April 27, 2024

Bhavana Tv

Its Your Channel

ಶಾಸಕರಾದ ಸಿ.ಎಸ್.ಪುಟ್ಟರಾಜು, ಮರಿತಿಬ್ಬೇಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ-
ಶಾಸಕ ಡಾ.ಕೆ.ಅನ್ನದಾನಿ

ಮಳವಳ್ಳಿ : ಶಾಸಕರಾದ ಸಿ.ಎಸ್.ಪುಟ್ಟರಾಜು, ಮರಿತಿಬ್ಬೇಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ, ರಾಜಕಾರಣದಲ್ಲಿ ಹೇಳುವುದು ಆಗುವುದಿಲ್ಲ, ಆಗುವುದನ್ನು ಯಾರೂ ಹೇಳುವುದಿಲ್ಲ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ತಾಲ್ಲೂಕಿನ ನೆಲ್ಲೂರು, ನೆಲಮಾಕನಹಳ್ಳಿ, ಬುಗತಗಳ್ಳಿ, ತಳಗವಾದಿ ಹಾಗೂ ದೇವಿಪುರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 3.98 ಕೋಟಿ ರೂ.ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೇರೆ ಪಕ್ಷಗಳಿಗೆ ಹೋಗುವವರು ನಾನು ಹೋಗುವುದಿಲ್ಲ ಎಂದೇ ಹೇಳುತ್ತಾರೆ. ಹೋಗದಿರುವವರು ನಾವು ಹೋಗುತ್ತೇವೆ ಎನ್ನುತ್ತಾರೆ ಹೀಗಾಗಿ ನಮಗೆ ನಂಬಿಕೆ ಇದೆ ಸಿ.ಎಸ್. ಪುಟ್ಟರಾಜು, ಮರಿತಿಬ್ಬೇಗೌಡರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಅವರಿಗೆ ನಮ್ಮ ಪಕ್ಷ ಯಾವುದೇ ರೀತಿಯಲ್ಲಿ ಮೋಸ ಮಾಡಿಲ್ಲ. ಪುಟ್ಟರಾಜು ಅವರನ್ನು ಸಂಸದರು, ಜಿಲ್ಲಾ ಸಚಿವರಾಗಿ, ಮೂರು ಬಾರಿ ಶಾಸಕರಾಗಿ ಹಾಗೂ ಮರಿತಿಬ್ಬೇಗೌಡರನ್ನು ನಾಲ್ಕು ಬಾರಿ ಪರಿಷತ್ ಸದಸ್ಯರನ್ನಾಗಿ ಜಿಲ್ಲೆ ಆಯ್ಕೆ ಮಾಡಿ, ಎರಡು ವರ್ಷಗಳ ಕಾಲ ನಮ್ಮ ಪಕ್ಷ ಉಪಸಭಾಪತಿ ಮಾಡಿದ್ದು ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡುವುದಿಲ್ಲ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಇದುವರೆಗೂ ನೀರಿನ ಸಂಪರ್ಕ ಪಡೆಯದ ಕುಟುಂಬಗಳನ್ನು ಗುರುತಿಸಿ ಅಂತಹ ಮನೆಗಳಿಗೆ ಸರ್ಕಾರದಿಂದ ನಲ್ಲಿ ಸಂಪರ್ಕ ಕಲ್ಪಿಸಿ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಮೊದಲು ಶಾಸಕನಾಗಿದ್ದ ವೇಳೆ ನೆಲಮಾಕನಹಳ್ಳಿ ಗ್ರಾಮಕ್ಕೆ ಪ್ರೌಢಶಾಲೆಯನ್ನು ಮಂಜೂರು ಮಾಡಿಸಿದ್ದು, ರಸ್ತೆ, ಸೇತುವೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿರುವೆ ಎಂದರು.
ತಳಗವಾದಿ ಗ್ರಾ.ಪಂ.ಅಧ್ಯಕ್ಷೆ ಆರ್.ದಿವ್ಯಾ ಶಿವಕುಮಾರ್, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ಗುರು, ಸಿದ್ದರಾಜು, ಕುಮಾರ್, ರೂಪಾ, ನೆಲಮಾಕನಹಳ್ಳಿ ಗ್ರಾ.ಪಂ.ಸದಸ್ಯರಾದ ಸಿದ್ದರಾಜು, ಗೌರಮ್ಮ, ಸಿದ್ದೇಗೌಡ, ಪಿಡಿಒಗಳಾದ ವಿ.ರೇಣುಕಾ, ಹರಿಶಂಕರ್, ನಿವೃತ್ತ ಉಪತಹಶೀಲ್ದಾರ್ ರಾಮಣ್ಣ, ಮುಖಂಡರಾದ ಹನುಮಂತು, ರೈತ ಸಂಘದ ಚೌಡಯ್ಯ, ಸಾಹಳ್ಳಿ ಶಿವಕುಮಾರ್, ಶಿವಣ್ಣ, ಕರಿಯಪ್ಪ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: