April 27, 2024

Bhavana Tv

Its Your Channel

ಸಂವಿಧಾನ ಸ್ತ್ರೀ ಗೆ ಸಮಾನತೆಯ ಹಕ್ಕು ನೀಡಿದರು ಪುರುಷ ಸಮಾಜ ನೀಡಿಲ್ಲ- ಪ್ರಾಧ್ಯಾಪಕಿ ಎನ್.ಎಸ್. ಶುಭ

ನಾಗಮಂಗಲಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ದಿನಾಚರಣೆಯ ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಗಣ್ಯರು ಚಾಲನೆ ನೀಡಿದರು

ಕಾರ್ಯಕ್ರಮ ಉದ್ದೇಶಿಸಿ ನಾಗಮಂಗಲ ಜಿ.ಜೆ.ಸಿ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಎನ್.ಎಸ್. ಶುಭ ಮಾತನಾಡಿ ಸಮಾಜದಲ್ಲಿ ಮಹಿಳೆಯೂ ಕೂಡ ಎಲ್ಲರಂತೆ ಸಮಾನತೆಯಿಂದ ಇರಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯು ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿ ಆಚರಣೆ ಮಾಡಲಾಗುತ್ತಿದೆ ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಕೂಡ ಈ ದಿನವನ್ನು ಮಹಿಳಾ ದಿನಾಚರಣೆ ಎಂದು ನಡೆಸಲಾಗುತ್ತಿದೆ

ಸಂವಿಧಾನದಲ್ಲಿ ಮಹಿಳೆಗೆ ಸಮಾನತೆಯ ಹಕ್ಕು ನೀಡಿದರು ಪುರುಷ ಸಮಾಜ ಇನ್ನೂ ನೀಡಿಲ್ಲ ಈ ಸಮಾಜದಲ್ಲಿ ಮಹಿಳೆಯರು ಎಲ್ಲಾ ಹಂತದಲ್ಲೂ ಪುರುಷರ ರಕ್ಷಣೆಯಲ್ಲಿ ಇರಬೇಕಾದ ಅನಿವಾರ್ಯತೆ ಪರಿಸ್ಥಿತಿ ಇದೆ ಸಮಾಜ ಗಂಡುಮಕ್ಕಳ ವ್ಯಾಮೋಹದಿಂದ ಹೆಣ್ಣುಮಕ್ಕಳ ಬಗ್ಗೆ ಅಸಮಾನತೆ ಹೊಂದಿದ್ದು ಪ್ರತಿಯೊಂದು ವಿಭಾಗದಲ್ಲೂ ಕೂಡ ಮಹಿಳೆಗೆ ತಾರತಮ್ಯ ಮಾಡುತ್ತಲೇ ಬಂದಿದ್ದಾರೆ
ಇನ್ನೂ ಕುಟುಂಬದಲ್ಲಿ ದಿನದ 24 ಗಂಟೆಯೂ ಕೂಡ ದುಡಿಯುತ್ತಿದ್ದರುಮಹಿಳೆ ಯಾವುದೇ ವೇತನವನ್ನು ಪಡೆಯುವುದಿಲ್ಲ ಗಂಡ. ಮಕ್ಕಳು. ಸಂಸಾರ. ಎಂಬ ಜಂಜಾಟದಲ್ಲಿ ಮಹಿಳೆಯು ದಿನಪೂರ್ತಿ ಕೆಲಸ ನಿರ್ವಹಿಸಿದ್ದರು ಸಮಾನತೆ ಎಂಬ ಮಾನ್ಯತೆಯನ್ನು ಈ ಸಮಾಜ ಇನ್ನು ನೀಡಿಲ್ಲ ಎಂದರು

ಮತ್ತೊಬ್ಬ ಮಹಿಳಾ ಗಣ್ಯರಾದ ವಕೀಲೆ ಮಂಜುಳಾ ಮಾತನಾಡಿ ಪ್ರತಿಯೊಬ್ಬರು ಕೂಡ ವೇದಾಂತ ದಂತೆ ಪ್ರತಿಯೊಬ್ಬ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ನುಡಿಯುತ್ತಾರೆ ಅದು ಸತ್ಯವೂ ಕೂಡ ಆದರೆ ಆ ಮಹಿಳೆಯ ಹಿಂಬದಿಯ ಪರಿಶ್ರಮವನ್ನು ಯಾರೂ ಕೂಡ ಪರಿಗಣಿಸುವುದಿಲ್ಲ ಈ ಕಾಲಘಟ್ಟದಲ್ಲಿ ಸಮಾನತೆ ಸಂವಿಧಾನದಲ್ಲಿ ಲಿಖಿತ ರೂಪದಲ್ಲಿ ಇರುವಂತೆ ಕಾರ್ಯರೂಪಕ್ಕೆ ಬರುವುದು ಕಷ್ಟಕರವಾಗಿದೆ

ಪುರುಷ ಸಮಾಜದ ಮುಂದೆ ಪ್ರತಿಯೊಬ್ಬ ಸ್ತ್ರೀಯು ಕೂಡ ವಿದ್ಯಾವಂತರಾಗಿ ಎಲ್ಲಾ ರಂಗದಲ್ಲೂ ಕೂಡ ಮುಂದೆ ಬರಬೇಕು ಈಗಿನ ಪರಿಸ್ಥಿತಿಯಲ್ಲಿ ಕೂಡ ಮಹಿಳೆಯೂ ಕೂಡ ಮುಂದಿದ್ದಾರೆ ಆದರೆ ವಿದ್ಯಾಭ್ಯಾಸ ಒಂದೇ ಸಮಾನತೆಯ ಕೊಂಡಿ ಬೆಸೆಯಲು ಸಹಕಾರಿಯಾಗುತ್ತದೆ ಎಲ್ಲ ರಂಗದಲ್ಲೂ ಕೂಡ ಮಹಿಳೆಯು ತೊಡಗಿಸಿಕೊಂಡು ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂಬAತೆ ಸಾಧನೆ ಮಾಡಿ ತೋರಿಸಬೇಕೆಂದು ವಿದ್ಯಾರ್ಥಿಗಳಿಗೆ ನುಡಿದರು

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಲೋಕೇಶ್ ನಾಗಮಂಗಲ ಪ್ರಸ್ ಕ್ಲಬ್ ಅಧ್ಯಕ್ಷರಾದ ದೇವಾನಂದ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು.ಆಡಳಿತ ವರ್ಗ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: