April 20, 2024

Bhavana Tv

Its Your Channel

ಜನ ಪ್ರಜ್ಞಾವಂತರಾಗಿ ಪೋಲಿಸರ ಕೆಲಸ ಇನ್ನೂ ಹಗುರಾಗಿಸಬೇಕು-ಸಿದ್ದು ಯಾಪಲಪರವಿ

ಗದಗ ; ಗದುಗಿನ ಜನ ಪ್ರಜ್ಞಾವಂತರಾಗಿ ಪೋಲಿಸರ ಕೆಲಸ ಇನ್ನೂ ಹಗುರಾಗಿಸಬೇಕು.

ವೈದ್ಯಕೀಯ ಸಿಬ್ಬಂದಿ ನಂತರ ದೇಶದಲ್ಲಿ ಅತ್ಯಂತ ಕಠಿಣತೆ ಎದುರಿಸುತ್ತಿರುವ ಪೋಲಿಸರು ನಮ್ಮ ಹಾಗೆ ಮನುಷ್ಯರು ಎಂಬುದನ್ನು ರ‍್ಥ ಮಾಡಿಕೊಳ್ಳಬೇಕು.

ಕಳಸಾಪುರ ರಸ್ತೆಯ ಬದಿಯಲ್ಲಿ ಕಾಯಿಪಲ್ಯ ವ್ಯಾಪಾರ ಸ್ವಚ್ಛವಾದ ಪರಿಸರದಲ್ಲಿ ಇರಲಿ ಎಂಬ ಉದ್ದೇಶ ಇಟ್ಟುಕೊಂಡು ನಗರಸಭೆಯ ಸಿಬ್ಬಂದಿಗೆ ಪೂರಕವಾಗಿ ಕರ‍್ಯ ನರ‍್ವಹಿಸುತ್ತಿರುವುದು ಅಭಿನಂದನೀಯ.

ಯುವ ಉತ್ಸಾಹಿ IPS ಅಧಿಕಾರಿ ಗದಗ ಎಸ್.ಪಿ. ಯತೀಶ್.ಎನ್. ಅವರ ಮರ‍್ಗರ‍್ಶನದಲ್ಲಿ ಹತ್ತಾರು ಕೆಲಸಗಳನ್ನು ಪೋಲಿಸರು ಒಟ್ಟಾಗಿ ನರ‍್ವಹಿಸುವುದನ್ನು ನಾವು ಅಭಿನಂದಿಸಬೇಕು.

ಇಂದು ಮುಂಜಾನೆ ಭೇಟಿಯಾದ ಆSP ಎಸ್‌.ಕೆ.ಪ್ರಹ್ಲಾದ, ಅPI ಆರ್.ಎಫ್.ದೇಸಾಯಿ ಅವರ ಕ್ರಿಯಾಶೀತೆಯನ್ನು ಕಂಡು ಖುಷಿಯಾಯಿತು.

ಬಹಳ ದಿನಗಳ ನಂತರ ಕೊರೋನಾ ಸಂರ‍್ಭದಲ್ಲಿ ಹೊರ ಬಿದ್ದರೆ ಒದೆ ಬೀಳುತ್ತವೆ ಎಂಬ ಮಾತು ದೂರ ಮಾಡಿದ ನಗರದ ಪೋಲಿಸ್ ಮಿತ್ರರಿಗೆ ಧನ್ಯವಾದಗಳು.

ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೋಲಿಸರಿಗೆ ಮನೆಯಲ್ಲಿರುತ್ತೇವೆ ಎಂಬ ಭರವಸೆ ನೀಡಿ ಅವರ ಭಾರ ಕಡಿಮೆ ಮಾಡೋಣ.

ಅಗತ್ಯ ಕೆಲಸಗಳ ನೆಪದಲ್ಲಿ ಅನಗತ್ಯ ಓಡಾಟ ಸಲ್ಲದು.

ಜನ ರಸ್ತೆಗಿಳಿಯುವುದಿಲ್ಲ ಎಂಬ ಭರವಸೆ ಹೆಚ್ಚಿಸಿ,ಸಾಮಾಜಿಕ ಅಂತರ ಕಾಪಾಡಿಕೊಂಡು #ಲಾಕ್_ಡೌನ್ ಶಿಕ್ಷೆಯಿಂದ ಬೇಗ ಮುಕ್ತರಾಗೋಣ.

ಸಾಂಸ್ಕೃತಿಕ ಕಾರಣಗಳಿಂದ ನನಗೆ ಹತ್ತಿರವಾಗಿದ್ದ ಅಧಿಕಾರಿ ಗೆಳೆಯರನ್ನು ಕಂಡಾಗ ಖುಷಿಯಾಗಿ ಅಭಿನಂದಿಸಬೇಕೆನಿಸಿತು ಎಂದು ವಿಚಾರವಾದಿ,ಚಿಂತಕ,ಭಾಷಣಕಾರ, ಸಾಹಿತಿ ಶಿಕ್ಷಕ, ಸಿದ್ದು ಯಾಪಲಪರವಿ ಹೇಳಿದ್ದಾರೆ.

error: