April 28, 2024

Bhavana Tv

Its Your Channel

ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯ ಬೆದರಿಕೆಯಿಂದ ಆಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದ ಮಹಿಳೆ.

ಮಳವಳ್ಳಿ : ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯ ಬೆದರಿಕೆಯಿಂದ ಆಘಾತಕ್ಕೆ ಒಳಗಾದ ಮಹಿಳೆಯೊಬ್ಬರು ಕುಸಿದು ಬಿದ್ದು ಅಸ್ವಸ್ಥಗೊಂಡ ಪ್ರಸಂಗ ಜರುಗಿತು.
ಮಳವಳ್ಳಿ ತಾಲೂಕಿನ ಬಿ ಜಿ ಪುರ ಗ್ರಾಮ ಪಂಚಾಯತಿ ಮುಂಭಾಗದ ಆವರಣದಲ್ಲಿ ಆಯೋಜಿಸಿದ್ದ ವಸತಿ ಯೋಜನೆಯ ಪಲಾನುಭವಿಗಳ ಆಯ್ಕೆ ಸಂಬoಧಿಸಿದoತೆ ಆಯೋಜಿಸಲಾಗಿದ್ದ ಗ್ರಾಮ ಸಭೆಯಲ್ಲಿ ಈ ಘಟನೆ ಜರುಗಿತು.
ಸಭೆಯ ಪ್ರಾರಂಭದಲ್ಲೇ ನೋಡಲ್ ಅಧಿಕಾರಿ ಜಯಪ್ರಕಾಶ್ ಅವರು ಈಗಾಗಲೇ ಆಯ್ಕೆ ಮಾಡಿರುವ ತಮ್ಮ ಆಯ್ಕೆಪಟ್ಟಿಯನ್ನು ಓದಲು ಪ್ರಾರಂಭಿಸಿದಾಗ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮಸಭೆಯಲ್ಲಿ ಜನರು ಹಾಗೂ ಚುನಾಯಿತ ಪ್ರತಿನಿಧಿ ಗಳ ಸಮ್ಮುಖದಲ್ಲಿ ಪಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸದಿರುವ ಅಧಿಕಾರಿಗಳ ಕ್ರಮದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಂತೆ ಗರಂ ಆದ ನೋಡಲ್ ಅಧಿಕಾರಿ ವಿಡಿಯೋ ಮಾಡಿ ನಿಮ್ಮ ಮೇಲೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ ಅಧಿಕಾರಿ ವರ್ತನೆಗೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ದ್ಯಾವಪಟ್ಟಣ ಗ್ರಾಮದ ಪಲಾನುಭವಿಗಳ ಆಯ್ಕೆ ವಿಚಾರವಾಗಿ ಅಧ್ಯಕ್ಷೆ ಪ್ರೇಮ ಹಾಗೂ ಮಹದೇವಮ್ಮ ಅವರ ನಡುವೆ ನಡೆದ ಮಾತಿನ ಚಕಮಕಿ ವೇಳೆ ಸಹ ಮಧ್ಯ ಪ್ರವೇಶಿಸಿದ ನೋಡಲ್ ಅಧಿಕಾರಿ ಜಯಪ್ರಕಾಶ್ ಮಹದೇವಮ್ಮ ಅವರಿಗೆ ನಿಮಗೆ ಸರ್ಕಾರಿ ಸೌಲಭ್ಯಗಳನ್ನು ನಿಲ್ಲಿಸಿ ನಿಮ್ಮ ಮೇಲೆ ಪೊಲೀಸ್ ದೂರು ನೀಡುವುದಾಗಿ ಗದರಿಸುತ್ತಿದ್ದಂತೆ ಗಾಬರಿಯಾಗಿ ಕುಸಿದು ಬಿದ್ದ ಮಹಿಳೆ ಕೆಲವು ಕಾಲ ಮೂರ್ಛೆಹೋಗಿ ಅಸ್ವಸ್ಥಗೊಂಡಿದ್ದ ಘಟನೆ ಸಹ ನಡೆದು ಇಬ್ಬರು ಪತಿಯಂದರ ಜಗಳಕ್ಕೆ ವೇದಿಕೆ ಸಾಕ್ಷಿಯಾಯಿತು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಮಹದೇವಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿದ್ದರಾಜು, ಪಿ.ಡಿ.ಒ. ಜಯಸ್ವಾಮಿ, ಸದಸ್ಯರಾದ ಲಿಂಗರಾಜಮೂರ್ತಿ,ಎನ್.ಎಚ್.ಲೋಕೇಶ್, ಜ್ಯೋತಿಮಹೇಶ್, ವೀಣಾಕುಮಾರ್, ಚಂದ್ರಮ್ಮ, ಸೇರಿದಂತೆ ಹಲವು ಸದಸ್ಯರು ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: