
ನಾಗಮಂಗಲ:– ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ಮತ್ತು ಡಾ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು…..

ನಾಗಮಂಗಲ ತಾಲೂಕು ಆದಿಚುಂಚನಗಿರಿ ಕ್ಷೇತ್ರದಲ್ಲಿ ಸುಮಾರು ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಜಾತ್ರಾ ಮಹೋತ್ಸವ ಸರಳವಾಗಿ ನಡೆಯುತ್ತಿದ್ದು ಭಕ್ತಾದಿಗಳಿಗೆ ಬೇಸರ ಉಂಟುಮಾಡಿತು
ಈ ಸಲ ಬಹಳ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೆರವೇರಿದ್ದು ಸಾವಿರಾರು ಭಕ್ತಾದಿಗಳು ಸೇರಿ ಉತ್ಸಾಹದಿಂದ ರಥೋತ್ಸವವನ್ನು ಎಳೆಯುವುದರ ಮೂಲಕ ಗಂಗಾಧರೇಶ್ವರಸ್ವಾಮಿ ಗೆ ಭಾಗಿಯಾಗಿದ್ದರು
ಶ್ರೀ ಗಂಗಾಧರೇಶ್ವರ ರಥೋತ್ಸವ ಪ್ರಾರಂಭವಾಗುವ ಮೊದಲು ಗಂಗಾಧರೇಶ್ವರ ದೇವರ ಮೂರ್ತಿಯನ್ನು ರಥೋತ್ಸವದ ಸುತ್ತ ಪ್ರದಕ್ಷಿಣೆ ಬಂದು ನಂತರ ಗಂಗಾಧರೇಶ್ವರಸ್ವಾಮಿ ಮತ್ತು ಕಾಲಭೈರವೇಶ್ವರ ಸ್ವಾಮಿಯನ್ನು ತೇರಿನ ಮೇಲೆ ಕೂರಿಸಿ ನಂತರ ಶ್ರೀಶ್ರೀಶ್ರೀ ನಿರ್ಮಲಾನಂದ ಮಹಾಸ್ವಾಮಿಜಿಯವರ ಅಡ್ಡಪಲ್ಲಕ್ಕಿಯನ್ನು ಮುಂದೆ ತರುವ ಮೂಲಕ ಶ್ರೀ ಸ್ವಾಮೀಜಿಯವರು ರಥೋತ್ಸವಕ್ಕೆ ಚಾಲನೆ ನೀಡಿ ರಥೋತ್ಸವವನ್ನು ಅದ್ದೂರಿಯಾಗಿ ನೆರವೇರುವಂತೆ ಮಾಡಿದರು……
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ