May 4, 2024

Bhavana Tv

Its Your Channel

ನಾಗಮಂಗಲ ಕ.ಸಾ.ಪ.ವತಿಯಿಂದ ದ.ರಾ.ಬೇಂದ್ರೆ ಜನ್ಮದಿನಾಚರಣೆ

ನಾಗಮಂಗಲದ ಕನ್ನಡ ಸಾಹಿತ್ಯ ಪರಿಷತ್ತು ಚಿಣ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜ್ಞಾನ ಪೀಠ ಪುರಸ್ಕೃತ ವರಕವಿ ದ.ರಾ. ಬೇಂದ್ರೆಯವರ ಜನ್ಮದಿನಾಚರಣೆ ಆಚರಿಸಲಾಯಿತು.

ವೇದಿಕೆ ಗಣ್ಯರಿಂದ ದ.ರಾ ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾಲೇಜು ಮಕ್ಕಳ ಭಕ್ತಿಗೀತೆಯೊಂದಿಗೆ ಉದ್ಘಾಟಿಸಲಾಯಿತು.

ಬೇಂದ್ರೆಯವರ ಕುರಿತು ಪ್ರಧಾನ ಉಪನ್ಯಾಸ ನೀಡಿದ ನಾಗಮಂಗಲ ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವೇಗೌಡ ಖರಡ್ಯ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಎರಡನೆಯ ಜ್ಞಾನ ಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಪ್ರಸಿದ್ಧ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ.ವರಕವಿರವರು ೧೮೯೬ನೇ ಜನವರಿ ೩೧ರಂದು ಧಾರವಾಡದಲ್ಲಿ ಜನಿಸಿ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಅಭಿರುಚಿ ರೂಢಿಸಿಕೊಂಡು ೨೭ ಕವನ ಸಂಕಲನ,೧೪ ನಾಟಕಗಳು, ೧೦ ವಿಮಶಾ೯ ಕೃತಿಗಳು, ನಿರಾಭರಣ ಸುಂದರಿ ಎಂಬ ಪ್ರಸಿದ್ದ ಕಾದಂಬರಿಯನ್ನು ಬರೆದಿದ್ದಾರೆ.
ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ. ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು. ತಿಳಿದು ಬದುಕಬೇಕು. ತಿಳಿಸಿ ಕೊಟ್ಟ ಮಹಾ ಕವಿ ಹಚ್ಚುವುದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲಾ. ಆರಿಸುವುದಾದ್ರೆ ನೋವನ್ನು ಆರಿಸು.ನಗುವನ್ನಲ್ಲ. ಮುಂತಾದ ಜೀವನ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ತಿಳಿಸಿ ಜನಸಾಮಾನ್ಯರ ಬಾಯಲ್ಲಿ ಹರಿದಾಡುವ ಮೂಡಲ ಮನೆಯಾ ಮುತ್ತಿನ ನೀರಿನ ಏರುವಾಗ ಹೊಯ್ದಾ…
ಕುರುಡು ಕಾಂಚಾಣ ಕುಣಿಯುತಲಿತ್ತು… ನೀ ಹೀಂಗ ನೋಡಬ್ಯಾಡ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ…. ಶ್ರಾವಣ ಬಂತು ಶ್ರಾವಣ ಕಾಡಿಗೆ.ಬಂತು ನಾಡಿಗೆ .ಬಂತು ಬೀಡಿಗೆ… ಮುಂತಾದ ಗೀತೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಅಮರರಾಗಿದ್ದಾರೆ.ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗಂಗವಾಡಿ ಪುಟ್ಟಸ್ವಾಮಿಗೌಡ ಹಾಗೂ ಪತ್ರಕರ್ತರಾದ ಚಂದ್ರಮೌಳಿ ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಗಾಯತ್ರಮ್ಮ.ಪನ್ನಗ, ಬಸವರಾಜು.ಸ್ಮೀತಾ, ಪ್ರಕಾಶ್.ಸುರೇಶ್.ಶಿವಕುಮಾರ.ರಿಯಾನ.ರುದ್ರೇಶ್ ,ಶಾಲಾ ಮಕ್ಕಳು ಭಾಗವಹಿಸಿದ್ದರು

error: