
ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಮಲ್ಲಸಂದ್ರ ಗ್ರಾಮದ ಅಮೃತ ಮಹಲ್ ಕಾವಲ್ ನಲ್ಲಿ ಇರುವಂತಹ ಪುರಾಣಪ್ರಸಿದ್ಧ ಅಭೂತಪೂರ್ವ ಶಿವಲಿಂಗ ದೇವಾಲಯದ 29 ನೇ ವರ್ಷದ ಶಿವರಾಧನೆ ಮತ್ತು ಜಾತ್ರೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು
ಮುಂಜಾನೆಯಿAದಲೇ ಅಭೂತಪೂರ್ವ ಶಿವಲಿಂಗ ದೇವರಿಗೆ ಮಹಾಸಂಕಲ್ಪ. ಮೂಲ ದೇವತಾ ಪ್ರದಕ್ಷಣೆ .ಗಣಪತಿ ಹೋಮ .ನವಗ್ರಹ ಹೋಮ. ರುದ್ರ ಹೋಮ. ಪೂರ್ಣಾಹುತಿ. ಶ್ರೀಯವರಿಗೆ ಪಂಚಾಮೃತ ಅಭಿಷೇಕ. ಕುಂಬಾಭಿಷೇಕ. ಪುಷ್ಪಾಲಂಕಾರ ಜೊತೆಗೆ ಮಹಾಮಂಗಳಾರತಿ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕೈ ಕಾರ್ಯಗಳು ಭಕ್ತಿಪೂರ್ವಕವಾಗಿ ನೆರವೇರಿದವು
ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಪ್ರಶಸ್ತಿ ವಿಜೇತ ಡಾ.ರುದ್ರೇಶ್ ಪ್ರಸಾದರವರ ವೀರಗಾಸೆ ಕುಣಿತ ತಂಡದವರಿAದ ಭಕ್ತಿಪೂರ್ವಕವಾಗಿ ವೀರಗಾಸೆ ಕುಣಿತ ಕಾರ್ಯಕ್ರಮ ಭಕ್ತಾದಿಗಳು ಹಾಗೂ ಜನಮನ ಕಣ್ ಸೆಳೆಯಿತು
ಇದೇ ಸಂದರ್ಭದಲ್ಲಿ ದೇವಾಲಯದ ಟ್ರಸ್ಟ್ ನ ಮುಖ್ಯಸ್ಥರುಗಳು ಮಾತನಾಡಿ ಈ ದೇವಾಲಯವು ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪನೆಗೊಂಡ ಪುರಣ ಪ್ರಸಿದ್ಧ ಶಿವ ದೇವಾಲಯ ಅರಮನೆಯಲ್ಲಿದ್ದ ಹಸುಗಳನ್ನು ಸಾಕಾಣಿಕೆ ಮತ್ತು ಮೇವಿಗಾಗಿ ಈ ಸ್ಥಳವನ್ನು ಆಯ್ಕೆಮಾಡಿಕೊಂಡಿದ್ದರು ಸುತ್ತಮುತ್ತಲ ಪ್ರಕೃತಿ ಮಡಿಲಿನಲ್ಲಿ ಈ ಅಮೃತ್ ಮಹಲ್ ಶಿವ ದೇವಾಲಯ ನಿರ್ಮಾಣ ಮಾಡಿದ ಹೆಗ್ಗಳಿಕೆ ರಾಜ ಸಂಸ್ಥಾನಕ್ಕೆ ಸಲ್ಲುತ್ತದೆ ಈ ಪುರಾಣಪ್ರಸಿದ್ದ ದೇವಾಲಯ ಹಲವು ವರ್ಷಗಳಿಂದ ಹಿಂದೆ ಜೀರ್ಣೋದ್ದಾರ ಗೊಳ್ಳದೆ ದೇವಾಲಯ ಕುಸಿತಗೊಂಡಿದ್ದು ಸುತ್ತಮುತ್ತಲ 50 ಗ್ರಾಮದ ಮುಖ್ಯಸ್ಥರು ಸೇರಿ ಒಂದು ಟ್ರಸ್ಟ್ ರಚನೆ ಮಾಡಿಕೊಂಡು ದೇವಾಲಯ ಜೀರ್ಣೋದ್ಧಾರ ಮಾಡಿ ಪ್ರತಿವರ್ಷ ದೇವರ ಕಾರ್ಯದಲ್ಲಿ ತೊಡಗಿದ್ದು ಜಾತ್ರಾ ಮಹೋತ್ಸವ ನಡೆಸುತ್ತಿದ್ದೇವೆ ಎಂದರು
ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ

More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ