
ನಾಗಮಂಗಲ.ಜೆಡಿಎಸ್ ಟಿಕೆಟ್ ಶಾಸಕ ಸುರೇಶ್ ಗೌಡಗೆ ಖಚಿತ ಆಗುತ್ತಿದ್ದಂತೆ ನನಗೆ ಯಾವ ರಾಜಕೀಯ ಪಕ್ಷಗಳು ಆಗಿ ಬರಲ್ಲ, ಪಕ್ಷೇತರ ಸ್ಪರ್ಧೆಗೆ ನಾನು ನಂಬಿರುವ ದೇವರ ಆಶೀರ್ವಾದ ಸಿಕ್ಕಿದ್ದು ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅಭಿಮಾನಿಗಳ ಸಮ್ಮುಖದಲ್ಲಿ ಘೋಷಿಸುವ ಮೂಲಕ ನಾಗಮಂಗಲ ರಾಜಕಾರಣವನ್ನ ಮತ್ತಷ್ಟು ರಂಗೇರಿಸಿದ್ದಾರೆ.
ನಾಗಮAಗಲ ತಾಲ್ಲೂಕಿನ ಬೋಗಾದಿ ಪಂಚಾಯ್ತಿ ಕೇಂದ್ರದಲ್ಲಿ ನಡೆದ ಪಂಚಮುಖಿ ದೇವಸ್ಥಾನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅಪಾರ ಸಂಖ್ಯೆಯ ಬೆಂಬಲಿಗರು ಅದ್ದೂರಿ ಸ್ವಾಗತ ನೀಡಿದ ಸಂತಸದಲ್ಲಿ ಮಾತನಾಡಿದ ಅವರು, ನನಗೆ ತಾವು ಕೊಟ್ಟಿರುವ ಮಾಜಿ ಎಂಎಲ್, ಮಾಜಿ ಎಂ.ಪಿ. ಸ್ಥಾನದಿಂದಲೇ ನಾಗಮಂಗಲ ದಿಂದ ದಿಲ್ಲಿಯ ವರೆಗೂ ಕೆಲಸ ಮಾಡಿಸುವ ಶಕ್ತಿ ಮಂಡ್ಯದಲ್ಲಿ ಇರೋದು ಈ ಶಿವರಾಮೇಗೌಡಗೆ ಮಾತ್ರವೇ ಸಾದ್ಯ ಎಂದರು.
ನಾನು ಅಧಿಕಾರ ಕಳೆದುಕೊಂಡು 25 ವರ್ಷಗಳೆ ಆಗಿದೆ ನಾನು ನಿಮ್ಮ ಕೃಷ್ಟ ಸುಖಗಳಿಗೆ ಸ್ಪಂದಿಸಿ ಸೇವೆ ಮಾಡಲು ಸಿದ್ಧನಿದ್ದು ಈ ಬಾರಿಯ ಚುನಾವಣೆಯಲ್ಲಿ ನನಗೊಂದು ಅವಕಾಶ ಕಲ್ಪಿಸುವಂತೆ ಕ್ಷೇತ್ರದ ಜನತೆಯನ್ನ ಮನವಿ ಮಾಡಿದ್ದಾರೆ.
ಕಳೆದ ವಾರವಷ್ಟೇ ಮಾಜಿ ಪ್ರಧಾನಿ ದೇವೇಗೌಡರು ನಾಗಮಂಗಲದಲ್ಲಿ ದೇವಸ್ಥಾನ ಕುಂಭಾಭಿಷೇಕ ಕಾರ್ಯಕ್ರಮವೊಂದಕ್ಕೆ ಆಗಮಿಸಿ ನಾಗಮಂಗಲ ಕ್ಷೇತ್ರಕ್ಕೆ ಸುರೇಶ್ ಗೌಡರೇ ಮತ್ತೆ. ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದರು. ಅಲ್ಲದೆ ಮತ್ತೆ ಶಿವರಾಮೇಗೌಡರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅದು ಮುಗಿದ ಅಧ್ಯಾಯ ಎಂದು ಗರಂ ಆಗಿ ಉತ್ತರಿಸಿದ್ದರು.
ಇದೀಗ ಶಿವರಾಮೇಗೌಡ ಮತ್ತೆ ತನ್ನ. ಹಳೆಯ ಶೈಲಿಗೆ ಮರಳಲು ಪುತ್ರ ಚೇತನ್ ಗೌಡ ಸೇರಿದಂತೆ ಅಪಾರ ಬೆಂಬಲಿಗರೊAದಿಗೆ ತಾಲೂಕಿನ ಐದು ಪಂಚಾಯಿತಿ ಹಾಗೂ ಕೊಪ್ಪ ಹೋಬಳಿಯ ಹಳ್ಳಿಗಳಲ್ಲಿ ಸಂಘಟನೆಗೆ ಇಳಿದಿದ್ದಾರೆ. ವಾರದಲ್ಲಿ ನಾಲ್ಕು ದಿನ ಬೆಂಗಳೂರು ಬಿಟ್ಟು ನಾಗಮಂಗಲದಲ್ಲೇ ತಿರುಗುತ್ತಿದ್ದಾರೆ
ಎರಡು ಬಾರಿ ಪಕ್ಷೇತರನಾಗಿಯೇ ಗೆದ್ದು ಶಾಸಕರಾಗಿದ್ದ ಶಿವರಾಮೇಗೌಡ ಮತ್ತೇ ಪಕ್ಷೇತರವಾಗಿ ಸ್ಪರ್ಧೆ ಘೋಷಿಸಿರುವುದು ನಾಗಮಂಗಲ ಕ್ಷೇತ್ರ ರಾಜಕಾರಣದಲ್ಲಿ ಇದೇ ಮೊದಲ ಭಾರಿಗೆ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗುವ ಬಗ್ಗೆ ತಾಲೂಕಿನ ವ್ಯಾಪ್ತಿಯಲ್ಲಿ ಲೆಕ್ಕಾಚಾರಗಳ ಚರ್ಚೆ ಸಾಗಿದೆ.
ವರದಿ: ಚಂದ್ರಮೌಳಿ ನಾಗಮಂಗಲ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ