May 2, 2024

Bhavana Tv

Its Your Channel

ಸಮಯದ ಅರಿವಿನ ಅರ್ಥವಾಗುವ ತನಕ ನಾವು ಗುರಿ ಮುಟ್ಟುವುದು ಸಾಧ್ಯವಿಲ್ಲ- ಚುಂಚಶ್ರೀ

ನಾಗಮoಗಲ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ 11.03.2022 ರಿಂದ 19.3.2022 ರ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಧರ್ಮಧ್ವಜ ಸ್ಥಾಪನೆ ಮತ್ತು ನಂದಿ ಪೂಜೆ ಹಾಗೂ ಯುವ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮ ಉದ್ದೇಶಿಸಿ ಕೊಡಗು ಮತ್ತು ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಯುವ ಜನತೆಯ ಸಾಮಾನ್ಯ ಗೊತ್ತು ಗುರಿಗಳು ಎಂಬ ವಿಷಯವಾಗಿ ಮಾತನಾಡಿ ಪಾಂಡವರು ವನವಾಸದಿಂದ ಹಿಂತಿರುಗಿ ಬಂದಾಗ ತಾಯಿಯಾದ ಕುಂತಿ ದೇವಿ ಹೇಳುತ್ತಾಳೆ ಅಲ್ಪ ಕಾಲ ಬದುಕಿದ್ದರು ಪ್ರಜ್ವಲಿಸಬೇಕು ಎಂದು ನುಡಿದಿದ್ದರು
ನಮ್ಮ ಇಂದಿನ ಯುವಕರ ನೀವು ಭವಿಷ್ಯ ಭಾರತದ ಶ್ರೇಷ್ಠ ಪ್ರಜೆಗಳಾಗಿ ಬೇಕು. ಭಾರತದ ವೀರಸನ್ಯಾಸಿ ವಿವೇಕಾನಂದರ ಆದರ್ಶಗಳು ಬಿಟ್ಟು ಹೋರಾಡಲು ಸಾಧ್ಯವಿಲ್ಲ ಯುವಕರ ಪ್ರೇರಕಶಕ್ತಿ ನಮ್ಮ ಮಹಾಪುರುಷರಾದ ಶಂಕರಾಚಾರ್ಯರು, ರಾಮತೀರ್ಥರು, ರಾಮಾನುಜನ್ ಇವರೆಲ್ಲರೂ ಚಿಕ್ಕ ವಯಸ್ಸಿನಲ್ಲಿಯೇ ಜಗತ್ತೇ ಮರೆಯದಂತಹ ಶ್ರೇಷ್ಠ ಸಾಧನೆಯನ್ನು ಮಾಡಿ ಇಂದಿಗೂ ಕೂಡ ಅಜರಾಮರರಾಗಿದ್ದಾರೆ ಎಂದರು

ಮತ್ತೊಬ್ಬ ಗಣ್ಯರಾದ ಕು. ಭವ್ಯ ನರಸಿಂಹಮೂರ್ತಿ ಮಾತನಾಡಿ ಯುವ ಜನತೆಯು ಸಕಲ ಬಂಧನಗಳಿAದ ಬಿಡುಗಡೆ ಹೊಂದಿ ಅವಕಾಶಗಳಿಂದ ವಂಚಿತರಾಗಿ ಇತಿಹಾಸವನ್ನು ಅರಿತು, ಸೂಕ್ತ ಗುರಿಯನ್ನು ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು, ದೇಶದ ಆದರ್ಶ ಮಹನೀಯರಾದ ಸಾವಿತ್ರಿಬಾಯಿ ಫುಲೆ ಮೊದಲಾದ ಸಮಾಜ ಸುಧಾರಕರ ಮಾರ್ಗದರ್ಶನವನ್ನು ಮನದಲ್ಲಿ ಪ್ರತಿಷ್ಠಾಪಿಸಿಕೊಂಡು ತಮ್ಮ ಹಕ್ಕು ಬಾಧ್ಯತೆಗಳನ್ನು ಸಾಧಿಸಲು ಶಿಕ್ಷಣವೇ ಮೂಲವಾಗಿದೆ ಈ ದಾರಿಯಲ್ಲಿ ಸಾಗಿ ಯಶಸ್ವಿ ಭಾರತೀಯರಾಗಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಜಿಲ್ಲಾಧಿಕಾರಿ ಎಸ್ ಅಶ್ವತಿ, ಮಾತನಾಡಿ ತಂದೆತಾಯಿಗಳು ಗುರುಗಳು ತೋರಿದ ಮಾರ್ಗದರ್ಶನ ಜೊತೆಜೊತೆಗೆ ನಿಮ್ಮ ಭವಿಷ್ಯದ ಗುರಿಯನ್ನು ನೀವೇ ತೀರ್ಮಾನಿಸಿ ವಿದ್ಯಾಭ್ಯಾಸ ಮತ್ತು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಿ, ವಿದ್ಯಾಭ್ಯಾಸಕ್ಕಾಗಿ ಒಂದಷ್ಟು ಸಮಯವನ್ನು ಮೀಸಲಿಟ್ಟು ಅಧ್ಯಯನಮಾಡಿ ಮನೋಸ್ಥೈರ್ಯ ದಿಂದ ಮುಂದುವರೆದರೆ ಜೀವನ ಸುಗಮವಾಗುತ್ತದೆ ಎಂದು ವೃತ್ತಿ ಮಾರ್ಗದರ್ಶನ ನೀಡಿದರು.

ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಕ್ತವೃಂದವನ್ನು ಉದ್ದೇಶಿಸಿ ಮಾತನಾಡಿ ನಾನು ಕೂಡ ಶ್ರೀ ಮಠದ ಹಿರಿಯ ವಿದ್ಯಾರ್ಥಿಯೇ, ನನಗೂ ಕೂಡ ಪೂರ್ಣಕುಂಭ ಮತ್ತು ವೇದಘೋಷಗಳೊಂದಿಗೆ ಸ್ವಾಗತಿಸಿದ್ದು ತಾಯಿಯ ಮನೆಗೆ ಬಂದಷ್ಟೇ ಸಂತೋಷ ಎನಿಸಿತು. ಯುವಕರಿಗೆ ಸೋಲು ಮತ್ತು ಟೀಕೆ ಎಂಬ ಎರಡು ಭಯ ಕಾಡುತ್ತವೆ, ಇವು ಸುಲಭವಾಗಿ ಪರಿಹಾರವಾಗುವ ಭಯವಲ್ಲ ಹಿರಿಯರ ಮಾರ್ಗದರ್ಶನ ಗುರುಗಳ ಸೇವೆಯಿಂದ ವಿದ್ಯಾಭ್ಯಾಸ ಮಾಡಿದರೆ ವಿವೇಕ ದೊಂದಿಗೆ ಸಾಧನೆಯ ಸಾಧ್ಯವಿದೆ ಎಂದು ನುಡಿದರು. ಯಾವುದೇ ಸಾಧನೆಗೂ ಪರಿಶ್ರಮವೇ ಮುಖ್ಯ ಇದಕ್ಕೆ ಪರ್ಯಾಯವಿಲ್ಲ, ಗಾಯತ್ರಿ ಮಂತ್ರವನ್ನು ಕೊಟ್ಟ ವಿಶ್ವಾಮಿತ್ರರು ಮಹಾಭಾರತವನ್ನು ಕೊಟ್ಟ ವೇದವ್ಯಾಸರು ರಾಮಾಯಣವನ್ನು ಕೊಟ್ಟ ವಾಲ್ಮೀಕಿಯವರ ನೆನೆದು ಮುಂದುವರೆದರೆ ಅಂತರAಗ ಬಹಿರಂಗಗಳ ಜಗಳ ಅಜ್ಞಾನವ ಸಿದ್ಧಿಸುತ್ತದೆ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂದು ಆಶಿಸಿದರು.

ಯುವಕರು ದೇಶದ ಸ್ವತ್ತು ಸಮಯ ನಿಮ್ಮ ಸ್ವತ್ತು ರಾತ್ರಿ ಕಾಡಿನಲ್ಲಿ ಹಾದುಹೋಗುವ ವ್ಯಕ್ತಿಗೆ ಗುರುಗಳು ಮಾರ್ಗದರ್ಶನ ಮಾಡಿದರು ಸಮಯ ಪ್ರಜ್ಞೆಯ ಮಹತ್ವವನ್ನು ಅರಿಯದಿದ್ದರೆ ಏನಾಗುತ್ತದೆ ಎಂಬುದನ್ನು ಕಥೆಯ ಮೂಲಕ ವಿವರಿಸಿದರು ತಿಳಿಸಿದರು. ಘಟಿಸಿದ ತಪ್ಪನ್ನು ಅದೇ ಸ್ಥಳದಲ್ಲಿ ತಿದ್ದಿಕೊಳ್ಳದಿದ್ದರೆ ಜೀವನ ಮೊಟಕಾಗುತ್ತದೆ, ಹೊಸ ಹೊಸ ಚಿಂತನೆಗಳು ಮತ್ತು ಆಯಾಮಗಳೊಂದಿಗೆ ಸಮಯಪ್ರಜ್ಞೆಯನ್ನರಿತು ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದು ಜಾಗೃತ ಗೊಂಡವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಸರ್ವರ ಬದುಕು ಹಸನಾಗಲಿ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ
ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿಗಳಾದ ಡಾ. ಎ ಟಿ ಶಿವರಾಮ ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ ತುಮಕೂರು ಪೂಜ್ಯ ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಜಿ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಗಳವರು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: