
ನಾಗಮಂಗಲ:– ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸಲು ರಾಜ್ಯ ರೈತ ಸಂಘ ಹಾಗೂ ರಾಷ್ಟ್ರ ಸಮಿತಿ ಪಕ್ಷವು ನಿಮ್ಮಗಳಿಗೆ ಸಹಾಯ ಮಾಡಲು ಸಿದ್ಧವಾಗಿದೆ ಎಂದು ರಾಜ್ಯ ಉಪಾಧ್ಯಕ್ಷರಾದ ನಿಂಗೇಗೌಡ ತಿಳಿಸಿದರು.
ಅವರಿಂದು ನಾಗಮಂಗಲ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಷ್ಟ್ರ ಸಮಿತಿ ಪಕ್ಷ ಸಂಯುಕ್ತಾಶ್ರಯದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಲಾಯಿತು.
ಸರ್ಕಾರವು ಇತ್ತೀಚೆಗೆ ರಾಗಿ ಖರೀದಿಯಲ್ಲಿ ರೈತರ ಕಡಿಮೆ ಹಿಡುವಳಿಯ ರೈತರನ್ನು ರಾಗಿ ಖರೀದಿ ಅವಕಾಶ ಮಾಡಿದ್ದು ಹಾಗೂ ದೊಡ್ಡ ಹಿಡುವಳಿದಾರರಿಗೆ ರಾಗಿ ಖರೀದಿ ಮಾಡಲು ಅವಕಾಶ ಇಲ್ಲದೆ ಇರುವುದು ಮತ್ತು ಆರ್.ಟಿ.ಸಿ ಗೊಂದಲಮಯವಾಗಿದ್ದು ಕೂಡಲೇ ಅವುಗಳನ್ನು ಪರಿಹರಿಸಿಕೊಳ್ಳುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಮಾಡಿದರು.
ರೈತರು ಸಮಸ್ಯೆಗಳಿಗೆ ತಾಲೂಕ್ ಅಧಿಕಾರಿವರ್ಗದವರು ಜನಸಂಪರ್ಕ ಸಭೆ ಕಾರ್ಯ ಮುಖಾಂತರ ಅಧಿಕಾರಿಗಳು ಸ್ಥಳದಲ್ಲಿ ಸಾರ್ವಜನಿಕ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಒತ್ತಾಯವಾಗಿದೆ
ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸತೀಶ್ ಗೋಪಾಲಕೃಷ್ಣ ಹಾಗೂ ರೈತ ಸಂಘದ ಪದಾಧಿಕಾರಿಗಳು ಮತ್ತು ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.
ವರದಿ: ದೇವಲಾಪುರ ಜಗದೀಶ ನಾಗಮಂಗಲ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ