June 8, 2023

Bhavana Tv

Its Your Channel

ಹಾವೇರಿಯಲ್ಲಿ ಮೊದಲ ಕೊರೊನಾ ಕೇಸ್ ಪತ್ತೆ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸವಣೂರು ಮೂಲದ 32 ವರ್ಷದ ವ್ಯಕ್ತಿಯಲ್ಲಿ  ಸೋಂಕು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದು, ಏ.29ರಂದು ಮುಂಬೈನಿಂದ ಲಾರಿ ಮೂಲಕ ಮೂವರು ಸವಣೂರಿಗೆ ಬಂದಿದ್ದರು. ಎಲ್ಲರೂ ಮನೆಗೆ ತೆರಳಿದ್ದರು.  ಬೇರೆ ರಾಜ್ಯದಿಂದ ಬಂದ ಹಿನ್ನಲೆಯಲ್ಲಿ  ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು.  ಓರ್ವ ವ್ಯಕ್ತಿಯ ವರದಿ ಬಂದಿದ್ದು, ಅವರಲ್ಲಿ ಕೊವಿಡ್ ಪಾಸಿಟಿವ್ ಬಂದಿದೆ.

ಇನ್ನು ಇಬ್ಬರ ವರದಿ ಬರಬೇಕಿದ್ದು, ಮೂವರ ಸಂಪರ್ಕದಲ್ಲಿದ್ದ ಒಟ್ಟು 14 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.  ಈ ಮೂಲಕ ಗ್ರೀನ್ ಝೋನ್ ನಲ್ಲಿದ್ದ ಹಾವೇರಿ ಜಿಲ್ಲೆ ಇದೀಗ ಆರೇಂಜ್ ಝೋನ್ ಪಟ್ಟಿಗೆ ಬರಲಿದೆ ಎಂದು ತಿಳಿಸಿದ್ದಾರೆ.

source:ಪ್ರಗತಿವಾಹಿನಿ ಸುದ್ದಿ

About Post Author

error: