May 18, 2024

Bhavana Tv

Its Your Channel

ಮೊದಲ ಕೋವಿಡ್ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಮನವೊಲಿಸಲು ಮುಂದಾದ ಜಿಲ್ಲಾ ಆರೋಗ್ಯ ಅಧಿಕಾರಿ ಧನಂಜಯ್

ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಕರೋನಾ ವೈರಸ್ ಮೊದಲ ಲಸಿಕೆಯನ್ನು ಪಡೆಯದ ೮೭೨ ಜನರಿದ್ದು ಲಸಿಕೆಯನ್ನು ಪಡೆಯುವಂತೆ ಇಂದು ನಾಗಮಂಗಲ ಪಟ್ಟಣದ ವಡೆಯರ್ ಪುರ. ದೊಡ್ಡಜಟಕ ಹಾಗೂ ಬೆಳ್ಳೂರು ಪಟ್ಟಣಕ್ಕೆ ಮಂಡ್ಯ ಜಿಲ್ಲಾ ಆರೋಗ್ಯ ಅಧಿಕಾರಿ ಧನಂಜಯ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಪ್ರಸನ್ನರವರು ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾದರು

ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಹರದನಹಳ್ಳಿ ೨೨೭, ಬ್ರಹ್ಮದೇವರಹಳ್ಳಿ ೧೦೦, ನಾಗಮಂಗಲ ಪಟ್ಟಣ ೮೧, ಬೋಗಾದಿ ೮೧, ಕದಹಬಳ್ಳಿ ೫೯, ಕೆಲಗೆರೆ ೫೯, ಬೆಳ್ಳೂರು ೪೫ ಈ ಸ್ಥಳಗಳು ಸಾರ್ವಜನಿಕರು ಮೊದಲ ಲಸಿಕೆಯನ್ನು ಪಡೆಯದಿದ್ದು ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಮನೆಗೆ ತೆರಳಿ ಲಸಿಕೆ ಪಡೆಯುವಂತೆ ಮನವೊಲಿಸಿ ಯಶಸ್ವಿಯಾದರು

ಜಿಲ್ಲಾ ವೈದ್ಯಾಧಿಕಾರಿ ಧನಂಜಯ ರವರು ಮಾತನಾಡಿ ಪ್ರತಿ ಬುಧವಾರ ಕರೋನವೈರಸ್ ಲಸಿಕೆಯನ್ನು ಜಿಲ್ಲಾದ್ಯಂತ ನೀಡುತ್ತಿದ್ದು ಪ್ರಸ್ತುತ ೧೨ ಲಕ್ಷಕ್ಕೂ ಹೆಚ್ಚು ಲಸಿಕೆಯನ್ನು ನೀಡಿದ್ದು ಲಸಿಕೆಯನ್ನು ಪಡೆಯಲು ಯಾವುದೇ ಅಂಜಿಕೆ ಬೇಡ ಸಾರ್ವಜನಿಕರು ನಿರಾತಂಕವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಲಸಿಕೆ ಹಾಕಿಸಿಕೊಳ್ಳುವುದರಿಂದ ದೈಹಿಕ ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕೂಡ ಸಹಕರಿಸಬೇಕೆಂದು ತಿಳಿಸಿದರು
ತಾಲೂಕಿನ ವ್ಯಾಪ್ತಿಯಲ್ಲಿ ನಡೆದ ಲಸಿಕ ಅಭಿಯಾನದಲ್ಲಿ ನಾಗಮಂಗAಗಲ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಪ್ರಸನ್ನ ಪುರಸಭೆ ಮುಖ್ಯಾಧಿಕಾರಿ ಶೈಲಜಾಹಿರಿಯ ಆರೋಗ್ಯ ಪರಿವಿಕ್ಷಕ ಸಿದ್ದಲಿಂಗಯ್ಯ ಆಶಾ ಕಾರ್ಯಕರ್ತರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: