May 30, 2023

Bhavana Tv

Its Your Channel

ಇಂದು ಅಕ್ಷಯ ತೃತೀಯ : ಚಿನ್ನ ಖರೀದಿದಾರರಿಗೆ ಇಲ್ಲಿದೆ ಸಿಹಿಸುದ್ದಿ

ನವದೆಹಲಿ : ಅಕ್ಷಯ ತೃತೀಯ ದಿನವಾದ ಇಂದು ಚಿನ್ನ ಖರೀದಿದಾರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಆನ್ ಲೈನ್ ಮೂಲಕ ಚಿನ್ನ ಖರೀದಿಗೆ ಚಿನ್ನದ ಅಂಗಡಿಗಳಿಗೆ ಕೆಲಕಾಲ ವಹಿವಾಟು ನಡೆಸಲು ಅನುವು ಮಾಡಿಕೊಡಲಾಗುತ್ತಿದೆ.

ಇನ್ನು ಹಸಿರು ವಲಯದಲ್ಲಿ ಎರಡು ಗಂಟೆಗಳ ಕಾಲ ಮಳಿಗೆ ಅನುಮತಿ ನೀಡಲಾಗಿದೆ. ಗ್ರೀನ್ ಜೋನ್ ಇರುವ ಜಿಲ್ಲೆಗಳಲ್ಲಿ ಎರಡು ಗಂಟೆಗಳ ಕಾಲ ಚಿನ್ನದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ವಹಿವಾಟು ನಡೆಸಲು ಚಿನ್ನದ ಅಂಗಡಿಯವರು ಸಿದ್ಧತೆ ನಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಆಭರಣ ವರ್ತಕರ ಸಂಘದ ಅಧ್ಯಕ್ಷ ಡಾ.ಬಿ.ರಾಮಾಚಾರಿ, ಎರಡು ಗಂಟೆ ಮಾತ್ರ ಮಳಿಗೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆನ್ ಲೈನ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ವಿಡಿಯೋ ಕಾಲ್ ಮೂಲಕ ಚಿನ್ನವನ್ನು ನೋಡಿ,ಪೇಮೆಂಟ್ ಆಯಪ್ ಗಳ ಮೂಲಕ ಹಣ ಸಂದಾಯ ಮಾಡಬಹುದುದಾಗಿದೆ.

About Post Author

error: