May 9, 2024

Bhavana Tv

Its Your Channel

ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡದಂತೆ ಕರವೇ ಕಾರ್ಯಕರ್ತ ಫ್ರಾನ್ಸಿಸ್ ಡಿಸೋಜಾ ಅಧಿಕಾರಿಗಳಿಗೆ ಮನವಿ

ಕೊಡಗು: ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತ ಫ್ರಾನ್ಸಿಸ್ ಡಿಸೋಜಾ ರವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊನ್ನವಳ್ಳಿ ಎಂಬ ಗ್ರಾಮದಿಂದ ಈ ಹೊಳೆ ಹರಿದು ಕೂಗೆಕೋಡಿ ಮಾರ್ಗವಾಗಿ ಶುಂಠಿ ಮತ್ತು ಅಜ್ಜಳ್ಳಿ ಕೋಟೆ ಮತ್ತು ಬಸವನಕೊಪ್ಪ ಮತ್ತು ಶಾಂತವೇರಿ ಮಾರ್ಗವಾಗಿ ಶನಿವಾರ ಸಂತೆಯಿAದ ಗೊರೂರು ಡ್ಯಾಮಿಗೆ ಈ ನೀರು ಸೇರುತ್ತದೆ .ನಿನ್ನೆ ದಿನ ಈ ಹೊಳೆಗೆ ಕಾಫಿ ಪಲ್ಪಿಂಗ್ ನೀರನ್ನು ಬಿಟ್ಟಿರುತ್ತಾರೆ .ಈ ಹೊಳೆಯಲ್ಲಿ ವ್ಯವಸಾಯಕ್ಕೆ ಅತಿ ಹೆಚ್ಚು ನೀರು ಬಳಸುತ್ತಾರೆ ಮತ್ತು ಈ ಹೊಳೆಯಲ್ಲಿ ಅತಿಹೆಚ್ಚು ಜಲಚರ ಪ್ರಾಣಿಗಳು ಇದೆ ಮತ್ತು ಈ ಹೊಳೆಯ ನೀರನ್ನು ದನಕರುಗಳು ಕುಡಿಯುತ್ತವೆ .ಹಾಗಾಗಿ ಕಾಫಿ ಪಲ್ಪಿಂಗ್ ನೀರಿನಿಂದ ವ್ಯವಸಾಯಕ್ಕೂ ತೊಂದರೆಯಾಗುತ್ತಿದ್ದು ಮತ್ತು ದನಕರುಗಳು ಕುಡಿದರೆ ತುಂಬಾ ತೊಂದರೆ ಉಂಟಾಗುತ್ತದೆ ಹಾಗೂ ಜಲಚರ ಪ್ರಾಣಿಗಳು ಸತ್ತು ಹೋಗುತ್ತದೆ ಹಾಗಾಗಿ ಸಂಬAಧಪಟ್ಟ ಅಧಿಕಾರಿಗಳು ಈ ಹೊಳೆಗೆ ಯಾರು ಕಾಫಿ ಪಲ್ಪರ್ ನೀರು ಬಿಟ್ಟಿರುತ್ತಾರೆ ಅವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು .ಮತ್ತು ಹೊಳೆಯ ಬದಿಯಲ್ಲಿ ಯಾವ ಕಾಫಿ ಪಲ್ಪರ್ ಇದೆಯೋ ಇದನ್ನು ಪರಿಶೀಲನೆ ಮಾಡಬೇಕು ಎಂದು ಕರವೇ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ನವೀನ್ ಕುಮಾರ್ ಅವರು ಮಾತನಾಡಿ ಈ ಹೊಳೆಯಿಂದ ವ್ಯವಸಾಯಕ್ಕೆ ಅತಿ ಹೆಚ್ಚು ಉಪಯುಕ್ತವಾಗುತ್ತದೆ ಹಾಗೂ ಇದರಲ್ಲಿ ತುಂಬಾ ಜಲಚರ ಪ್ರಾಣಿ ಇದ್ದು ಮತ್ತು ಈ ನೀರನ್ನು ದನಕರುಗಳು ಹೆಚ್ಚು ಕುಡಿಯುತ್ತಿದ್ದು ಇದಕ್ಕೆಲ್ಲಾ ತೊಂದರೆಯಾಗುತ್ತಿದೆ ಹಾಗಾಗಿ ಹೊಳೆಗೆ ಯಾರೂ ಕಾಫಿ ಪಲ್ಪರ್ ನೀರನ್ನು ಬಿಟ್ಟಿರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.

error: