December 4, 2024

Bhavana Tv

Its Your Channel

ಐಸಿಎಇಟಿ-೨೦೨೩ ಅತ್ಯಾಧುನಿಕ ತಾಂತ್ರಿಕ ತಂತ್ರಜ್ಞಾನದ ಅನುಕೂಲಗಳು ಕುರಿತ ವಿಚಾರಸಂಕಿರಣ

ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ನಡೆದ ಅಂತರಾಷ್ಟ್ರೀಯ ವಿಚಾರ ಸಂಕಿರಣ. ಐಸಿಎಇಟಿ-೨೦೨೩ ಅತ್ಯಾಧುನಿಕ ತಾಂತ್ರಿಕ ತಂತ್ರಜ್ಞಾನದ ಅನುಕೂಲಗಳು ಕುರಿತ ವಿಚಾರಸಂಕಿರಣ ಉದ್ಘಾಟಿಸಿದ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಡೀನ್ ಆಗಿರುವ ಡಾ.ಬಿ.ಸದಾಶಿವೇಗೌಡ…

ಜಾಗತಿಕ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಅನ್ವೇಶಣೆ ಹಾಗೂ ಸವಾಲುಗಳನ್ನು ಎದುರಿಸಲು ಭಾರತ ದೇಶದ ಯುವ ಎಂಜಿನಿಯರುಗಳು ಸನ್ನದ್ಧರಾಗಿದ್ದು ಸದೃಡರಾಗಿದ್ದಾರೆ ಎಂದು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿ0ಗ್ ಕಾಲೇಜು ಪ್ರಾಂಶುಪಾಲ ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಡೀನ್ ಆಗಿರುವ ಡಾ.ಬಿ.ಸದಾಶಿವೇಗೌಡ ಹೇಳಿದರು ..
ಅವರು ಇಂದು ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಎಂಜಿನಿಯರಿ0ಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಅತ್ಯಾಧುನಿಕ ತಾಂತ್ರಿಕ ತಂತ್ರಜ್ಞಾನದ ಪ್ರಯೋಜನಗಳ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು…
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಎಂಜಿನಿಯರಿ0ಗ್ ಸಂಶೋಧನೆಯಲ್ಲಿ ಭಾರತ ದೇಶವು ವಿಶ್ವದ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರದ ತಾಂತ್ರಿಕ ಕೌಶಲ್ಯಕ್ಕಿಂತಲೂ ಹೆಚ್ಚಿನ ತಂತ್ರಜ್ಞಾನವನ್ನು ಪಡೆದಿದ್ದು ಪ್ರತಿನಿತ್ಯವೂ ಹೊಸ ಹೊಸ ವೈಜ್ಞಾನಿಕ ತಾಂತ್ರಿಕ ಆವಿಷ್ಕಾರಗಳನ್ನು ಮಾಡುತ್ತ ವಿಶ್ವದ ಹಿರಿಯಣ್ಣನಾಗಿರುವ ಅಮೇರಿಕಾ ದೇಶವನ್ನೇ ಹಿಂದಿಕ್ಕಿ ಮುಂದುವರೆಯುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ಯುವ ಎಂಜಿನಿಯರಿAಗ್ ಸಂಶೋಧಕರಿಗೆ ಭಾರೀ ಬೇಡಿಕೆಯಿದೆ ಎಂದು ತಿಳಿಸಿದ ಡಾ.ಬಿ.ಸದಾಶಿವೇಗೌಡ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವ ತಾಂತ್ರಿಕ ಸಂಶೋಧನೆಗಳು ಇಂದಿಗೂ ಮಹತ್ವ ಪಡೆದಿವೆ ಎಂದು ಹೇಳಿದರು..
ಡಿಇಎಸ್‌ಇ ನೆಟ್‌ವರ್ಕ್ ಪ್ರಾಜೆಕ್ಟ್ ನ ಮುಖ್ಯಸ್ಥರಾದ ಡಾ.ಅಶೋಕರಾವ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಯುವ ಎಂಜಿನಿಯರುಗಳು ಸಾಧಿಸುವ ಛಲವನ್ನು ಹೊಂದಿರುವ ಪ್ರತಿಭೆಗಳಾಗಿದ್ದು ಅವರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರೆ ಸಾಕು ಹೊಸ ಹೊಸ ತಾಂತ್ರಿಕ ಸಂಶೋಧನೆಗಳನ್ನು ಕಂಡು ಹಿಡಿಯುವ ಮೂಲಕ ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಲಿದ್ದಾರೆ. ಭಾರತೀಯ ಎಂಜಿನಿಯರುಗಳು ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ತಾಂತ್ರಿಕ ಕ್ಷೇತ್ರಕ್ಕೆ ಹೊಸ ಸಂಶೋಧನಾ ಕೊಡುಗೆ ನೀಡುವ ಮೂಲಕ ವಿಶ್ವಮಟ್ಟದಲ್ಲಿ ನಮ್ಮ ದೇಶದ ಕೀರ್ತಿಯನ್ನು ಬೆಳಗಿ ಸಾಧಕರಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು..
ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೆ.ಆರ್.ಪೇಟೆಯ ನಮ್ಮ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ನಮ್ಮ ಕಾಲೇಜಿನ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಅದ್ಭುತವಾದ ಸಾಧನೆಯನ್ನು ಮಾಡುತ್ತಾ ಕಾಲೇಜಿನ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಇಂದು ನಡೆಯುತ್ತಿರುವ ಅಂತರಾಷ್ಟ್ರೀಯ ವಿಚಾರ ಸಂಕಿರಣವು ನಮ್ಮ ಕಾಲೇಜಿನ ಹಿರಿಮೆಗೆ ಗರಿ ಮೂಡಿಸಿದಂತಾಗಿದೆ ಎಂದು ಹೇಳಿದರು..
ರಾಮನಗರ ಸರ್ಕಾರಿ ಎಂಜಿನಿಯರಿ0ಗ್ ಕಾಲೇಜು ಪ್ರಾಂಶುಪಾಲ ಡಾ.ಜಿ.ಪುಂಡಲೀಕ, ಬೆಂಗಳೂರಿನ ಎಸ್.ಜೆ.ಸಿ.ಇ ತಾಂತ್ರಿಕ ಶಿಕ್ಷಣ ಕಾಲೇಜು ಪ್ರಾಂಶುಪಾಲ ಡಾ.ಕೆ.ಜಿ.ಚಂದ್ರಶೇಖರ್, ಚಾಮರಾಜನಗರದ ಸರ್ಕಾರಿ ಎಂಜಿನಿಯರಿ0ಗ್ ಕಾಲೇಜು ಪ್ರಾಂಶುಪಾಲ ಡಾ.ಕೆ.ವೆಂಕಟೇಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಿದರು..
ಕಾಲೇಜಿನ ಪ್ರಾಧ್ಯಾಪಕರಾದ ಡಾ.ನಾಗಭೂಷಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು..ಕಾರ್ಯಕ್ರಮದ ಆಯೋಜಕರಾದ ಡಾ.ಬಿ.ಎಂ.ರುದ್ರೇಶ್, ರಿಜಿಸ್ಟ್ರಾರ್ ಮಂಜುನಾಥ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ಕಾರ್ಯಕ್ರಮಕ್ಕೂ ಮುನ್ನ ನಾಡಿನ ಸರಳ ಸಜ್ಜನ ರಾಜಕಾರಣಿ ಕೆ.ಆರ್.ಪೇಟೆ ಕೃಷ್ಣ ಹಾಗೂ ಭಾರತರತ್ನ ಸರ್. ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿ ಗೌರವಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ, ಮಂಡ್ಯ

error: