May 8, 2024

Bhavana Tv

Its Your Channel

ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಯ ರೈತರ ಮನೆ ಬಾಗಿಲಿಗೆ ಕಂದಾಯ ಕಡತ ತಲುಪಿಸಿದ ತಹಶೀಲ್ದಾರ ನಂದಿಶ್

ನಾಗಮoಗಲ:-ಹೊಣಕೆರೆ ಹೋಬಳಿಯ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಇಂದು ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಮನೆ ಬಾಗಿಲಿಗೆ ಕಂದಾಯ ಕಡತಗಳನ್ನು ಮನೆ ಮನೆಗೆ ತೆರಳಿ ವಾರಸುದಾರರಿಗೆ ತಮ್ಮ ಜಮೀನಿನ ಕಡತಗಳನ್ನು ತಲುಪಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತಹಶೀಲ್ದಾರ್ ನಂದಿಶ್ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ತಹಶಿಲ್ದಾರ್ ನಂದೀಶ್ ರವರು ಈ ಯೋಜನೆಯ ತಾಲ್ಲೂಕಿನಾದ್ಯಂತ 25 ಸಾವಿರ ಅರ್ಹ ಫಲಾನುಭವಿಗಳಿಗೆ ಏಕಕಾಲದಲ್ಲಿ ಪ್ರಮಾಣಪತ್ರಗಳ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಅದರಂತೆ ಈ ದಿನ ಸಾಂಕೇತಿಕವಾಗಿ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ರೈತರ ಮನೆ ಮನೆ ಬಾಗಿಲಿಗೆ ತೆರಳಿ ವಿತರಣೆ ಮಾಡಲಾಗುತ್ತಿದೆ

ಇದುವರೆಗೆ ತಾಲ್ಲೂಕಿನಾದ್ಯಂತ ಸ್ವೀಕರಿಸಿರುವ ಅರ್ಜಿಗಳ ವಿವರ 24,983 ಇಂಡೆಕ್ಸ್ ಗಳು, 1.27.550 ಆರ್ ಟಿ.ಸಿ ಗಳು, 4.385 ಅಟ್ಲಾಸ್ ಗಳು, 10513 ಆದಾಯ ಪ್ರಮಾಣಪತ್ರಗಳು, 2765 ಜಾತಿ ಪ್ರಮಾಣಪತ್ರಗಳನ್ನು ಸ್ವೀಕರಿಸಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಪ್ರಮಾಣಪತ್ರಗಳನ್ನು ತಲುಪಿಸಲಾಗುವುದು.

ಗ್ರಾಮ ಸಹಾಯಕರು, ರೆವಿನ್ಯೂ ಇನ್ಸ್ಪೆಕ್ಟರ್, ಶಿರಸ್ತೆದಾರ್ ಇವರ ಸಹಕಾರದೊಂದಿಗೆ ಕಚೇರಿಯ ಬೇರೆ ಕೆಲಸಗಳಿಗೆ ತೊಂದರೆ ಆಗದಂತೆ ಪ್ರತಿ ಎರಡನೇ ಶನಿವಾರ ಪ್ರಮಾಣಪತ್ರಗಳ ವಿರತಣೆ ಮಾಡಲಾಗುವುದು.

ತಾಲ್ಲೂಕಿನಾದ್ಯಂತ 25 ಸಾವಿರ ರೈತರ ನೊಂದಾವಣೆ ಪೂರ್ಣಗೊಂಡಿದೆ. ಮಾ.12 ರಂದು ತಾಲ್ಲೂಕಿನಾದ್ಯಂತ 24 ಸಾವಿರ ರೈತರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು.

ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಎಲ್.ಎಂ. ನಂದೀಶ್, ಉಪ ಶಿರಸ್ತೆದಾರ್ ಮಲ್ಲಿಕಾರ್ಜುನ ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಾರಾ ಚಂದ್ರು ಗ್ರಾಮ ಪಂಚಾಯಿತಿ ಸದಸ್ಯರಾದ ಇಜ್ಜಲಗಟ್ಟ ಉಮೇಶ. ಪುಟ್ಟರಾಜು. ವೆಂಕಟೇಶ್ ಜಯಮ್ಮ ಸೇರಿದಂತೆ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: