December 22, 2024

Bhavana Tv

Its Your Channel

ನಾವೆಲ್ಲರೂ ಇಂದು ಒಂದಾಗಿ ಯುದ್ಧವನ್ನು ಎದುರಿಸುತ್ತಿದ್ದೇವೆ, ಇಲ್ಲಿ ಪ್ರತಿಯೊಬ್ಬ ಭಾರತೀಯ ಸೈನಿಕ:ಪಿಎಂ ನರೇಂದ್ರ ಮೋದಿ

ನವದೆಹಲಿ: ಇಂದು ನಾವೆಲ್ಲರೂ ಯುದ್ಧ ವಾತಾವರಣದ ಮಧ್ಯದಲ್ಲಿದ್ದೇವೆ, ಅದು ಕೊರೋನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೋನಾ ಯುದ್ಧವನ್ನು ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅವರು ಇಂದು ತಮ್ಮ ಆಕಾಶವಾಣಿಯ ತಿಂಗಳ ಕಾರ್ಯಕ್ರಮ ಮನದ ಮಾತಿನಲ್ಲಿ ಮುಖ್ಯವಾಗಿ ಕೊರೋನಾ ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ರನ್ನು coronawarriors.gov.in ಪೋರ್ಟಲ್ ಮೂಲಕ ಸಂಪರ್ಕಿಸುವಂತೆ ಒತ್ತಾಯಿಸಿದರು. ಇತ್ತೀಚೆಗೆ ಆರಂಭಗೊಂಡ ಈ ಪೋರ್ಟಲ್ ನಲ್ಲಿ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದಾರೆ ಎಂದರು.

ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದರು.

ಮೋದಿಯವರ ಮನ್ ಕಿ ಬಾತ್ ನ 64ನೇ ಅವತರಣಿಕೆಯಲ್ಲಿ ಅವರು ಹೇಳಿದ ಮುಖ್ಯಾಂಶಗಳು ಹೀಗಿವೆ :

-ಭಾರತದಲ್ಲಿ ಕೊರೋನಾ ವೈರಸ್ ವಿರುದ್ಧದ ಹೋರಾಟ ಜನಪ್ರೇರಿತವಾದದ್ದು. ಇಡೀ ಜಗತ್ತು ಇಂದು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಮುಂದಿನ ದಿನಗಳಲ್ಲಿ ಕೊರೋನಾ ಬಗ್ಗೆ ಪ್ರಸ್ತಾಪಿಸಿದಾಗ ಭಾರತ ದೇಶದ ಜನಪರವಾದ ಅಭಿಯಾನ, ಕೆಲಸಗಳು ಕೇಂದ್ರಬಿಂದುವಾಗುತ್ತದೆ.

-ನಮ್ಮ ಶ್ರಮಜೀವಿ ರೈತರು ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದಾರೆ. ಕೊರೋನಾ ವಿರುದ್ಧ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೆಲವರು ತಮ್ಮ ಇಡೀ ಪಿಂಚಣಿಯನ್ನು ದಾನ ಮಾಡಿದರೆ, ಕೆಲವರು ಪ್ರಧಾನ ಮಂತ್ರಿ ನಿಧಿಗೆ ನೀಡುತ್ತಿದ್ದಾರೆ. ತರಕಾರಿ ಬೆಳೆಯುವ ರೈತರು ತರಕಾರಿ, ಹಣ್ಣುಗಳನ್ನು ಅಗತ್ಯವಿರುವವರಿಗೆ ನೀಡಿ ಸಹಕರಿಸುತ್ತಿದ್ದಾರೆ. ಕೆಲವರು ಫೇಸ್ ಮಾಸ್ಕ್ ಮಾಡಿ ವಿತರಿಸುತ್ತಿದ್ದಾರೆ. ಕ್ವಾರಂಟೈನ್ ಗೆ ನೀಡಲಾಗಿರುವ ಶಾಲೆ,ಕಾಲೇಜು, ಸರ್ಕಾರಿ ಕಟ್ಟಡಗಳಿಗೆ ಕೆಲವರು ಬಣ್ಣ ಬಳಿದು ಸಿದ್ದಪಡಿಸಿಕೊಡುತ್ತಿದ್ದಾರೆ.

-ನಮ್ಮ ಉದ್ಯಮ, ಕಚೇರಿ ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ ವಲಯ ಹೀಗೆ ಎಲ್ಲಾ ವಲಯಗಳಲ್ಲಿ ಕೊರೋನಾ ವೈರಸ್ ನಂತರ ಹೊಸ ಬದಲಾವಣೆಯನ್ನು ಎಲ್ಲರೂ ಅಳವಡಿಸಿಕೊಳ್ಳುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಹೊಸತನವನ್ನು ಅನ್ವೇಷಿಸುವ ಆಸೆ ಹುಟ್ಟಿಕೊಂಡಿದೆ.

-ನಿರ್ಗತಿಕರಿಗೆ ಆಹಾರ ನೀಡುವುದರಿಂದ ಹಿಡಿದು, ರೇಷನ್ ವಿತರಿಸುವುದು, ಲಾಕ್ ಡೌನ್ ಸುಗಮವಾಗಿರುವಂತೆ ನೋಡಿಕೊಳ್ಳುವುದು, ಆಸ್ಪತ್ರೆಗಳಲ್ಲಿ ವ್ಯವಸ್ಥೆ, ವೈದ್ಯಕೀಯ ಉಪಕರಣಗಳ ಉತ್ಪಾದನೆ ಇತ್ಯಾದಿಗಳಲ್ಲಿ ಇಡೀ ದೇಶ ಒಂದೇ ದಿಕ್ಕಿನತ್ತ ಸಾಗುತ್ತಿದ್ದು ಅದು ಒಂದು ಸಾಮಾನ್ಯ ಉದ್ದೇಶದಿಂದ, ಅದು ಕೊರೋನಾ ಯುದ್ಧ ಗೆಲ್ಲುವುದು. ಇಲ್ಲಿ ಭಾರತೀಯರೆಲ್ಲರೂ ಸೈನಿಕರು.

-ವಿದೇಶಗಳ ನಾಯಕರು ಥ್ಯಾಂಕ್ಯೂ ಇಂಡಿಯಾ, ಭಾರತದ ಜನರಿಗೆ ಧನ್ಯವಾದಗಳು ಎಂದಾಗ ನನಗೆ ಹೆಮ್ಮೆಯಾಗುತ್ತದೆ. ಭಾರತ ದೇಶ ತನ್ನ ನಾಗರಿಕರ ಕಾಳಜಿ ನೋಡಿಕೊಳ್ಳುವುದು ಮಾತ್ರವಲ್ಲದೆ ಉತ್ತಮ ಆರೋಗ್ಯಕರ ಗ್ರಹವನ್ನು ನಿರ್ಮಾಣ ಮಾಡಲು ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ.

-ನಮ್ಮಲ್ಲಿನ ಶಕ್ತಿ, ಬಲವನ್ನು ವೃದ್ಧಿಸಲು ಪುರಾತನ ಕಾಲದ ಸಾಂಪ್ರದಾಯಿಕ ವ್ಯವಸ್ಥೆಯನ್ನು ಪಾಲಿಸಿ. ಸಂಪ್ರದಾಯ, ಆಚರಣೆಗಳನ್ನು ಇಡೀ ಜಗತ್ತಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಚುರಪಡಿಸಿ.

-ಇತ್ತೀಚೆಗೆ ಜನರಲ್ಲಿ ಮಾಸ್ಕ್ ಧರಿಸುವ ಅರಿವು ಮೂಡಿದೆ. ಮಾಸ್ಕ್ ಧರಿಸಿದ ವ್ಯಕ್ತಿಗಳೆಲ್ಲ ಅನಾರೋಗ್ಯರು ಎಂದು ಅರ್ಥವಲ್ಲ. ಅದೊಂದು ಮುನ್ನೆಚ್ಚರಿಕೆಯಷ್ಟೆ.

source : Dailyhunt

error: