May 4, 2024

Bhavana Tv

Its Your Channel

ಫೆಬ್ರವರಿ ಒಂದರಿOದ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅನಿರ್ದಿಷ್ಟ ಮುಷ್ಕರ

ನಾಗಮಂಗಲ.ಪಾoಡವಪುರ ತಾಲೂಕು ಕಚೇರಿಯಲ್ಲಿ 18.1.2022 ರಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ 9 ಜನ ಕಾರ್ಯಕರ್ತರು ತಾಲೂಕು ಕಚೇರಿ ಸಿಬ್ಬಂದಿ ಹಾಗೂ ತಹಶಿಲ್ದಾರ್ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿ ಏಕವಚನ ಪದ ಪ್ರಯೋಗ ಮಾಡಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಹಾಗೂ ಸರ್ಕಾರಿ ನೌಕರರ ಮೇಲೆ ಸುಳ್ಳು ದೂರನ್ನು ದಾಖಲಿಸಿದ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಈ ನಡೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಮಂಡ್ಯ ಜಿಲ್ಲಾ ಗ್ರಾಮಲೆಕ್ಕಿಗರ ಸಂಘ ಖಂಡಿಸುತ್ತದೆ

ಕೆ.ಅರ್.ಎಸ್. ಪಕ್ಷದ ಕಾರ್ಯಕರ್ತರು ಸರ್ಕಾರಿ ನೌಕರರು ಮತ್ತು ಪಾಂಡವಪುರ ತಹಶಿಲ್ದಾರ್ ವಿರುದ್ಧ ನೀಡಿರುವ ಸುಳ್ಳು ದೂರಿನ ಎಪ್.ಐ.ಅರ್. ರದ್ದುಪಡಿಸಲು ಕೋರಿದರು ಸಹ ಇದುವರೆಗೂ ಪೊಲೀಸ್ ಇಲಾಖೆ ಕೈಬಿಟ್ಟಿಲ್ಲ

ಈ ಸಂಬAಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪಾಂಡವಪುರ ತಾಲೂಕು ಕಚೇರಿಯ ಸರ್ಕಾರಿ ನೌಕರರ ವಿರುದ್ಧ ನೀಡಿರುವ ಸುಳ್ಳು ದೂರನ್ನು ಈ ತಕ್ಷಣ ಕೈ ಬಿಡದಿದ್ದರೆ ಫೆಬ್ರವರಿ ಒಂದರಿAದ ಮಂಡ್ಯ ಜಿಲ್ಲಾಧ್ಯಂತ ಗ್ರಾಮಲೆಕ್ಕಿಗರ ಸಂಘ ಸರ್ಕಾರಿ ನೌಕರರಿಗೆ ನ್ಯಾಯ ಸಿಗುವವರೆಗೂ ಜಿಲ್ಲಾದ್ಯಂತ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದು ಎಂದು ಎಂದು ನಾಗಮಂಗಲ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಜೆ.ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು

ಸರ್ಕಾರಿ ನೌಕರರು ಕೂಡ ಮನುಷ್ಯರಲ್ಲವೇ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸರ್ಕಾರದ ನಿಯಮಾವಳಿ ಇರುತ್ತವೆ ಸರ್ಕಾರಿ ನೌಕರ ತಪ್ಪುಗಳನ್ನು ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಇತರ ವ್ಯಕ್ತಿಗಳು ಆತನ ವಿರುದ್ಧ ಅರ್ಜಿ ಸಲ್ಲಿಸಿಬಹುದು ಅಥವಾ ಆರ್.ಟಿ.ಐ. ಮೂಲಕ ಸಲ್ಲಿಸಿ ಸೂಕ್ತ ದಾಖಲೆಗಳನ್ನು ಪಡೆಯಬಹುದು ತಪ್ಪಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಿ ಇಲಾಖೆಯ ನಿಯಮಾನುಸಾರ ಸೂಕ್ತ ಶಿಕ್ಷೆಯನ್ನು ನೀಡಿಸಬಹುದು ಆದರೆ ಗುಂಡಾವರ್ತನೆಯಿAದ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಕೆ.ಆರ್ ಎಸ್. ಪಕ್ಷದ ಕಾರ್ಯಕರ್ತರು ಕ್ಷುಲ್ಲಕ ಕಾರಣಕ್ಕಾಗಿ ಸರ್ಕಾರಿ ನೌಕರರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ದಾಖಲಿಸಿದ್ದಾರೆ ಸರ್ಕಾರಿ ನೌಕರರ ಮೇಲೆ ಹಾಕಿರುವ ಎಫ್.ಐ.ಆರ್ ತೆರವುಗೊಳಿಸಬೇಕೆಂದು ತಿಳಿಸಿದರು

ಇದೇ ಸಂದರ್ಭದಲ್ಲಿ ರಾಜ್ಯ ಗ್ರಾಮಲೆಕ್ಕಿಗರ ಸಂಘದ ನೂತನ ಸಂವತ್ಸರ 2022 ರ ಡೈರಿಯನ್ನು ನಾಗಮಂಗಲ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಸಿ.ಜೆ. ಕುಮಾರ್ ರವರು ಗ್ರಾಮ ಲೇಖಕ ಸಂಘದ ಪದಾಧಿಕಾರಿಗಳ ಜೊತೆಗೂಡಿ ಬಿಡುಗಡೆ ಮಾಡಿದರು

ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಗ್ರಾಮಲೆಕ್ಕಿಗ ಸಂಘದ ಜಿಲಾಧ್ಯಕ್ಷರಾದ ಮಧುಸೂದನ್. ನಾಗಮಂಗಲ ತಾಲೂಕು ಅಧ್ಯಕ್ಷರಾದ ಸಂತೋಷಕುಮಾರ್. ನಾಗಮಂಗಲ ಗ್ರಾ.ಲೆ.ಸಂಘದ ಪದಾಧಿಕಾರಿಗಳಾದ ಪ್ರಸನ್ನಕುಮಾರ.ಮಲ್ಲಿಕಾರ್ಜುನ. ನಾಗರಾಜು.ರವಿಕುಮಾರ್. ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: