April 28, 2024

Bhavana Tv

Its Your Channel

ಜೇಮ್ಸ್ ಚಿತ್ರ ಬಿಡುಗಡೆ ಸಂಭ್ರಮದಲ್ಲಿ ನಾಗಮಂಗಲದ ಪುನೀತ್ ಅಭಿಮಾನಿಗಳು

ನಾಗಮಂಗಲ:- ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಲನಚಿತ್ರ ಜೇಮ್ಸ್ ಇಂದು ಬಿಡುಗಡೆ ಹೊಂದುತ್ತಿದ್ದು ಸಡಗರದಿಂದ ನಾಗಮಂಗಲ ಪುರಸಭೆ ವ್ಯಾಪ್ತಿಯ ಪುನೀತ್ ರಾಜಕುಮಾರ್ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ

ಪುರಸಭೆ ವ್ಯಾಪ್ತಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ತಾಲೂಕಿನ ವ್ಯಾಪ್ತಿಯಲ್ಲಿ ಲಕ್ಷಾಂತರ ಕಟ್ಟುಗಳನ್ನು ತೂಗುಹಾಕಿ ಪುನೀತ್ ರಾಜಕುಮಾರ್ ಅವರ ಚಲನಚಿತ್ರಕ್ಕೆ ಸ್ವಾಗತ ಕೋರಿದ್ದಾರೆ ಇಂದು ಪಟ್ಟಣದ ಉಪ್ಪಾರಹಳ್ಳಿ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಮುಂಜಾನೆಯಿAದಲೇ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿ ಕಾರ್ಯಕ್ರಮಕ್ಕೆ ಬಂದAತಹ ಸಾವಿರಾರು ಅಭಿಮಾನಿಗಳಿಗೆ ಉಪಹಾರ ವ್ಯವಸ್ಥೆಗಳನ್ನು ಮಾಡಿದ್ದಾರೆ ಇದರೊಟ್ಟಿಗೆ ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಜೇಮ್ಸ್ ಚಿತ್ರವು ಯಶಸ್ವಿಯಾಗಲಿ ಎಂದು ಉಪ್ಪಾರಹಳ್ಳಿ ಗ್ರಾಮಸ್ಥರು ಹಾಗೂ ಯುವಕ ತಂಡದ ಅಭಿಮಾನಿಗಳು ಶುಭಕೋರಿದರು

ಪಟ್ಟಣದ ತುಂಬೆಲ್ಲ ಪುನೀತ್ ರಾಜಕುಮಾರ್ ಅವರ ಕಟೌಟ್ ಒತ್ತು ಮೆರವಣಿಗೆ ಮೂಲಕ ಡೊಳ್ಳು ಕುಣಿತ ಹಾಗೂ ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಪೂಜಾ ಕುಣಿತದೊಂದಿಗೆ ಅಭಿಮಾನಿಗಳು ಸಡಗರದಿಂದ ಈ ಚಿತ್ರವು ದಾಖಲೆ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಜೇಮ್ಸ್ ಚಿತ್ರ ವೀಕ್ಷಣೆಗೆ ತೆರಳಿದರು

ವರದಿ: ಚಂದ್ರಮೌಳಿ ನಾಗಮಂಗಲ

error: