April 27, 2024

Bhavana Tv

Its Your Channel

ಶಾಸಕರು ಹಾಗೂ ಸಂಸದರಿಗೆ ಹೆಚ್.ಕ್ಯಾತನಹಳ್ಳಿ ಗ್ರಾಮದ ಒಡೆದ ಕೆರೆಯೇರಿ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

ನಾಗಮಂಗಲತಾಲೂಕಿನ ಬಿಂಡಿಗನವಿಲೆ ಹೋಬಳಿಯ ಎಚ್ ಕ್ಯಾತನಹಳ್ಳಿ ಗ್ರಾಮದ ಕೆರೆ ಏರಿ ಯ ಕಳೆದ ಡಿಸೆಂಬರ್ ನಲ್ಲಿ ಭಾರಿ ಮಳೆಯಿಂದಾಗಿ ಹೊಡೆದು ಹೋಗಿದ್ದು 20 ಎಕರೆಗೂ ಹೆಚ್ಚು ಜಮೀನಿಗೆ ರಭಸದಿಂದ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ ತದನಂತರ ಬೆಳೆ ಪರಿಹಾರ ನೀಡದೆ ಅಧಿಕಾರಿಗಳ ನಿರ್ಲಕ್ಷ ವಹಿಸಿದ್ದಾರೆ ಮತ್ತು ಗ್ರಾಮದ ಪರಿಸ್ಥಿತಿ ಅತಂತ್ರವಾಗಿದೆ ಜನ-ಜಾನುವಾರುಗಳಿಗೆ ನೀರಿಲ್ಲದೆ ರೈತಾಪಿ ವರ್ಗವು ಕಂಗಾಲಾಗಿದ್ದು ತಕ್ಷಣದಿಂದಲೇ ಕೆರೆ ಏರಿಯನ್ನು ಸರಿಪಡಿಸಿ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕ ಸುರೇಶ್ ಗೌಡ ಮತ್ತು ಸಂಸದೆ ಸುಮಾಲತಾ ರವರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು

ಕೆರೆಯೇರಿ ಹೊಡೆದ ಸಂದರ್ಭದಲ್ಲಿ ಸ್ಥಳೀಯ ಪ್ರತಿನಿಧಿಗಳು ಮತ್ತು ಶಾಸಕ ಸುರೇಶ್ ಗೌಡ .ಮಾಜಿ ಶಾಸಕ ಚಲುವರಾಯಸ್ವಾಮಿ. ತಾಲೂಕಾಡಳಿತ ಹಾಗೂ ಜಿಲ್ಲಾಧಿಕಾರಿ ಅಶ್ವಥಿ ರವರು ಸ್ಥಳ ಭೇಟಿ ನಡೆಸಿ ಕೆರೆಯೇರಿ ಸರಿಪಡಿಸಲು ತಕ್ಷಣದಿಂದಲೇ ಕ್ರಮಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿ ತಿಳಿಸಿ ಹೋದವರು ಯಾರು ಕೂಡ ಗ್ರಾಮದತ್ತ ಭೇಟಿ ನೀಡಿಲ್ಲ ನಷ್ಟ ಉಂಟಾದ ಬೆಳೆಗೆ ಪರಿಹಾರವನ್ನು ಬೆಳೆ ಹಾನಿಯಿಂದ ನೊಂದ ರೈತರಿಗೆ ನೀಡಿಲ್ಲವೆಂದು ಆಕ್ರೋಶಭರಿತರಾಗಿ ರೈತ ಮಹಿಳೆಯರು ನುಡಿದರು

ಪ್ರಚಾರಕಷ್ಟೆ ಕೆ.ಆರ್.ಯಸ್. ಅಣೆಕಟ್ಟಿನ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಸಂಸದೆ ಸುಮಲತಾ ರವರೇ ಒಮ್ಮೆ ನಾಗಮಂಗಲಕ್ಕೆ ಬಂದು ನಮ್ಮ ಗ್ರಾಮದ ಪರಿಸ್ಥಿತಿಯನ್ನು ನೋಡಿ ಉತ್ತಮ ಗುಣಮಟ್ಟ ಹೊಂದಿರುವ ಕೆ.ಆರ್.ಯಸ್. ಅಣೆಕಟ್ಟಿನ ಬಗ್ಗೆ ಅಪಾರ ಪ್ರೀತಿಯಿಂದ ಪ್ರಚಾರಕ್ಕೋಸ್ಕರ ನೂರಾರು ಅಧಿಕಾರಿಗಳು ಮತ್ತು ಮಾಧ್ಯಮದವರೊಂದಿಗೆ ಅಣೆಕಟ್ಟಿಗೆ ಭೇಟಿ ನೀಡಿ ಪ್ರಚಾರ ಪಡೆಯುತ್ತೀರಿ ಹಲವು ತಿಂಗಳುಗಳಿAದ ಕೆರೆ ಏರಿ ಒಡೆದು ಗ್ರಾಮದ ಪರಿಸ್ಥಿತಿ ಹದಗೆಟ್ಟಿದೆ ನಾವು ಕೂಡ ನಿಮಗೆ ಮತ ನೀಡಿದ್ದೇವೆ ಒಮ್ಮೆ ನಾಗಮಂಗಲಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಸರಿಪಡಿಸುವಂತೆ ರೈತ ಮಹಿಳೆಯರು ಸಂಸದೆ ಸುಮಲತಾ ಅವರನ್ನು ತರಾಟೆಗೆ ತೆಗೆದುಕೊಂಡು ಆಗ್ರಹಿಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: