May 5, 2024

Bhavana Tv

Its Your Channel

ಪ್ರೆಸ್‌ಕ್ಲಬ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್

ನಾಗಮಂಗಲ:- ಕಾನೂನುಬಾಹಿರವಾಗಿ ಸರ್ಕಾರಿ ಸ್ವತ್ತನ್ನು ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತನ್ನ ಸಂಸ್ಥೆಯ ಹೆಸರಿಗೆ ಖಾತೆ ಮಾಡಿಸಿಕೊಂಡು ಸರ್ಕಾರಿ ಸ್ವತ್ತನ್ನು ಲಪಟಾಯಿಸುತ್ತಿದೆ ಎಂದು ನಾಗಮಂಗಲ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣದ ಪ್ರೆಸ್‌ಕ್ಲಬ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಶಿಕ್ಷಕರ ಹಿತ ದೃಷ್ಟಿಯಿಂದ ಗುರುಭವನವನ್ನು ಸ್ಥಾಪಿಸಲಾಗಿದೆ. ಶಿಕ್ಷಕರ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳಲು, ಶಿಕ್ಷಕರ ಸಮಾರಂಭ ಮಾಡಿಕೊಳ್ಳಲು ಗುರುಭವನ ನಿರ್ಮಾಣವಾಗಿದೆ.

ನಿರ್ಮಾಣವಾದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಎಇಓ ರವರಿಗೆ ಮೇಲ್ವಿಚಾರಣೆ ವಹಿಸಿದ್ದರು. ತದನಂತರ ಬದಲಾದ ಸನ್ನಿವೇಶದಲ್ಲಿ ಗುರುಭವನದ ಮೇಲ್ವಿಚಾರಣೆ ಬಿಇಓ ರವರ
ಸುಪರ್ದಿಗೆ ಬಂತು. ಅಂದಿನಿAದ ಸುಮಾರು 15ಕ್ಕೂ ಹೆಚ್ಚು ಬಿಇಓ ಗಳು ಗುರುಭವನದ ಮೇಲ್ವಿಚಾರಣೆ ನಿರ್ವಹಿಸಿದ್ದಾರೆ.
ಆದರೆ ಜೆ.ವೈ.ಮಂಜುನಾಥ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೇಲೆ ಕಾನೂನನ್ನು ಗಾಳಿಗೆ ತೂರಿ ಬಿಇಓ ಹೆಸರಿನಲ್ಲಿದ್ದ ಗುರುಭವನವನ್ನು ಪುರಸಭೆಗೆ ಸುಳ್ಳು ಮಾಹಿತಿ ನೀಡಿ ಕಾನೂನು ಬದ್ಧವಿಲ್ಲದ ಸಂಸ್ಥೆ ಸ್ಥಾಪಿಸಿಕೊಂಡು ಅದರ ಹೆಸರಿಗೆ ಗುರುಭವನವನ್ನು ಖಾತೆ ಮಾಡಿಸಿಕೊಂಡಿದ್ದಾರೆ.

ಯಾರೋ ಗೊತ್ತಿಲ್ಲದೇ ತಪ್ಪಾಗಿದ್ದರೆ ಕ್ಷಮಿಸಬಹುದಿತ್ತು, ಆದರೆ ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದುರುದ್ದೇಶಪೂರ್ವಕವಾಗಿ ಮಾಡಿರುವ ಈ ಕೆಲಸ ಅತ್ಯಂತ ಖಂಡನೀಯ.

ಸರ್ಕಾರಿ ನೌಕರರ ಹಿತದೃಷ್ಟಿಯ ಜೊತೆಗೆ ಸರ್ಕಾರದ ಆಸ್ತಿ ಕಾಪಾಡುವ ಹೊಣೆ ಕೂಡ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕರ್ತವ್ಯವಾಗಿದೆ.

ಸುಮಾರು ಈ ಹಿಂದಿನ ಮೂರು ನಾಲ್ಕು ಜನ ಬಿಇಓ ಗಳಿಗೂ ಸಮಸ್ಯೆ ಬಗೆಗೆ ಅರ್ಥ ಮಾಡಿಸಿದರು ಏನು ಪ್ರಯೋಜನವಾಗಲಿಲ್ಲ. 420 ಪ್ರಕರಣ ದಾಖಲಿಸಿ ಅವರನ್ನು ಅಮಾನತ್ತಿನಲ್ಲಿಡಬೇಕಾಗಿತ್ತು. ಆದರೆ ಇದಾವುದು ಮಾಡಿಲ್ಲ ಅಮನದರೇ ಅವರು ಇದರಲ್ಲಿ ಶಾಮೀಲಾಗಿದ್ದಾರೆ.

ಹಾಗಾಗಿ ಈಗಿರುವಂತಹ ಬಿಇಓ ರವರು ಕೂಡಲೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರಿ ನೌಕರರಿಗೆ ಧಕ್ಕೆ ಉಂಟುಮಾಡಲು ಹೊರಟಿರುವ ಜೆ.ವೈ.ಮಂಜುನಾಥ್ ಮತ್ತು ಇತರರ ಮೇಲೆ ಶಿಸ್ತು ಕ್ರಮ ಜರುಗಿಸಿ ಸರ್ಕಾರಿ ಆಸ್ತಿಯನ್ನು ಕಾಪಾಡಬೇಕು. ಇಲ್ಲವಾದರೆ ಈಗಾಗಲೆ ಮನವಿ ಕೊಟ್ಟಿರುವಂತೆ ಸರ್ಕಾರಿ ನೌಕರರು ಬಿಇಓ ಕಚೇರಿ ಮುಂದೆ ಧರಣಿ ಕೂರುತ್ತೇವೆ ಎಂದರು.

ನ್ಯಾಯಾಲಯದಲ್ಲಿ ಸಂಘದ ಪರವಾಗಿ ಆದೇಶವಾಗಿದೆ ಎಂದು ಹೇಳುವ ಮೂಲಕ ಎಲ್ಲರನ್ನು ದಾರಿತಪ್ಪಿಸುತ್ತಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಸ್ವತ್ತಿನ ವಿಚಾರವಾಗಿ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಕೇವಲ ಆಡಳಿತ ನಿರ್ವಹಣೆ ಕುರಿತಾಗಿ ಮಾತ್ರ ಆದೇಶವಾಗಿದೆಯೇ ಹೊರತು ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣವಿಲ್ಲ. ಕೂಡಲೇ ಬಿಇಒ ಹಾಗೂ ಉನ್ನತಮಟ್ಟದ ಅಧಿಕಾರಿಗಳು ಈ ಅಕ್ರಮವನ್ನು ತಡೆದು ಸರ್ಕಾರಿ ಜಾಗವನ್ನು ಸರ್ಕಾರದ ಸ್ವಾಮ್ಯದಲ್ಲಿ ಉಳಿಸದಿದ್ದರೆ ಬಿಇಒ ಕಚೇರಿ ಎದುರು ಸರ್ಕಾರಿ ನೌಕರರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: