿದ ನಂತರವೇ ರಥೋತ್ಸವಕ್ಕೆ ಚಾಲನೆ ಸಿಗುವ ಸಂಪ್ರದಾಯವು ನಡೆದು ಬಂದಿದ್ದು. ಈ ಪುರಾತನ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯವು ಇಂದಿಗೂ ನಡೆದು ಬಂದಿರುವುದು ವಿಶೇಷವಾಗಿದೆ ಎಂದು ಸ್ಮರಿಸಿದ ಸಚಿವರು ಶ್ರೀ ಲಕ್ಷ್ಮೀ ನಾರಸಿಂಹಸ್ವಾಮಿಯವರ ಅಡ್ಡಪಲ್ಲಕಿ ಉತ್ಸವವನ್ನು ಹೆಗಲಮೇಲೆ ಹೊರುವ ಸೌಭಾಗ್ಯವು ನನಗೆ ದೊರಕಿರುವುದು ನನ್ನ ಸುಕೃತ ಪುಣ್ಯವಾಗಿದೆ. ಇಂದಿನ ವಿಶೇಷ ದಿನದಂದು ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದ ನಾನಾ ಭಾಗಗಳು ಸೇರಿದಂತೆ ಚನ್ನೈ, ತಿರುಪತಿ, ತಂಜಾವೂರು, ಹೈದರಾಬಾದ್, ಶ್ರೀರಂಗA ನಿಂದ ಸಾವಿರಾರು ಸಂಖ್ಯೆಯಲ್ಲಿ ವಿಪ್ರ ಬಾಂಧವರು ರಥೋತ್ಸವದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ ಎಂದು ಅಭಿಮಾನದಿಂದ ಹೇಳಿದರು..

ರಥೋತ್ಸವ ಸಂಭ್ರಮದಲ್ಲಿ ಉಪತಹಶೀಲ್ದಾರ್ ಜಯಪ್ಪ, ಸಮಾಜಸೇವಕರಾದ ವಿಜಯರಾಮೇಗೌಡ, ಆಲಂಬಾಡಿಕಾವಲು ಮಲ್ಲಿಕಾರ್ಜುನ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಜೆಡಿಎಸ್ ಮುಖಂಡ ರಘು, ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಅಣ್ಣಯ್ಯ, ಪಿಎಲ್ ಡಿ ಬ್ಯಾಂಕ್ ಮಾಜಿಅಧ್ಯಕ್ಷರಾದ ಎ.ಜೆ. ದಿವಾಕರ್, ರಾಮಕೃಷ್ಣೇಗೌಡ, ರಾಜಶ್ವನಿರೀಕ್ಷಕ ನರೇಂದ್ರ, ಪೋಲಿಸ್ ಇನ್ಸ್ ಪೆಕ್ಟರ್ ಜಗಧೀಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗೇಶ್ವರಿ, ಉಪಾಧ್ಯಕ್ಷ ಸತೀಶ್, ರವಿಕುಮಾರ್, ವಾಸು, ಮಹೇಶನಾಯಕ, ರಕ್ಷಿತದಿನೇಶ್, ಪರಮೇಶನಾಯಕ, ರಾಜನಾಯಕ, ಶಿವರಾಮನಾಯಕ, ದೇವಾಲಯದ ಪಾರುಪತ್ತೇಗಾರ್ ರಮೇಶ್, ರಂಗತಜ್ಞ ಶಶಿಧರ ಭಾರೀಗಾಟ್, ಕನ್ನಡಸಂಸ್ಕೃತಿ ಇಲಾಖೆಯ ವಿಶ್ರಾಂತ ರಿಜಿಸ್ಟ್ರಾರ್ ಎ.ಎಸ್.ನಾಗರಾಜು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: