April 26, 2024

Bhavana Tv

Its Your Channel

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ೧೦೧ನೇ ಸದಸ್ಯ ಮಂಡಳಿ ಸಭೆ

ಶಿವಮೊಗ್ಗ : ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ೧೦೧ನೇ ಸದಸ್ಯ ಮಂಡಳಿ ಸಭೆಯು ಭದ್ರಾ ಕಾಡಾ ಸಭಾಂಗಣದಲ್ಲಿ ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿತವಾದ ವಿಷಯಗಳು ಹಾಗೂ ಕೈಗೊಂಡ ನಿರ್ಣಯಗಳು..

  • ಕಳೆದ ಬಾರಿ ನಡೆದ ೧೦೦ ನೇ ಮಂಡಳಿ ಸಭೆಯಲ್ಲಿ ತೆಗೆದುಕೊಂಡು ನಡವಳಿಗಳ ಮೇಲೆ ತಗೆದುಕೊಂಡ ಅನುಪಾಲನಾ ಕ್ರಮಗಳನ್ನು ಮಂಡಿಸಲಾಯಿತು.
  • ಕಳೆದ ಸಾಲಿನ ೨೦೨೦-೨೧ ನೇ ಸಾಲಿನಲ್ಲಿ ರಾಜ್ಯ ೨೭೦೫ ಲೆಕ್ಕ ಶೀರ್ಷಿಕೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ ಹಾಗೂ ನಬಾರ್ಡ್ ಯೋಜನೆಗಳಿಗೆ ಒಟ್ಟು ೧೬೨೯.೫೨ ಲಕ್ಷ ಅನುದಾನ ಅಂಚಿಕೆಯಾಗಿದ್ದು ಇಲ್ಲಿಯವರೆಗೆ ಒಟ್ಟು ೧೩೦೪.೬೮ ಲಕ್ಷ ಅನುದಾನ ಬಳಕೆಯಾಗಿದೆ.
  • ಕೇಂದ್ರ ಯೋಜಿತ ೪೭೦೫ ಲೆಕ್ಕ ಶೀರ್ಷಿಕೆಯಡಿ ಎಸ್.ಡಿ.ಪಿ ಯೋಜನೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ ಕಾಮಗಾರಿಗಳಿಗೆ ಒಟ್ಟು ೫೯೬.೯೭ ಲಕ್ಷ ಅನುದಾನ ಮಂಜೂರಾಗಿದ್ದು ಸಂಪೂರ್ಣ ಕಾರ್ಯಸಾಧನೆ ಆಗಿದೆ ಎಂಬ ಮಾಹಿತಿ ಸಭೆಯ ಗಮನಕ್ಕೆ ತರಲಾಯಿತು.
  • ಪಿಎಂಕೆಎಸ್ಸವೈ ಯೋಜನೆಯ ಅನುಸಾರ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ, ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಕಾಮಗಾರಿಗಳಿಗೆ ಒಟ್ಟು ೧೨೦.೩೪ ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಕುರಿತು ಮಾಹಿತಿ ನೀಡಲಾಯಿತು.
  • ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿ ಹೊಲಗಾಲುವೆ ಮತ್ತು ಆಯಕಟ್ಟು ರಸ್ತೆ ಅಭಿವೃದ್ದಿಗೆ ಒಟ್ಟು ೫೦೦ಲಕ್ಷ ಅನುದಾನ ಮಂಜೂರಾಗಿದ್ದು, ಇದರಲ್ಲಿ ೭೫ಲಕ್ಷ ವರಾಯಿ ಯೋಜನೆಯಡಿ ಹೊಲಗಾಲುವೆ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ.
  • ೨೦೨೧-೨೨ ನೇ ಸಾಲಿನ ೨೭೦೫ ಲೆಕ್ಕ ಶೀರ್ಷಿಕೆಯಡಿ ಒಟ್ಟು ೧೦೧೬.೫೨ ಲಕ್ಷ, ನಂಜುAಡಪ್ಪ ವರದಿಯ ಅನುಸಾರ ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ೪೭೦೫ ಎಸ್.ಡಿ.ಪಿ ಯೋಜನೆಯಡಿ ಬರುವ ಚನ್ನಗಿರಿ, ಹರಪನಹಳ್ಳಿ, ಹಿರಿಕೇರೂರು, ಹಿರಿಯೂರು, ಚಳ್ಳಕೆರೆ, ಹೊನ್ನಾಳಿ, ಹಾನಗಲ್, ಹಾವೇರಿ, ತರೀಕೆರೆ, ಶಿಕಾರಿಪುರ ಮತ್ತು ಶಿರಹಟ್ಟಿ ಮುಂದುವರೆದ ಕಾಮಗಾರಿಗಳು ಸುಮಾರು ೧೫೮.೨೭ಲಕ್ಷ ಹಾಗೂ ಹೊಸ ಕಾಮಗಾರಿಗಳು ಸುಮಾರು ೪೬೬.೫೫ಲಕ್ಷ ಮತ್ತು ನಬಾರ್ಡ್ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂಬ ಮಾಹಿತಿಯನ್ನು ಸಭೆಯ ಅವಹಾಗಾಹನೆಗೆ ತರಲಾಯಿತು.
  • ತಕ್ಷಣಕ್ಕೆ ಭದ್ರಾ ಅಚ್ಚುಕಟ್ಟಿನ ಅಭಿವೃದ್ದಿ ಕಾಮಗಾರಿಗಳಿಗೆ ಪ್ರತಿಯೊಬ್ಬ ನಿರ್ದೇಶಕರಿಗೆ ೨ ಕೋಟಿಯಂತೆ ಒಟ್ಟು ೨೫ ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು, ಇದರೊಂದಿಗೆ ನಿರ್ದೇಶಕರಿಗೆ ಪ್ರತಿ ಮಂಡಳಿ ಸಭೆಯ ಹಾಜರಾತಿಗೆ ನೀಡುವ ನೀಡುವ ಮೂರು ಸಾವಿರ ಭತ್ಯೆ ಬದಲಾಗಿ ಐದು ಸಾವಿರಕ್ಕೆ ಹೆಚ್ಚಿಸುವಂತೆ ಹಾಗೂ ಪ್ರಯಾಣ ಭತ್ಯೆ, ದಿನ ನಿತ್ಯ ಭತ್ಯೆ ನೀಡುವಂತೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
  • ಈ-ಟೆಂಡರ್ ಅನುಸಾರ ದೇಶದ ಯಾವುದೇ ಮೂಲೆಯಲ್ಲಿ ಗುತ್ತಿಗೆದಾರ ಕುಳಿತುಕೊಂಡು ಬಿಡ್ ಮಾಡಬಹುದು, ಬಿಡ್ ಮಾಡುವ ಗುತ್ತಿಗೆದಾರ ಕಡಿಮೆ ಬೆಲೆಗೆ ಕೋಟ್ ಮಾಡುವುದರಿಂದ ಹಾಗೂ ಸ್ಥಳೀಯವಾಗಿ ಲಭ್ಯವಿಲ್ಲದಿರುವ ಕಾರಣ ಸ್ಥಳೀಯ ಸಣ್ಣ ಗುತ್ತಿಗೆದಾರರಿಗೆ ಸಬ್ ಕಾಂಟ್ರಾಕ್ಟ್ ನೀಡುವುದರಿಂದ ಕಾಮಗಾರಿಯಲ್ಲಿ ಗುಣ ಮಟ್ಟದ ಕೆಲಸ ನಿರ್ವಹಣೆ ಕಷ್ಟ ಸಾಧ್ಯವಾಗುತ್ತದೆ, ಆದ್ದರಿಂದ ಈ ನಿಯಮದಲ್ಲಿ ಬದಲಾವಣೆ ತರಲು ಅವಕಾಶವಿದ್ದಲ್ಲಿ ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಿ, ಸ್ಥಳೀಯ ಗುತ್ತಿಗೆದಾರರು ಈ-ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬದಲಾವಣೆ ತರುವಂತೆ ತೀರ್ಮಾನ ಕೈಗೊಳ್ಳಲಾಯಿತು.
  • ಸುಮಾರು ೫ ಲಕ್ಷದ ಕಾಮಗಾರಿಯ ತನಕ ಮಾನ್ಯುಯಲ್ ಟೆಂಡರ್ ಕರೆಯುವ ಹಾಗೆ ಪ್ರಸ್ತಾವನೆ ಸಲ್ಲಿಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಲಾಯಿತು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶಿವಕುಮಾರ್, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್, ನಿರ್ದೇಶಕರಾದ ವಿನಾಯಕ್, ಮಂಜುನಾಥ್, ಷಡಕ್ಷರಿ, ರುದ್ರ ಮೂರ್ತಿ, ಷಣ್ಮುಖಪ್ಪ, ಸದಾಶಿವಪ್ಪ, ರಾಜಪ್ಪ, ಹನುಮಂತಪ್ಪ ಹಾಗೂ ಸಮಸ್ತ ಭದ್ರಾ ಕಾಡಾ ಅಧಿಕಾರಿಗಳು ಉಪಸ್ಥಿತರಿದ್ದರು.

error: