May 4, 2024

Bhavana Tv

Its Your Channel

ದಾವಣಗೆರೆ ಚಿತ್ರಸಂತೆ ಲೋಗೊ ಅನಾವರಣ

ವರದಿ: ವೇಣುಗೋಪಾಲ ಮದ್ಗುಣಿ

ದಾವಣಗೆರೆ, ನವೆಂಬರ್ ೨೬ : ಚಿತ್ರಸಂತೆ ಕಾರ್ಯಕ್ರಮ ಸರಣಿ ಆರಂಭವು ಲೋಗೊ ಅನಾವರಣದ ಮೂಲಕ ನವೆಂಬರ್ ೨೫, ಗುರುವಾರ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಚಾಲನೆಗೊಂಡಿತು. ಲೋಗೊ ಅನಾವರಣ ಮಾಡಿ ಮಾತನಾಡಿದ ದಾವಣಗೆರೆ ವಿವಿ ಉಪಕುಲಪತಿ ಡಾ. ಎಸ್.ವಿ.ಹಲಸೆ ” ಚಿತ್ರಸಂತೆ ಎಂಬುದು ದೃಶ್ಯಕಲಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದು ಕ್ಯಾಂಪಸ್ ಸಂದರ್ಶನ ಇದ್ದಂತೆ, ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಚಿತ್ರಕಲಾ ಮಹಾವಿದ್ಯಾಲಯದಲ್ಲೇ ದಾವಣಗೆರೆ ಚಿತ್ರಸಂತೆ ಹಮ್ಮಿಕೊಳ್ಳುವಂತೆಯೂ ಆಹ್ವಾನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ , ಮಾಜಿ ಮೇಯರ್, ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, “ಬೆಂಗಳೂರಿನ ಬಳಿಕ ಮೊದಲ ಬಾರಿಗೆ ದಾವಣಗೆರೆಯಲ್ಲಿ ಚಿತ್ರಸಂತೆ ಸಂಘಟಿಸಲಾಗುತ್ತಿದೆ. ಆ ಕಾರಣ ಲೋಗೊ ಅನಾವರಣವು ಇತಿಹಾಸಿಕ ದಿನ. ಸಾಕಷ್ಟು ಸಂಖ್ಯೆಯಲ್ಲಿ ಕಲಾವಿದರು ಇದ್ದರೂ
ಬೆರಳೆಣಿಕೆಯಷ್ಟು ಮಾತ್ರ ಕಲಾವಿದರು ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಸಂತೆಯು ಉತ್ತಮ ಅವಕಾಶ ಆಗಲಿದೆ. ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳ ಇಂಥದ್ದೊAದು ಉಪಕ್ರಮಕ್ಕೆ ಕೈ ಜೋಡಿಸಬೇಕು ಎಂದರು.
ಸAತೆಯ ಅಂಗವಾಗಿ ಅತ್ಯುತ್ತಮ ಕಲಾವಿದರಿಗೆ ಪ್ರಶಸ್ತಿ, ಅಚ್ಚುಕಟ್ಟು ಮಳಿಗೆಗೆ ಪ್ರಶಸ್ತಿ, ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಮಳಿಗೆಯನ್ನು ಕೊಡಲಾಗುತ್ತದೆ ಎಂದರು.
ಚಿತ್ರಕಲಾ ಪರಿಷತ್ತಿನ ಡಿ. ಶೇಷಾಚಲ ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರವಿ ಹುದ್ದಾರ್ ವಂದಿಸಿದರು. ದತ್ತಾತ್ರೇಯ ಭಟ್ ನಿರೂಪಿಸಿದರು.

ಜನವರಿ ೩೦ ರಂದು ಚಿತ್ರಸಂತೆ:-ಮದ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೊದಲ ಬಾರಿಗೆ ಚಿತ್ರಕಲಾ ಸಂತೆಯನ್ನು ೨೦೨೨ ಜನವರಿ ೩೦ ರಂದು ಭಾನುವಾರ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯ ಬಳಿಕ, ದೊಡ್ಡ ಪ್ರಮಾಣದಲ್ಲಿ ದಾವಣಗೆರೆಯಲ್ಲಿ ಸಂಘಟಿಸಲಾಗುತ್ತಿದೆ.
ಸರಕಾರಿ ದೃಶ್ಯಕಲಾ ಮಹಾವಿದ್ಯಾಲಯ ಇರುವ ಮಧ್ಯ ಕರ್ನಾಟಕದ ಕೇಂದ್ರದಲ್ಲಿ ಚಿತ್ರಕಲೆ, ಕೃತಿ ಮಾರಾಟದ ವಾತಾವರಣ ಸೃಷ್ಟಿಯು ನಮ್ಮ ಮೂಲ ಉದ್ದೇಶ. ಬೃಹತ್ ಸಂತೆಗೆ ರಾಜ್ಯದ ಎಲ್ಲೆಡೆಯಿಂದ ಕಲಾವಿದರು ಹಾಗೂ ಕಲಾ ಉಪಾಸಕರನ್ನು ಆಹ್ವಾನಿಸಲಾಗುತ್ತಿದೆ.
ದಾವಣಗೆರೆ ಚಿತ್ರಕಲಾ ಪರಿಷತ್ತು ಎಂಬ ಸಮಾನ ಮನಸ್ಕ ಚಿತ್ರಕಾಲಾವಿದರ ಸಂಘಟನೆ ಹಾಗೂ ದಾವಣಗೆರೆ ಚಿತ್ರಕಲಾ ಸಂತೆ ಸ್ವಾಗತ ಸಮಿತಿಗಳು ಈ ಬೃಹತ್ ಕಾರ್ಯಕ್ರಮವನ್ನು ಸಂಘಟಿಸುತ್ತಿವೆ ಎಂದು ದಾವಣಗೆರೆ ಚಿತ್ರಕಲಾ ಪರಿಷತ್ತಿನ ಡಿ. ಶೇಷಾಚಲ ಹೇಳಿದರು.

error: