May 19, 2024

Bhavana Tv

Its Your Channel

ಕರೋನ ಮಹಾಸ್ಪೋಟ : ರಾಜ್ಯದಲ್ಲಿಂದು 1839 ಕರೋನ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 1839 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 21,549 ಕ್ಕೆ ಏರಿಕೆಯಾಗಿದೆ.

ಇವತ್ತು ಒಂದೇ ದಿನ 439 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 9244 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 1839 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 1,172 ಕೇಸ್‌ಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿದ್ದು, ರಾಜಧಾನಿ ಅಪಾಯದತ್ತ ದಾಪುಗಾಲು ಇಡುತ್ತಿದೆ. ಅಷ್ಟೇ ಅಲ್ಲ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿಯೇ 24 ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದು 449 ಜನ ಸೋಂಕಿನಿAದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 42 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 21,549ಕ್ಕೆ ಏರಿದ್ದು, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದವರು 9244 ಮಂದಿ. ಮೃತಪಟ್ಟವರ ಸಂಖ್ಯೆ 335 ಮತ್ತು ಸಕ್ರಿಯ ಕರೊನಾ ಪ್ರಕರಣಗಳು 11,966.

ಬೆಂಗಳೂರು ನಗರ-1172, ದಕ್ಷಿಣ ಕನ್ನಡ-75, ಬಳ್ಳಾರಿ-73, ಬೀದರ್?-51, ಧಾರವಾಡ-45, ರಾಯಚೂರು-41, ಮೈಸೂರು-38, ಕಲಬುರಗಿ, ವಿಜಯಪುರ-ತಲಾ 37, ಮಂಡ್ಯ, ಉತ್ತರಕನ್ನಡ-ತಲಾ 35, ಶಿವಮೊಗ್ಗ-31, ಹಾವೇರಿ-28,
ಬೆಳಗಾವಿ-27, ಹಾಸನ-25, ಉಡುಪಿ-18, ಚಿಕ್ಕಬಳ್ಳಾಪುರ, ತುಮಕೂರು-ತಲಾ 12, ಬೆಂಗಳೂರು ಗ್ರಾಮಾಂತರ, ಕೋಲಾರ-ತಲಾ 11, ದಾವಣಗೆರೆ-7, ಚಾಮರಾಜನಗರ -5, ಗದಗ-4, ಕೊಪ್ಪಳ, ಚಿಕ್ಕಮಗಳೂರು-ತಲಾ 3
ರಾಮನಗರ-2, ಯಾದಗಿರಿ-1 ಪ್ರಕರಣ ದಾಖಲಾಗಿವೆ,

error: