“ಕರೋ ಯೋಗ ರಹೋ ನಿರೋಗ” ಬದುಕಿನ ಒತ್ತಡದಿಂದ ನೆಮ್ಮದಿ ಕಳೆದುಕೊಂಡವರಿಗೆ ಯೋಗಾಭ್ಯಾಸ ಒಂದು ಆಶಾಕಿರಣ. ನೆಮ್ಮದಿ ಅರಸುತ್ತಿರುವವರು, ಆರೊಗ್ಯಕ್ಕಾಗಿ ಹಾತೊರೆಯುತ್ತಿರುವವರ ಪಾಲಿಗೆ ಸಮಾಧಾನ, ಶಾಂತಿ, ಸಂತೃಪ್ತಿ ನೀಡುವಲ್ಲಿ ಯೋಗ ಪರಿಣಾಮಕರಿಯಾಗಿದೆ. ಯೋಗದ ಪರಿಚಯ ಹಿಂದಿನದಲ್ಲ. ಬಹು ಹಿಂದಿನ ಕಾಲದಿಂದಲೂ ಅನೇಕ ಮಹಾತ್ಮರು ಇದನ್ನು ಅಭ್ಯಸಿಸಿಕೊಂಡು ಸುಖಮಯ ಆರೊಗ್ಯ ಜೀವನ ನಡೆಸಿದ ಉದಾಹರಣೆಗಳುಂಟು. ಯೋಗವು ಸಂಸ್ಕೃತದ ಮೂಲ ಧಾತುವಾದ “ಯುಜ” ಎಂಬ ಪದದಿಂದ ಉತ್ಪನ್ನವಾಗಿದೆ. ಈ ಶಬ್ದಕ್ಕೆ ಮನಸ್ಸನ್ನು ನಿರ್ದೆಶಿಸಿ ಕೇಂದ್ರಕರಿಸು, ಸೇರಿಸು, ಆಸಕ್ತಿವಹಿಸು, ಸಮಾಗಮ, ಐಕ್ಯವಾಗು ಮುಂತಾದ ಅರ್ಥಗಳಿವೆ. ಯೋಗಗುರುಗಳಾದ ಪತಂಜಲಿ ಮಹಾಮುನಿಗಳು ಯೋಗಸೂಕ್ತವನ್ನು ಮಾನವರ ಸಂಕಷ್ಟಗಳನ್ನು ಆರೊಗ್ಯ ಸಮಸ್ಯೆಯನ್ನು ನಿಗಿಸಿದ್ದಾರೆ. ಧ್ಯಾನ, ಧಾರುಣ, ಸಮಾಧಿ, ಸ್ಥಿತಿಗಳಿಂದ ಕೂಡಿದ ಸಂಯಮವೇ ಯೋಗ. ಇದನ್ನು ದಹರ ವಿದ್ಯೆ ಎನ್ನುತ್ತಾರೆ. ಯೋಗಭ್ಯಾಸದ ಮೂಲ ಉದ್ದೇಶ ಆರೊಗ್ಯಕರ ಹಾಗೂ ಸುಖ ಜೀವನ ನಡೆಸುದು. ಇದು ಶಿಸ್ತನ್ನು ಕಲಿಸಿ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ವಿಧಾನವನ್ನು ಬೋಧಿಸುತ್ತದೆ. ದೇಹ ಸೌಂದರ್ಯ ವೃದ್ದಿಸಿ ಇತರ ಚಟುವಟಿಕೆಗಳಿಗೆ ಉತ್ಸಾಹ ನೀಡುತ್ತವೆ.
ಯೋಗ ಎಂದರೆ ಮನಸ್ಸನ್ನು ಅದರ ತತ್ವವನ್ನು ಉತ್ತಮವಾಗಿ ಅರಿತುಕೊಂಡು ಅದನ್ನು ಒಳ್ಳೆಯ ಸ್ಥಿತಿಯಲ್ಲಿ ನೆಲೆಗೊಳಿಸುವುದು ಎಂದರ್ಥ. ಯೋಗಶಾಸ್ತçದ ಪ್ರಕಾರ ಯಮ, ನಿಯಮ, ಪ್ರಾಣಾಯಾಮ, ಪ್ರತ್ಯಹಾರ, ಧಾರಣ, ಧ್ಯಾನ, ಸಮಾಧಿ, ಆಸನ ಎಂಬ ಅಷ್ಟಾಂಗ ಯೋಗಗಳಿವೆ. ಇವುಗಳಲ್ಲಿ ಆರೊಗ್ಯಕ್ಕೆ ಮನಸ್ಸಿನ ಶುಚಿತ್ವಕ್ಕೆ ಆಸನಗಳೇ ಕಾರಣ. ಆದರಿಂದ್ದ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವ್ಯಾಯಾಮಕ್ಕೂ ಯೋಗಾಸನಕ್ಕೂ ಕೆಲವು ವೈತ್ಯಾಸಗಳಿವೆ.
ವ್ಯಾಯಾಮವು ಶರೀರದ ಮಾಂಸಖoಡಗಳನ್ನು ಪುಷ್ಟಿಗೊಳಿಸಿ ಶರೀರಕ್ಕೆ ಗಂಭೀರ ನೋಟ ಒದಗಿಸುತ್ತದೆ. ಅದಕ್ಕೆ ಗುರುಗಳ ಮಾರ್ಗದರ್ಶನ ಬೇಕಿಲ್ಲ. ಆದರೆ ಯೋಗಾಸನಗಳಿಂದ ಶರೀರ, ಮನಸ್ಸು, ನರಗಳು ಇವುಗಳಿಗೆ ಉತ್ತಮ ವ್ಯಾಯಾಮ ದೊರೆತು ಕಾರ್ಯಶೀಲವನ್ನಾಗಿ ಮಾಡುತ್ತದೆ. ಹೃದಯದ ನರಗಳು, ಮೆದುಳು, ಶ್ವಾಸಕೋಶ, ಕಿಡ್ನಿ ಮುಂತಾದವುಗಳು ತಮ್ಮ ಕಾರ್ಯ ತತ್ಪರತೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಯೋಗಭ್ಯಾಸಕ್ಕೆ ಗುರುಗಳ ಮಾರ್ಗದರ್ಶನ ಬೇಕೆಬೇಕು.
ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದು ಅದರಲ್ಲೂ ವಿಶೇಷವಾಗಿ ಪದ್ಮಾಸನ, ಶಲಭಾಸನ, ಪರ್ವತಾಸನ ದೇಹಕ್ಕೆ ಆರೋಗ್ಯ, ಸೌಂದರ್ಯವನ್ನು ನೀಡುವ ವಿವಿಧ ಆಸನಗಳನ್ನು ಒಳಗೊಂಡರುವ ಸೂರ್ಯ ನಮಸ್ಕಾರ ಸರ್ವಾಂಗಸನಗಳನ್ನು ಪ್ರತಿದಿನ ಮಾಡಲೇ ಬೇಕು. ಯೋಗಭ್ಯಾಸದಿಂದ ದೈಹಿಕ ಲಾಭ, ಆಧ್ಯಾತ್ಮಿಕ ಲಾಭದಿಂದ ಅನ್ವೇಷಣಾಶಕ್ತಿ, ಧೂಮಪಾನ ಲೈಂಗಿಕತೆ ಮುಂತಾದವಗಳನ್ನು ನಿಗ್ರಹಿಸಬಹುದಾಗಿದೆ. ಪತಂಜಲಿಯಿoದ ಸದ್ಯ ವಾಸ್ತವದಲ್ಲಿ ೩ಲಕ್ಷಕ್ಕೂ ಮಿಕ್ಕಿ ತರಬೇತಿ ಶಿಬಿರಗಳು ದೇಶ ವಿದೇಶಗಳಲ್ಲಿ ಫಲಪ್ರದಾಯಕವಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರಾಣಾಯಾಮ ಎಂಬುವುದು ಒಂದು ಉಸಿರಾಟದ ವಿಧಾನ. ಪ್ರಾಣ ಎಂದರೆ ಜೀವ, ಉಸಿರು, ಶಕ್ತಿ, ಗಾಳಿ ಎಂಬುದಾಗಿಯೂ ಅರ್ಥವಿದೆ. ಆಯಾಮ ಎಂದರೆ ವಿಸ್ತಾರ ಎಂದರ್ಥ. ಒಟ್ಟಾರೆಯಾಗಿ ಪ್ರಾಣಾಯಾಮ ಎಂದರೆ ಉಸಿರಿನ ವಿಸ್ತಾರ ಮತ್ತು ನಿಗ್ರಹ, ಶ್ವಾಸಕೋಶಗಳ ಕ್ರಿಯೆಯನ್ನು ಹತೋಟಿಯಲ್ಲಿ ಇಟ್ಟುಕೋಳ್ಳುವುದೇ ಪ್ರಾಣಾಯಾಮ. ಪ್ರಾಣಕ್ಕೂ ಹಾಗೂ ಮನಸ್ಸಿಗೂ ನಿಕಟ ಸಂಬoಧ ಇರುವುದರಿಂದ ಪ್ರಾಣದ ಸಹಾಯದಿಂದ ಚಿತ್ತ ವೃತ್ತಿಗಳನ್ನು ನಿಯಂತ್ರಿಸಿ ಅದನ್ನು ಆತ್ಮಾಭಿಮುಖವಾಗಿ ಮಾಡುವುದೇ ಪ್ರಾಣಾಯಾಮದ ಮುಖ್ಯ ಗುರಿ.
ಪ್ರಾಣಾಯಾಮಗಳು ಆರೊಗ್ಯವೃದ್ದಿಗೆ ತುಂಬಾ ಸಹಕಾರಿ. ಕಲುಷಿತವಾದ ಗಾಳಿ, ನೀರು, ವಾತವರಣ ಇವುಗಳಿಂದ ಮುಕ್ತವಾಗಲು ಆಯುಷ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಾಣಾಯಾಮದ ಅಭ್ಯಾಸಗಳು ಅತ್ಯಂತ ಪರಿಣಾಮಕಾರಿಯಾಗಿದೆ. ಪ್ರಾಣಾಯಾಮದಲ್ಲಿ ಭಸ್ರಿö್ತಕಾ, ಅನುಲೋಮ, ವಿಲೋಮ, ಕಪಾಲಭಾತಿ, ಉದ್ಗೀತ, ಪ್ರಸಾವ, ಉಜ್ಜಯ, ಬ್ರಾಮರೀ, ತ್ರಿಭಂದ ಎಂಬ ಪ್ರಕಾರಗಳಿವೆ.
ಇತ್ತಿಚೀನ ದಿನಗಳಲ್ಲಿ ಯೋಗ ಪ್ರಾಣಾಯಾಮ ಪ್ರಚಾರದಲ್ಲಿ ತೊಡಗಿಸಿಕೊಂಡವರಲ್ಲಿ ಪತಂಜಲಿ ಪೀಠದ ಪೂಜ್ಯ ಸ್ವಾಮೀಜಿ ಬಾಬ ರಾಮದೇವ ಮೊದಲಿಗರು. ಯೋಗವನ್ನು ವಿಶ್ವ ಮಟ್ಟ ದೊರಕಿಸುವಷ್ಟು ತನ್ನನ್ನು ತೊಡಗಿಸಿ ಪ್ರತಿವರ್ಷ ಜೂನ್ ೨೧ರಂದು ಅಂತರಾಷ್ಟಿಯ ಯೋಗ ದಿನವನ್ನಾಗಿ ಇಡೀ ವಿಶ್ವದಲ್ಲಿ ಆಚರಣೆಗೊಳ್ಳುತ್ತಿದೆ.
ಕ್ರಮಬದ್ದವಾದ ಹಾಗೂ ನಿರಂತರ ಯೋಗಭ್ಯಾಸ ಮತ್ತು ಪ್ರಾಣಾಯಾಮ ಅಭ್ಯಾಸದಿಂದ ಅನೇಕ ಮಹಿಳೆಯರು ಮತ್ತು ಪುರುಷರು ತಮ್ಮ ಯೌವ್ವನವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಮಹಿಳೆ ಆರೊಗ್ಯದಿಂದ ಇದ್ದರೆ ಮಾತ್ರ ಇಡೀ ಕುಟುಂಬ ಸಂತೋಷದಿoದ ಇರಲು ಸಾಧ್ಯ.
ಗಣೇಶ ಹೆಬ್ಬಾರ
ಸಂಚಾಲಕರು ಮತ್ತು ರಾಷ್ಟçಪ್ರಶಸ್ತಿ ಪುರಸ್ಕೃತರು
ಪತಂಜಲಿ ಯೋಗ ಸಮಿತಿ ಹೊನ್ನಾವರ
೯೪೪೮೮೯೩೮೪೧
More Stories
ನಿತ್ಯ ಅಪ್ಪನ ದಿನಾಚರಣೆ ಮತ್ತು ಮಕ್ಕಳು
ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವ ಕೃಷಿಕರು
ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.