
ಹುಬ್ಬಳ್ಳಿ:- ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ೯೩ನೇ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬೆಂಗಳೂರಿನ ಮೆ.ಕುಶಾಗ್ರಮತಿ ಆರ್ನಾಟಿಕ್ಸ ವ್ಯವಸ್ಥಾಪಕ ನಿರ್ದೇಶಕ ಡಾ. ಅನಂತ ಆರ್ ಕೊಪ್ಪದ ಮಾತನಾಡಿ ಉತ್ತರ ಕರ್ನಾಟಕದ ಜಿಲ್ಲೆಗಳು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ. ಈ ಭಾಗದ ಜನರು ಪ್ರಭಾವಿತರಾಗಿ ಮುಂದಾಗಬೇಕು.ಉದ್ಯಮ ಎನ್ನುವುದು ಹರಿಯುತ್ತಿರುವ ನೀರಿನಂತೆ ಈ ಪಯಣದಲ್ಲಿ ಸುಖ ದುಃಖಗಳು ಎರಡು ಇರುತ್ತದೆ.ಮುಳ್ಳಿನ ಹಾದಿಯಲ್ಲಿ ನಡೆಯಬೇಕಾಗುತ್ತದೆ.
ಸಣ್ಣ ಸಣ್ಣ ಉದ್ಯಮದಿಂದ ಪ್ರಾಮಾಣಿಕವಾಗಿ ದುಡಿದರೆ ಬೆಳೆಯಲು ಸಾಧ್ಯ ಎಂದರು.
ಹೋಸಹಳ್ಳಿ ಜಗದ್ಗುರುಗಳು ಅಭಿನವ ಬೂದಿಶ್ವರ ಸ್ವಾಮಿಗಳು ಮಾತನಾಡಿ ಉದ್ಯಮಿಗಳು ಒತ್ತಡದಿಂದ ಜೀವನ ಸಾಗಿಸುತ್ತಿದ್ದಾರೆ. ಹಣಗಳಿಸುವದರಲ್ಲಿ ಕುಟುಂಬ ಮತ್ತು ಮಕ್ಕಳನ್ನು ಮರೆಯುತ್ತಾರೆ. ಹಣಕ್ಕಿಂತ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಕಲಿಸಿ ಒಳ್ಳೆಯ ದಾರಿ ತೋರಿಸಿದರೆ ಕೋಟಿ ಹಣ ಗಳಿಸಿದಷ್ಟು ಸಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇ. ವಿಜಯ ಇಲೇಕ್ಟ್ರಿಕಲ್ಸನ ವಿಜಯಕುಮಾರ ಗುಡ್ಡದ, ತುಮಕೂರಿನ ಸಿ.ಒ.ಪಿ.ಪಿ.ಆರ್.ಆರ್.ಡಿ ಇಂಡಸ್ಟ್ರಿಸ ಪ್ರೈವೇಟ್ ಲಿ.ನ ಎಚ್.ಜಿ.ಚಂದ್ರಶೇಖರ, ಹುಬ್ಬಳ್ಳಿಯ ಮೇ.ಮಾಣಿಕಭಾಗ್ ಆಟೋಮೊಬೈಲ್ ಪ್ರೈವೇಟ್ ಲಿ.ನ ರಮೇಶ್ ಶಹಾ, ಆಲ್ಯು ಪ್ರಿಂಟ್ ನ ಜಯಪ್ರಕಾಶ ಟೆಂಗಿನಕಾಯಿ, ಹೊಸಪೇಟೆಯ ಮೆ.ಸಾಯಿಪೆಂಟನ ಪ್ರಿಸಾಮಕ್ಸ ಇಂಡಸ್ಟ್ರಿಯ ಸಂತೋಷ ನಾಗಪತ್ರಿಕೊಂಡ ಅವರುಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆ.ಸಿ.ಸಿಐ ಅಧ್ಯಕ್ಷರಾದ ಮಹೇಂದ್ರ ಲದ್ದಡರವರು ಅಧ್ಯಕ್ಷತೆಯನ್ನು ವಹಿಸಿದ್ದರು.ಸಂಸ್ಥಾಪಕರ ದಿನಾಚರಣೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಉಮೇಶ ಗಡ್ಡದ,ಜಿ.ಕೆ.ಆದಪ್ಪಗೌಡರ, ವಿಶ್ವನಾಥ ಹಿರೇಗೌಡರ,ಶಂಕ್ರಣ್ಣ ಮುನವಳ್ಳಿ,ವಿ.ಪಿ.ಲಿಂಗನಗೌಡರ,ರಮೇಶ್ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.ಅಚ್ಚುತ್ ಲಿಮಯೇ ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ.ಹೊಟ್ಟಿಗೌಡರ ವಂದಿಸಿದರು.
ವರದಿ:: ವೇಣುಗೋಪಾಲ ಮದ್ಗುಣಿ
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ