April 27, 2024

Bhavana Tv

Its Your Channel

ಶಾಶ್ವತ ಪುನರ್ ವಸತಿ ಕಲ್ಪಿಸಲು ರಾಜ್ಯ ಪಾಲರಿಗೆ ಮನವಿ ಸಲ್ಲಿಕೆ

ಚಿಕ್ಕೋಡಿ . ಮಳೆ ಮತ್ತು ನೆರೆಯಿಂದ ತತ್ತರಿಸಿದ ಸಂತ್ರಸ್ತರಿಗೆ ಶಾಶ್ವತಪರಿಹಾರದ ನೆರವು ಕಲ್ಪಿಸಬೇಕೆಂದು ರಾಜ್ಯಪಾಲರಿಗೆ ಚಿಕ್ಕೋಡಿಯ ತಹಸಿಲ್ದಾರ ಕಛೇರಿಯ ಮೂಲಕ ವಿವಿಧ ಸಂಘಟನೆಗಳ ಮುಖಂಡರು ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪ್ರದೇಶಕ್ಕೆ ಭೇಟಿ ನೀಡಿ ದುಃಖ ಆಲೈಸಿದ ಗದಗ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಮಾತನಾಡಿ ಪ್ರತೀವರ್ಷ ನೆರೆ ಮತ್ತು ಮಳೆ ಬಂದು ಇಲ್ಲಿನ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ಧು ನದಿಗಳೆಲ್ಲಾ ಸುತ್ತುವರೆದು ಸಾವು ಬದುಕಿನ ಆಟ ನಿರ್ಮಿಸುತ್ತವೆ ,ಬದುಕುವ ಹಕ್ಕನ್ನೆ ಕಳೆದುಕೊಂಡು ನಿಸ್ಸಾಯಕರಾಗಿದ್ಧಾರೆ ಆಳುವ ಸರಕಾರಗಳು ಕೇವಲ ಅಸ್ವಾಸನೆ ನೀಡುತ್ತಾ ಬರುತ್ತಿದ್ಧು ಸಂತ್ರಸ್ತರು ಸೂರಿಲ್ಲದೆ ಸೊರಗಿದ್ಧಾರೆ ತುತ್ತು ಕೂಳಿಗಾಗಿ ಪರದಾಡುವ ಪರಸ್ಥತಿ ನಿರ್ಮಾಣವಾಗಿದೆ ಯಾವುದೇ ಸರ್ಕಾರಗಳಾಗಲಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆAದು ಸರ್ಕಾರಗಳಿಗೆ ಒತ್ತಾಯಿಸಿದರು. ರೈತ ಸಂಘದ ವಕ್ತಾರ ತ್ಯಾಗರಾಜ ಪಿ ಕದಂ ಮಾತನಾಡಿ ಸಂತ್ರಸ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಶೀಘ್ರವೇ ಮುಂದಾಗಬೇಕಿದ್ಧು ಆಶ್ರಯ ನೀಡುವ ಬದಲು ವಿಷವನ್ನಾದರು ನೀಡಿ ಎಂದು ಆಕ್ರೋಶದ ಅಳಲು ಹೊರಹಾಕಿದರಲ್ಲದೆ ಸರಕಾರಗಳ ಕೆಟ್ಟ ಕ್ರಮಗಳನ್ನು ಖಂಡಿಸಿದರು ನೆರೆ ಪೀಡಿತ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಇಲ್ಲದಿದ್ದರೆ ಮುಂಬರುವ ದಿನಮಾನಗಳಲ್ಲಿ ಇ ಭಾಗದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೆವೆ ಇದಕ್ಕೆ ಸರಕಾರಗಳೆ ನೆರೆ ಹೊಣೆ ಎಂದರಲ್ಲದೆ ಭ್ರಷ್ಟತೆಯ ವಿರುದ್ಧ ಗುಡುಗಿದರು.
ವಂದೇ ಮಾತರಂ ಟ್ರಸ್ಟ ಆಪ್ ಇಂಡಿಯಾ ಸಂಸ್ಥಾಪಕರಾದ ಅಪ್ಪಾ ಸಾಹೇಬ್ ಕುರಣೆ ಮಾತನಾಡಿ ಕಳೆದ ವರ್ಷ ಸರಕಾರ ನೀಡಬೆಕಾದ ನೆರೆ ಪರಿಹಾರ ಇಂದಿಗೂ ಯಾಮೊಬ್ಬ ಫಲಾನುಭವಿಗೂ ಸರಿಯಾಗಿ ದೊರಕ್ಕಿಲ್ಲಾ ನೈಜತೆಯ ವಾಸ್ತಂಶವನ್ನು ಸರಕಾರಗಳು ಅರಿಯಲಿ ಎಂದು ಎಚ್ಚರಿಸಿದರು,
ಈ ಸಂದರ್ಭದಲ್ಲಿ ನಟ ಬಸವರಾಜ ಪಟ್ಟನ ಶೆಟ್ಟರ ನೆರೆ ಸಂತ್ರಸ್ತರ ಅಳಲಿನ ಸತ್ಯಾಂಶವನ್ನು ಬಿಚ್ಚಿಟ್ಟರು. ಇ ಸಂದರ್ಭದಲ್ಲಿ ರಾಜು ಮುಂಡೆ ,ಸಚಿನ ಸೋನಾವನೆ, ಪ್ರಥ್ವಿರಾಜ ಕದಂ,ಸತೀಶ ಕಾಂಬ್ಳೆ ,ಸೇರಿದಂತೆ ಸೇರಿದಂತೆ ಮುಂತಾದವರು ಪಾಲ್ಗೋಂಡಿದ್ಧರು.

error: